ಕೊರೋನಾ 2ನೇ ಅಲೆ: ಪುರುಷರಲ್ಲಿಯೇ ಹೆಚ್ಚು ಸೋಂಕು..!

By Kannadaprabha News  |  First Published Mar 24, 2021, 7:07 AM IST

6 ದಿನದಲ್ಲಿ 3,364 ಪುರುಷರಿಗೆ ಕೊರೋನಾ ಸೋಂಕು| ನಿಯಮ ಉಲ್ಲಂಘನೆಯೇ ಸೋಂಕು ಹೆಚ್ಚಳಕ್ಕೆ ಕಾರಣ| ವಯಸ್ಸಿನ ಮಿತಿ ಇಲ್ಲದೆ ಪುರುಷರಿಗೆ ಒಕ್ಕರಿಸುತ್ತಿರುವ ಸೋಂಕು| ಕೊರೋನಾ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ| 


ಬೆಂಗಳೂರು(ಮಾ.24): ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಕಳೆದ ಆರು ದಿನಗಳಲ್ಲಿ ನಗರದಲ್ಲಿ ದಾಖಲಾದ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಪೈಕಿ 3,364 ಮಂದಿ ಪುರುಷರು ಹಾಗೂ 2,334 ಮಂದಿ ಮಹಿಳೆಯರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಬಿಬಿಎಂಪಿ ಕೋವಿಡ್‌ ವರದಿ ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ವರದಿಯಾಗುತ್ತಿರುವ ಕೊರೋನಾ ಸೋಂಕು ಪ್ರಕರಣಗಳ ಪೈಕಿ ಮಹಿಳೆರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ವಯಸ್ಸಿನ ಮಿತಿ ಇಲ್ಲದೆ ಪುರುಷರಿಗೆ ಸೋಂಕು ಬಾಧಿಸುತ್ತಿದೆ.

Latest Videos

undefined

ಕೊರೋನಾ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದರೂ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೋವಿಡ್‌ ನಿಯಮಾವಳಿ ಉಲ್ಲಂಘನೆ ಹೆಚ್ಚಾಗಿದೆ. ಮಾಸ್ಕ್‌ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಜರ್‌ ಬಳಕೆಗೆ ಒತ್ತು ನೀಡದಿರುವುದೇ ಸೋಂಕು ವ್ಯಾಪಕವಾಗಿ ಪಸರಿಸಲು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಆರ್ಭಟ: ಮತ್ತೆ ಕರುನಾಡನ್ನೇ ಬೆಚ್ಚಿಬೀಳಿಸಿದ ಮಹಾಮಾರಿ

ಇನ್ನು ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಲು ಕೊರೋನಾ ನಿಯಮಾವಳಿ ಉಲ್ಲಂಘನೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪಬ್‌, ಪಾರ್ಟಿ, ರೆಸ್ಟೋರೆಂಟ್‌, ಬಾರ್‌, ಮದುವೆ, ಸಭೆ, ಸಮಾರಂಭ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ಸಾಮಾನ್ಯವಾಗಿ ಪುರುಷರಲ್ಲಿನ ಅಸಡ್ಡೆ ಮನೋಭಾವ ಹಾಗೂ ಕೊರೋನಾ ಬಗೆಗಿನ ನಿರ್ಲಕ್ಷ್ಯ ಹೆಚ್ಚಾಗಿರುವುದರಿಂದ ಬೇಗ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮಹಾಮಾರಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

ದಿನ ಪುರುಷರು ಮಹಿಳೆಯರು

ಮಾ.17 435 331
ಮಾ.18 557 347
ಮಾ.19 600 407
ಮಾ.20 667 484
ಮಾ.21 606 401
ಮಾ.22 499 364
 

click me!