ಅಂತಿಮ ದರ್ಶನಕ್ಕೂ ಬಂದಿದ್ದ ವಾನರ ಅಸ್ಥಿ ವಿಸರ್ಜನಾ ಕಾರ್ಯದಲ್ಲೂ ಭಾಗಿ..!

By Kannadaprabha NewsFirst Published Jul 15, 2021, 1:37 PM IST
Highlights

* ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪ್‌ನಲ್ಲಿ ನಡೆದ ಘಟನೆ
* ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಟುಂಬಸ್ಥರಲ್ಲಿ ಆಶ್ಚರ್ಯ ಮೂಡಿಸಿದ ಕೋತಿ
* ಅಂತಿಮ ದರ್ಶನಕ್ಕೆ ಆಗಮಿಸಿದ್ದ ಮಂಗ
 

ಕಂಪ್ಲಿ(ಜು.15):  ರಾದ ವ್ಯಕ್ತಿಯೊಬ್ಬರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ವಾನರವೊಂದು 9ನೇ ದಿನದ ಅಸ್ಥಿ ವಿಸರ್ಜನೆ ಕಾರ್ಯಕ್ಕೂ ತುಂಗಾಭದ್ರಾ ನದಿ ತೀರಕ್ಕೆ ಆಗಮಿಸುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.

ತಾಲೂಕಿನ ಬಸವೇಶ್ವರ ಕ್ಯಾಂಪ್‌ನಲ್ಲಿ ಜೂ. 30ರಂದು ವಿಶ್ವನಾಥರಾಜು(70) ನಿಧನರಾಗಿದ್ದರು. ಅವರ ಪಾರ್ಥಿವ ಶರೀರದ ಮುಂದೆ ಕುಟುಂಬದ ಸದಸ್ಯರು ದುಃಖಿತರಾಗಿ ಕುಳಿತಿರುವಾಗಲೇ ಕರಿ ಕೋತಿಯೊಂದು ಆಗಮಿಸಿ ಶವದ ಮೇಲೆ ಹಾಕಿದ್ದ ವಸ್ತ್ರವನ್ನು ತೆರೆದು ಮುತ್ತಿಟ್ಟು ಮೃತರ ತಲೆಯ ಮೇಲೆ ತನ್ನ ಕೈಇಟ್ಟು ಬಳಿಕ ತೆರಳಿತ್ತು.

ತಿಂಗಳ ಬೆಸ್ಟ್ ಎಂಪ್ಲಾಯ್..! ಸೂಪರಾಗಿ ಪಾತ್ರೆ ತೊಳೆಯುತ್ತೆ ಈ ಕೋತಿ

9ನೇ ದಿನ ಮೃತರ ಕಾರ್ಯಕ್ರಮವನ್ನು ಕುಟುಂಬಸ್ಥರು ತುಂಗಾಭದ್ರಾ ನದಿ ತೀರದಲ್ಲಿ ನೆರವೇರಿಸುತ್ತಿದ್ದರು. ಅಲ್ಲಿಗೆ ಬಂದ ವಾನರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕುಟುಂಬಸ್ಥರು ನೀಡಿದ ಆಹಾರ ಸೇವಿಸಿ ನಿಗರ್ಮಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
 

click me!