ಕೃಷಿ ಸಮಸ್ಯೆ: ಮಳೆಯಿಂದ ಮಾರುಕಟ್ಟೆವರೆಗೆ

By Kannadaprabha News  |  First Published Oct 5, 2023, 9:27 AM IST

ಪ್ರಕೃತಿ ಜಿಲ್ಲೆಯ ಬದುಕಿನೊಂದಿಗೆ ನಿರಂತರ ಕಣ್ಣಾಮುಚ್ಚಾಲೆ ಆಡುತ್ತಲೇ ಬಂದಿರುವುದರಿಂದ ಇಲ್ಲಿಯ ಜನ ಇದರ ಆಟಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡುವುದು ಈ ವರ್ಷವೂ ಮುಂದುವರೆದಿದೆ.


 ಕೋಲಾರ :  ಪ್ರಕೃತಿ ಜಿಲ್ಲೆಯ ಬದುಕಿನೊಂದಿಗೆ ನಿರಂತರ ಕಣ್ಣಾಮುಚ್ಚಾಲೆ ಆಡುತ್ತಲೇ ಬಂದಿರುವುದರಿಂದ ಇಲ್ಲಿಯ ಜನ ಇದರ ಆಟಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡುವುದು ಈ ವರ್ಷವೂ ಮುಂದುವರೆದಿದೆ.

ನಿರಂತರವಾಗಿ ಏರುತ್ತಿರುವ ನಿತ್ಯ ವಸ್ತುಗಳ ಬೆಲೆ ಸಾಮಾನ್ಯ ಜನರ ಆರ್ಥಿಕ ಹೊಂದಾಣಿಕೆಯ ಲೆಕ್ಕಾಚಾರವನ್ನು ತಲೆಕೆಳಗೂ ಮಾಡುತ್ತಿದೆ. ಇದರ ಜೊತೆಗೆ ಕೃಷಿ ವಲಯದಲ್ಲಿಯೂ ಈ ತಲೆಕೆಳಗೂ ಆಟ ಪರಿಣಾಮ ಬೀರುತ್ತಿದೆ. ಈ ಪರಿಣಾಮದಿಂದಾಗಿ ಕೃಷಿ ಎಂದರೆ ತಲೆನೋವು ಎಂಬಂತಾಗಿದೆ.

Latest Videos

undefined

ಮಳೆಗಾಲದ ಚಿತ್ರಣವೇ ಬದಲು

ಮಳೆಯಿಂದ ಪ್ರಾರಂಭವಾಗುವ ಕೃಷಿ ಸಮಸ್ಯೆಗಳು ಮಾರುಕಟ್ಟೆಯವರೆಗೆ ಮುಂದುವರೆಯುತ್ತಿವೆ. ಸುಮಾರು ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ತನ್ನ ಆಗಮನ ನಿರ್ಗಮನದ ಕಾಲವನ್ನು ಬದಲಾಯಿಸಿಕೊಂಡಿದೆ. ಮುಂಗಾರು ಮಳೆ ಹಿಂಗಾರಿಗೆ ಕೆಲ ದಿನಗಳಿದೆ ಎನ್ನುವಾಗ ಬಂದಿರುವುದೂ ಉಂಟು. ಹಿಂಗಾರು ಬರದೆ ಇರುವುದು ಉಂಟು.

ಇದು ಮಳೆಯ ವಿಷಯವಾದರೆ ಬಂದ ಮಳೆಗೆ ಏನೂ ಒಂದಿಷ್ಟು ಬಿತ್ತನೆ ಮಾಡಿಕೊಂಡರು ಕಳೆ ತೆಗೆಯುವ ಕೆಲಸದಿಂದ ಹಿಡಿದು ಕೊಯ್ಲಿನವರೆಗೆ ಕೃಷಿ ಕಾರ್ಮಿಕರ ಕೊರತೆ ಕಾಡುತ್ತದೆ. ಹಿಂದಿನಂತೆ ಮನೆಗಳಲ್ಲಿ ಸ್ವಂತ ಕೆಲಸಗಾರರು ಇರುವುದು ಅಪರೂಪವಾಗುತ್ತಿರುವುದು ಈ ಸಮಸ್ಯೆಗೆ ಇರುವ ಇದೊಂದು ಆಯಾಮ.

ಕೂಲಿಕಾರರ ಕೊರತೆ ಸಮಸ್ಯೆ

ಬೇಸಾಯದ ಕೆಲಸಕ್ಕಾಗಿ ಬರುವ ಕೂಲಿಕಾರರ ಬೇಡಿಕೆಗಳು ಬದಲಾಗಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ. ಕೂಲಿಯ ದರವು ಏರುತ್ತಿದೆ. ಫಸಲು ಬಂದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದು ಅನುಮಾನ. ಆದರೂ ರೈತರು ಲಾಭನಷ್ಟಗಳು ತೂಗುಯ್ಯಾಲೆಯಲ್ಲಿಯೇ ಬೇಸಾಯವನ್ನು ಮುಂದುವರಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಈ ವರ್ಷ ಪ್ರಾರಂಭಿಕ ಮಳೆಗಳು ತೆಳುವಾಗಿ ಬಿದ್ದವು, ತಕ್ಷಣಕ್ಕೆ ಬಿತ್ತುವ ಅನುಕುಲವಿದ್ದವರು ಬಿತ್ತನೆ ಮಾಡಿದರೂ ಕೊಂಚ ಒಣಗಿದರೂ ತಡವಾಗಿ ಬಂದ ನೆನೆ ಮಳೆಗೆ ಪಚ್ಚೆಪೈರು ಜೀವಂತಿಕೆಯನ್ನು ಪಡೆದವು. ಅದರಲ್ಲಿ ರಾಗಿ ಬೆಳೆ ಪ್ರಮುಖವಾದುದು, ಹಿಂದಿನ ಬಿತ್ತನೆಗಳು ಮೊಳಕೆ ಹಸಿಗಟ್ಟುವ ವೇಳೆಗೆ ಮಳೆಯ ಕೊರತೆಯಿಂದಾಗಿ ಬಾಡಿಕೊಂಡವು, ಕಳೆದ ವಾರ ಸುರಿದಷ್ಟು ಮಳೆಗೆ ಜೀವ ಪಡೆದುಕೊಂಡಿವೆ.

ಲಾಭದ ನಿರೀಕ್ಷೆಯಲ್ಲಿ ಅವರೆ

ಡಿಸೆಂಬರ್ ವೇಳೆಗೆ ಅವರೇ ಹೂವು ಬಿಡಲಿದೆ, ಹೆಚ್ಚು ಅವರೇ ಬೆಳೆಯುವ ತಾಲೂಕುಗಳಾದ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ರೈತರು ಉತ್ತಮ ಬೆಳೆ ಮತ್ತು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಭಾಗದ ಅವರೆ ಸೊಗಡು ಚೆನ್ನಾಗಿದ್ದು, ಅವರೆ ಪ್ರಿಯರನ್ನು ಸೆಳೆಯುತ್ತದೆ.

click me!