ಪ್ರವೀಣ್‌ ನೆಟ್ಟಾರು ಸ್ಮರ​ಣಾರ್ಥ 14 ಮನೆ ನಿರ್ಮಾಣ ಯೋಜ​ನೆ

By Kannadaprabha News  |  First Published Nov 12, 2022, 3:41 AM IST
  • ಪ್ರವೀಣ್‌ ನೆಟ್ಟಾರು ಸ್ಮರ​ಣಾರ್ಥ 14 ಮನೆ ನಿರ್ಮಾಣ ಯೋಜ​ನೆ
  • ಅವಿ​ಭ​ಜಿತ ದ.ಕ. ಜಿಲ್ಲೆಯ ಬಡ ಕುಟುಂಬ​ಗ​ಳಿಗೆ ನೆರ​ವಿಗೆ ಬಿಲ್ಲವ ಯುವ ಬ್ರಿಗೇ​ಡ್‌ ನಿರ್ಧಾ​ರ

ಪುತ್ತೂ​ರು (ನ.12) ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಬಿಲ್ಲವ ಸಂಘದ ವತಿಯಿಂದ ರು. 45 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಪ್ರವೀಣ್‌ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಕಾರ್ಯಯೋಜನೆ ರೂಪಿಸಿರುವ ಹಿನ್ನಲೆಯಲ್ಲಿ ಆ ಹಣದಿಂದ ಅವಿಭಜಿತ ದ.ಕ. ಜಿಲ್ಲೆಯ 14 ಬಡ ಹಿಂದುಳಿದ ಕುಟುಂಬಗಳಿಗೆ ಪ್ರವೀಣ್‌ ನೆಟ್ಟಾರು ಸ್ಮರಣಾರ್ಥವಾಗಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಬಿಲ್ಲವ ಸಮುದಾಯದ ಮುಖಂಡ ಜಯಂತ ನಡುಬೈಲು ಮತ್ತು ಬಿಲ್ಲವ ಬ್ರಿಗೇಡ್‌ ಕೇಂದ್ರೀಯ ಮಂಡಳಿಯ ಸ್ಥಾಪಕ ಅವಿನಾಶ್‌ ಸುವರ್ಣ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿದ ಅವರು, ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಲ್ಲದ ಸಮಾಜದ ಮುಖಂಡರು ಮೃತರ ಕುಟುಂಬಕ್ಕೆ ರು.45 ಲಕ್ಷ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಜಬಾಬ್ದಾರಿ ವಹಿಸಿಕೊಂಡಿದ್ದರು. ಕಳೆದ ಆ.3ರಂದು ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿ ಮನೆ ನಿರ್ಮಾಣಕ್ಕೆ ಸಂಬಂಧಿಸಿ ರು.7 ಲಕ್ಷ ಮುಂಗಡ ಹಣವನ್ನು ಮತ್ತು ಮನೆ ನಿರ್ಮಾಣದ ವಿನ್ಯಾಸವನ್ನು ಮೃತ ಪ್ರವೀಣ್‌ ಪತ್ನಿ ನೂತನ ಅವರಿಗೆ ನೀಡಿ, ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುತ್ತಿಗೆದಾರ ಮೋಹನ್ದಾಸ್‌ ವಾಮಂಜೂರು ಅವರಿಗೆ ಹಸ್ತಾಂತರಿಸಿದ್ದರು. ಮೃತರ ಮರಣೋತ್ತರ ವಿಧಿವಿಧಾನಗಳ ನಂತರ ಅವರ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದು ಮನೆ ನಿರ್ಮಾಣ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿತ್ತು.

Tap to resize

Latest Videos

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌: ಎಸ್‌ಡಿಪಿಐ ಮುಖಂಡ ಸೇರಿ ಮೂವರ ಬಂಧನ

ಬಳಿಕದ ಬೆಳವಣಿಗೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿ ಅದಕ್ಕಾಗಿ ಭೂಮಿ ಪೂಜೆಯನ್ನು ಮಾಡಿರುತ್ತಾರೆ. ಇದರಿಂದಾಗಿ ಪ್ರವೀಣ್‌ ಕುಟುಂಬಕ್ಕೆ ಮನೆ ನಿರ್ಮಿಸಲು ಸಂಗ್ರಹಿಸಲಾದ ನಿಧಿಯಲ್ಲಿ ಅವರ ಕುಟುಂಬದ ಒಪ್ಪಿಗೆ ಪಡೆದು ಪ್ರವೀಣ್‌ ನೆಟ್ಟಾರು ಸ್ಮರಣಾರ್ಥವಾಗಿ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅವಿಭಜಿತ ಜಿಲ್ಲೆಯ ಒಟ್ಟು 14 ಹಿಂದುಳಿದ ವರ್ಗಗಳ ಕುಟುಂಬಗಳಿಗೆ ತಲಾ ರು. 5 ಲಕ್ಷ ಅಂದಾಜು ವೆಚ್ಚದಲ್ಲಿ ಬಿಲ್ಲವ ಯುವ ಬ್ರಿಗೇಡ್‌ ನೇತೃತ್ವದಲ್ಲಿ ಮನೆ ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದ​ರು.ಬಿಲ್ಲವ ಮುಖಂಡರಾದ ಉಲ್ಲಾಸ್‌ ಕೋಟ್ಯಾನ್‌, ಬಿಲ್ಲವ ಬ್ರಿಗೆಡ್‌ ಕೇಂದ್ರೀಯ ಮಂಡಳಿ ಕಾರ್ಯಾಧ್ಯಕ್ಷ ಕಿಶನ್‌ ಅಮೀನ್‌, ಗುತ್ತಿಗೆದಾರ ಮೋಹನದಾಸ್‌ ಬಂಗೇರ ವಾಮಂಜೂರು ಇದ್ದ​ರು.

click me!