ಸಾಮಾನ್ಯವಾಗಿ ಬಸ್ನಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಏರಿದ ಕೋತಿಯೊಂದು ಬಸ್ನಿಂದ ಕೆಳಗಿಳಿಯದೆ ಕೆಲಕಾಲ ಪ್ರಯಾಣಿಸಿತು. ಇಂಥದ್ದೊಂದು ಕುತೂಹಲದ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಹಾವೇರಿ (ಅ.05): ಸಾಮಾನ್ಯವಾಗಿ ಬಸ್ನಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಏರಿದ ಕೋತಿಯೊಂದು ಬಸ್ನಿಂದ ಕೆಳಗಿಳಿಯದೆ ಕೆಲಕಾಲ ಪ್ರಯಾಣಿಸಿತು. ಇಂಥದ್ದೊಂದು ಕುತೂಹಲದ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ನಡೆಯಿತು. ಹಾವೇರಿ ಬಸ್ ನಿಲ್ದಾಣದಿಂದ ಹಿರೇಕೆರೂರು ಬಸ್ನಲ್ಲಿ ಕೋತಿ ಪ್ರಯಾಣಿಸಿ ಗಮನ ಸೆಳೆದಿದೆ.
30 ಕಿ.ಮೀ ಮೀಟರ್ ದೂರ ಪ್ರಯಾಣಿಸಿದ ಕೋತಿ: ಬಸ್ ಕಿಟಕಿ ಪಕ್ಕದಲ್ಲಿ ಕುಳಿತ ಕೋತಿ ಯಾರಿಗೂ ಭಯಪಡದೆ ಪ್ರಯಾಣ ಮಾಡಿದೆ. ಕೋತಿ ಕಂಡು ಖುಷಿಯಾದ ಪ್ರಯಾಣಿಕರು ಅದಕ್ಕೆ ಬಿಸ್ಕೆಟ್, ಹಣ್ಣು ಕೊಟ್ಟು ಸತ್ಕರಿಸಿದರು. ಹಾವೇರಿ ಬಸ್ ನಿಲ್ದಾಣದಿಂದ ಕೋತಿ ಹಿರೇಕೆರೂರು ತಾಲೂಕು ಹಂಸಭಾವಿವರೆಗೆ ಸುಮಾರು ಮೂವತ್ತು ಕಿಮೀ ಮೀಟರ್ ದೂರದವರೆಗೆ ಕೋತಿ ಪ್ರಯಾಣಿಸಿದ್ದು ವಿಶೇಷವಾಗಿತ್ತು. ಪ್ರಯಾಣಿಕ ಗಣೇಶ ನೂಲಗೇರಿ ಈ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
undefined
ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ: ಸಿ.ಟಿ.ರವಿ
ತಲಕಾಡಿನಲ್ಲಿ ಕೋತಿಗಳ ಕಾಟದಿಂದ ಜನಜೀವನ ಹೈರಾಣು: ತಲಕಾಡು ಗ್ರಾಪಂ ವ್ಯಾಪ್ತಿ ಸೇರಿದಂತೆ ಇಲ್ಲಿನ ಮುಖ್ಯವೃತ್ತದ ಬಳಿನಿತ್ಯ ಕೋತಿಗಳ ಕಾಟದಿಂದ ಜನ ಜೀವನ ಹೈರಾಣಾಗಿಸಿದೆ. ಬೇರೆ ಬೇರೆ ಊರುಗಳಿಂದ ಕೋತಿಗಳ ಹಿಂಡನ್ನು ಚೀಲಗಳಲ್ಲಿ ತುಂಬಿಕೊಂಡು ರಾತ್ರೋ ರಾತ್ರಿ ಕದ್ದು ಮುಚ್ಚಿ ತಲಕಾಡಿಗೆ ತಂದು ಬಿಡಲಾಗುತ್ತಿದೆ. ಇದರಿಂದ ದಿನೇ ದಿನೇ ಕೋತಿಗಳ ಹಿಂಡು ಹೆಚ್ಚಾಗಿ ಆಹಾರಕ್ಕಾಗಿ ನಿವಾಸಿಗಳಿಗೆ ನೀಡುವ ಉಪಟಳ ಹೇಳತೀರದಾಗಿದೆ.
