ತಂತ್ರಜ್ಞಾನ ಬಳಸಿ ಸೋಂಕಿತರ ಮೇಲೆ ಕಣ್ಗಾವಲು: ಡಾ. ಸುಧಾಕರ್‌

By Kannadaprabha News  |  First Published Jun 4, 2020, 8:05 AM IST

 ತಂತ್ರಜ್ಞಾನವನ್ನು ಬಳಸಿಕೊಂಡು ಕೊರೋನಾ ಸೋಂಕಿತರ ಮೇಲೆ ಕಣ್ಗಾವಲು ಇರಿಸಲಾಗುವುದು. ಕಳೆದ ನಾಲ್ಕು ತಿಂಗಳುಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ವೃದ್ಧಿಸಲಾಗಿದೆ. ಕೋವಿಡ್‌ಗೆ ಹೆದರದೆ, ಆತಂಕ ಪಡದೆ ಜನತೆ ಬದುಕು ನಿರ್ವಹಿಸುವಂತೆ ಮಾಡುವುದು ಸರ್ಕಾರದ ಗುರಿ. ಆ ದಿಸೆಯಲ್ಲಿ ಜನತೆ ಕೂಡಾ ಸರ್ಕಾರದೊಂದಿಗೆ ಸಹಕರಿಸ ಬೇಕು ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಹೇಳಿದ್ದಾರೆ.


ಮಂಗಳೂರು(ಜೂ.04): ತಂತ್ರಜ್ಞಾನವನ್ನು ಬಳಸಿಕೊಂಡು ಕೊರೋನಾ ಸೋಂಕಿತರ ಮೇಲೆ ಕಣ್ಗಾವಲು ಇರಿಸಲಾಗುವುದು. ಕಳೆದ ನಾಲ್ಕು ತಿಂಗಳುಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ವೃದ್ಧಿಸಲಾಗಿದೆ.

ಕೋವಿಡ್‌ಗೆ ಹೆದರದೆ, ಆತಂಕ ಪಡದೆ ಜನತೆ ಬದುಕು ನಿರ್ವಹಿಸುವಂತೆ ಮಾಡುವುದು ಸರ್ಕಾರದ ಗುರಿ. ಆ ದಿಸೆಯಲ್ಲಿ ಜನತೆ ಕೂಡಾ ಸರ್ಕಾರದೊಂದಿಗೆ ಸಹಕರಿಸ ಬೇಕು ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಹೇಳಿದ್ದಾರೆ.

Latest Videos

undefined

'ಬಿಜೆಪಿ ಶಾಸಕರೇ ಬಂಡಾಯ ಎದ್ದಿದ್ದಾರೆ'

ಅವರು ಇಲ್ಲಿನ ಜಿಲ್ಲಾ​ಧಿಕಾರಿಯಲ್ಲಿ ಕಚೇರಿಯಲ್ಲಿ ಕೋವಿಡ್‌-19 ಸೋಂಕು ಕುರಿತಾಗಿ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಸೋಂಕು ವರದಿಯಾದ ಆರಂಭದ ದಿನಗಳಲ್ಲಿ ರಾಜ್ಯದಲ್ಲಿ ಕೇವಲ ಎರಡು ಪ್ರಯೋಗಾಲಯಗಳಿದ್ದವು. ಈಗ ಅವುಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ವೈದ್ಯಕೀಯ ಕಾಲೇಜುಗಳು ಕೋವಿಡ್‌-19 ಸೋಂಕು ಪರೀಕ್ಷಾ ಪ್ರಯೋಗಾಲಯಗಳನ್ನು ಕಡ್ಡಾಯವಾಗಿ ಆರಂಭಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಕಾಲೇಜುಗಳು ಲ್ಯಾಬ್‌ಗಳನ್ನು ತೆರೆದಿವೆ. ನಾಲ್ಕು ಕಾಲೇಜುಗಳು ಮುಂದಿನ ಒಂದು ವಾರದೊಳಗೆ ಪ್ರಯೋಗಾಲಯ ಆರಂಭಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಇಎನ್‌ಟಿ ಮತ್ತು ದಂತ ವೈದ್ಯರು ಸೇವೆ ಆರಂಭಿಸಲು ಸರ್ಕಾರದಿಂದ ಮಾರ್ಗಸೂಚಿಯನ್ನು ನೀಡಲಾಗಿದೆ. ಅವರು ಮಾರ್ಗಸೂಚಿಗಳನ್ನು ಅನುಸರಿಸಿ ಸೇವೆ ಆರಂಭಿಸಬೇಕು. ಮಿಕ್ಕ ವಿಷಯಗಳ ತಜ್ಞರು ಅಗತ್ಯವಾಗಿ ತಮ್ಮ ಸೇವೆಗಳನ್ನು ಆರಂಭಿಸಬೇಕು. ಆಸ್ಪತ್ರೆಗಳು, ಕ್ಲಿನಿಕ್‌ಗಳನ್ನು ತೆರೆದು ರೋಗಿಗಳಿಗೆ ಸೇವೆ ನೀಡಬೇಕು ಎಂದು ಸಚಿವ ಡಾ. ಸುಧಾಕರ್‌ ತಿಳಿಸಿದರು.

ಮೇಲ್ಸೇತುವೆಗಳಲ್ಲಿ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರು ಪ್ರತ್ಯಕ್ಷ!

ದಕ್ಷಿಣ ಕನ್ನಡ ಜಿಲ್ಲೆ ಕೋವಿಡ್‌-19ರ ಸೋಂಕು ತಡೆಗಟ್ಟುವಲ್ಲಿ ಉತ್ತಮವಾಗಿ ಕೆಲಸ ಮಾಡಿದ ಜಿಲ್ಲೆಗಳ ಸಾಲಿನಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್‌, ರಾಜೇಶ್‌ ನಾಯಕ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್‌ ದಿವಾಕರ್‌, ಮೀನಾಕ್ಷಿ ಶಾಂತಿಗೋಡು, ಜಿಲ್ಲಾ​ಧಿಕಾರಿ ಸಿಂಧು ಬಿ. ರೂಪೇಶ್‌, ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಮತ್ತು ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್‌ ಇದ್ದರು.

click me!