ಬ್ಯಾಂಕಲ್ಲಿಟ್ಟ ಸೇಫ್ ಹಣ ಸೈಲೆಂಟಾಗಿ ಟ್ರಾನ್ಸ್‌ಫರ್?

By Web DeskFirst Published Aug 13, 2018, 12:51 PM IST
Highlights

ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕಲ್ಲಿ ಅಲ್ಪ ಸ್ವಲ್ಪ ಹಣ ಡೆಪಾಸಿಟ್ ಮಾಡಿಕೊಂಡು ನೆಮ್ಮದಿಯಾಗಿದ್ದರ ರೈತರು, ಅನಕ್ಷರಸ್ಥರು ಹಾಗೂ ವೃದ್ಧರನ್ನೇ ವಂಚಿಸಿದ್ದಾನೆ ಬ್ಯಾಂಕ್ ಗ್ರಾಹಕ. ಲಕ್ಷ ಲಕ್ಷಗಟ್ಟಲೆ ಹಣವನ್ನು ತನ್ನ ಅಕೌಂಟ್‌ಗೆ ಟ್ರಾನ್ಸ‌ಫರ್ ಮಾಡಿಕೊಂಡು, ಎಸ್ಕೇಪ್ ಆಗಿದ್ದಾನೆ ಈ ಬ್ಯಾಂಕ್ ಕ್ಲರ್ಕ್.

ತುಮಕೂರು: ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಲ್ಲಿ ಇಡುತ್ತೇವೆ. 'ಅಯ್ಯೋ ನಾನು ಆನ್‌ಲೈನ್ ಬ್ಯಾಂಕಿಂಗ್ ಏನೂ ಮಾಡೋಲ್ಲಪ್ಪ, ಸೇಫಲ್ಲ,' ಎಂದು ಬ್ಯಾಂಕಿನಲ್ಲಿಟ್ಟು ಹಣವೂ ಮಂಗಮಾವವಾಗುವ ಛಾನ್ಸ್ ಇದೆ!

ಹೌದು. ಬ್ಯಾಂಕಿನಲ್ಲಿ ಇಟ್ಟ ಹಣವೂ ಟ್ರಾನ್ಸ್‌ಫರ್ ಆಗುತ್ತೆ. ಇಂಥದ್ದೊಂದು ಪ್ರಕರಣ ತುಮಕೂರು ಜಿಲ್ಲೆಯ ಹೊಳವನಹಳ್ಳಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ.

ಬ್ಯಾಂಕ್‌ನಲ್ಲಿ ಹಣ ಸೇಫ್ ಎಂದುಕೊಂಡಿದ್ದ ಗ್ರಾಹಕ, ಹಣ ವಿಥ್ ಡ್ರಾ ಆಗಿದ್ದು ನೋಡಿ ಶಾಕ್. ಬ್ಯಾಂಕ್ ಗುಮಾಸ್ತನೇ ವೃದ್ಧರು, ರೈತರು ಹಾಗೂ ಅನಕ್ಷರಸ್ತ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಲಕ್ಷ ಲಕ್ಷ ಹಣವನ್ನು ಲೂಟಿ ಮಾಡಿ, ಎಸ್ಕೇಪ್ ಆಗಿದ್ದಾನೆ. 

ಹಣ ಡ್ರಾ ಮಾಡಿಕೊಡುವುದಾಗಿ ಪಾಸ್ ಬುಕ್ ಪಡೆಯುತ್ತಿದ್ದು ಚಂದ್ರಶೇಖರ್ ಎಂಬ ಕ್ಲರ್ಕ್, ಗ್ರಾಹಕರ ಖಾತೆಯಿಂದ ತಮ್ಮ ಖಾತೆಗೆ ಹಣ ಟ್ರಾನ್ಸ್‌ಫರ್ ಮಾಡಿಕೊಂಡು ವಂಚಿಸಿದ್ದಾನೆ. ಪಾಸ್ ಬುಕ್ ಎಂಟ್ರಿ ಮಾಡಿಕೊಡಲೂ ಇವನು ಸತಾಯಿಸುತ್ತಿದ್ದ. 

ಕೆಲವರ  ಬಳಿಯಂತೂ ಎರಡೆರೆಡು ಬಾರಿ ಹೆಬ್ಬೆಟ್ಟು ಒತ್ತಿಸಿಕೊಂಡು, ವಂಚಿಸಿದ್ದಾನೆ ಈ ಖತರ್ನಾಕ್ ಗುಮಾಸ್ತ. ಇದೀಗ ಈ ಗುಮಾಸ್ತ ವಿರುದ್ಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್‌ನ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

click me!