ಕೋತಿಗಳ ಕಾಟದಿಂದ ಪಾರು ಮಾಡುವಂತೆ ಸ್ಥಳೀಯ ಗ್ರಾಪಂ ಹಾಗೂ ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಜನ ದೂರಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗಂತೂ ತಲಕಾಡಿನ ಮುಖ್ಯ ವೃತ್ತದಲ್ಲಿ ಬೀಡು ಬಿಟ್ಟಿರುವ ಗಡವ ಹಾಗು ತಾಯಿ ಮರಿಗಳ ಕೋತಿಗಳ ಗುಂಪು ಹಣ್ಣಿನ ಅಂಗಡಿ, ಬೇಕರಿ, ದಿನಸಿ ಅಂಗಡಿಗಳಲ್ಲಿ, ಹಗಲಲ್ಲಿ ಬಾಗಿಲು ತೆರೆದಿರುವ ಮನೆಗಳಲ್ಲಿ ತಿನ್ನುವ ಆಹಾರ ದೋಚುತ್ತಿವೆ. ಕೈಯಲ್ಲಿ ಕೋಲಿಲ್ಲದೆ ಬೆದರಿಸಿದರೆ ಮೈಮೇಲೆ ಬೀಳುವಂತೆ ಹೆದರಿಸುತ್ತವೆ.
Bitcoin ಹಗರಣಕ್ಕೆ ಮತ್ತೊಂದು ಟ್ವಿಸ್ಟ್: ಭೂಗತವಾಗಿದ್ದ ನಟೋರಿಯಸ್ ಹ್ಯಾಕರ್ ಅರೆಸ್ಟ್!
ಕೋತಿಗಳ ಕಾಟ ತಾಳಲಾರದೆ ನಿವಾಸಿಗಳು ಹಗಲಿನಲ್ಲಿ ಮನೆಯ ಕದ ತೆರೆಯದಂತಹ ಪರಿಸ್ಥಿತಿ ತಂದೊಡ್ಡಿವೆ. ಮನೆಯ ಅಂಗಳ ಅಥವಾ ತಾರಸಿ ಮೇಲೆ ಒಣಗಲು ಹಾಕುವ ಬಟ್ಟೆಗಳನ್ನು ಎಳೆದು ನೆಲಕ್ಕೆ ಹಾಕುತ್ತಿವೆ. ಮನೆ ಅಂಗಳದಿ ಬೆಳೆದ ಹಣ್ಣು ತರಕಾರಿ ಎಳೆನೀರು ಕೋತಿಗಳ ಪಾಲಾಗುತ್ತಿದ್ದು, ಕೋತಿಗಳ ಕಾಟದಿಂದ ಹಿತ್ತಲಲ್ಲಿ ಬೆಳೆಯುತ್ತಿದ್ದ ತರಕಾರಿ ತೋಟಗಾರಿಕೆ ಬೆಳೆಯನ್ನೇ ನೊಂದ ನಿವಾಸಿಗಳು ಕೈಬಿಟ್ಟಿದ್ದಾರೆ.ಮನೆ ಹೆಂಚು ತೆರದು ಒಳನುಸುಳುವ ಕೋತಿಗಳ ಕಾಟಕ್ಕೆ ಬೆದರಿದ ನಿವಾಸಿಗಳು ಬೇಸಿಗೆಯಲ್ಲಿ ತಂಪು ನೀಡುವ ನಾಡಹೆಂಚು ಅಥವಾ ಮಂಗಳೂರು ಹೆಂಚಿನ ಮನೆ ಮೇಲ್ಛಾವಣಿ ತೆರವು ಮಾಡಿಸಿ, ಬೇಸಿಗೆ ಬಿಸಿಲಿನಲ್ಲಿ ಧಗೆ ಹೆಚ್ಚಿಸುವ ಕಲ್ನಾರು ಶೀಟು ಅಳವಡಿಕೆಗೆ ಅನಿವಾರ್ಯವಾಗಿ ಮುಂದಾಗಿದ್ದಾರೆ.