ಮೇಲ್ಸೇತುವೆಗಳಲ್ಲಿ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರು ಪ್ರತ್ಯಕ್ಷ!

By Kannadaprabha News  |  First Published Jun 4, 2020, 7:51 AM IST

ಮಂಗಳೂರಿನಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರನ್ನು ಎರಡು ಮೇಲ್ಸೇತುವೆಗೆ ಇಡುವ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಮಾಡಿವೆ.


ಮಂಗಳೂರು(ಜೂ.04): ಮಂಗಳೂರಿನಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್‌ ಹೆಸರಿನ ಜೊತೆಗೆ ರಾಣಿ ಅಬ್ಬಕ್ಕ ಹೆಸರನ್ನು ಎರಡು ಮೇಲ್ಸೇತುವೆಗೆ ಇಡುವ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಮಾಡಿವೆ.

ಮಂಗಳವಾರ ರಾತ್ರಿ ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಸಾವರ್ಕರ್‌ ಹೆಸರಿನ ಬ್ಯಾನರನ್ನು ಬಜರಂಗದಳ ಹೆಸರಿನಲ್ಲಿ ಅಳವಡಿಸಲಾಗಿತ್ತು. ಇದು ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ರಾತ್ರಿಯೇ ಹಠಾತ್ತನೆ ಅದನ್ನು ತೆರವುಗೊಳಿಸಲಾಗಿತ್ತು.

Tap to resize

Latest Videos

undefined

ಧಾರವಾಡ: ರೈತರಿಗೆ ವಿಕಾಸ ವರ್ಷ ವಿಶೇಷ ಕೃಷಿ ಸಾಲ

ಬುಧವಾರ ಮತ್ತೆ ರಾತ್ರಿ ವೇಳೆ ಅದೇ ಬ್ಯಾನರ್‌ನ್ನು ಮೇಲ್ಸೇತುವೆಯಲ್ಲಿ ಅಳವಡಿಸಲಾಗಿದೆ. ಅಲ್ಲದೆ ಮೇಲ್ಸೇತುವೆಯ ತಡೆಗೋಡೆಯಲ್ಲಿ ವೀರ ಸಾವರ್ಕರ್‌ ಮೇಲ್ಸೇತುವೆ ಬಜರಂಗದಳ ಎಂದು ಬರೆಯಲಾಗಿದೆ. ಇದೇ ಮಾದರಿಯಲ್ಲಿ ತೊಕ್ಕೊಟ್ಟಿನ ಮೇಲ್ಸೇತುವೆಯಲ್ಲಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಹೆಸರನ್ನು ಇರಿಸಲಾಗಿದ್ದು, ಆಕೆಯ ಚಿತ್ರದ ಬ್ಯಾನರ್‌ ಹಾಕಲಾಗಿದೆ. ಅಲ್ಲಿಯೂ ಬಜರಂಗದಳ ಎಂದು ಬರೆಯಲಾಗಿದೆ.

ಬೆಂಗಳೂರಿನಲ್ಲಿ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಇಡಬೇಕು ಎಂಬ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆ ಮಂಗಳೂರಿನಲ್ಲೂ ಈಗ ಅದೇ ಹೆಸರಿನಲ್ಲಿ ವಿವಾದಕ್ಕೆ ತಿರುಗಿದೆ. ಶಾಸಕ ಯು.ಟಿ.ಖಾದರ್‌ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ, ಪಂಪ್‌ವೆಲ್‌ ವೃತ್ತಕ್ಕೆ ಮಹಾವೀರ ವೃತ್ತ ಎಂಬ ಹೆಸರಿದ್ದು, ಅದನ್ನು ಸಾವರ್ಕರ್‌ ಹೆಸರಿಗೆ ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಸರ್ಗ ಚಂಡ ಮಾರುತ: ಕರಾವಳಿಯಲ್ಲಿ ಆರೆಂಜ್‌ ಅಲರ್ಟ್

ಆದರೆ ಇದನ್ನು ನಿರಾಕರಿಸಿರುವ ಹಿಂದೂ ಸಂಘಟನೆಗಳು, ವೃತ್ತದ ಹೆಸರನ್ನು ಬದಲಾಯಿಸಿಲ್ಲ, ಮೇಲ್ಸೇತುವೆಗೆ ಮಾತ್ರ ಹೆಸರು ಇರಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿವೆ. ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಅಬ್ಬಕ್ಕ ಹೆಸರನ್ನು ಬರೆದಿರುವುದನ್ನು ಬಜರಂಗದಳ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡಿದೆ.

click me!