ಕುತೂಹಲ ಕೆರಳಿಸಿದ ಕಿರಣ್‌ ಮಜುಂದಾರ್‌- ಮೋಹನ್‌ ಭಾಗವತ್‌ ಭೇಟಿ..!

Kannadaprabha News   | Asianet News
Published : Mar 04, 2021, 01:30 PM ISTUpdated : Mar 04, 2021, 01:35 PM IST
ಕುತೂಹಲ ಕೆರಳಿಸಿದ ಕಿರಣ್‌ ಮಜುಂದಾರ್‌- ಮೋಹನ್‌ ಭಾಗವತ್‌ ಭೇಟಿ..!

ಸಾರಾಂಶ

ಕಿರಣ್‌ ಮಜುಂದಾರ್‌ ಷಾ ಮನೆಗೆ ಮೋಹನ್‌ ಭಾಗವತ್| ಮಜುಂದಾರ್‌ ಜತೆ ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿದ ಭಾಗವತ್| ಯಾವ ಕಾರಣಕ್ಕೆ ಭೇಟಿ ನೀಡಿದ್ದರು ಎಂಬುದು ತಿಳಿದುಬಂದಿಲ್ಲ| ಕೋವಿಡ್‌ ಲಸಿಕೆಯ ದರದ ಬಗ್ಗೆ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ಕಿರಣ್‌ ಮಜುಂದಾರ್| 

ಆನೇಕಲ್(ಮಾ.04):  ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬಯೋಕಾನ್‌ ಮುಖ್ಯಸ್ಥೆ, ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಅವರ ಮನೆಗೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.

ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಹುಸ್ಕೂರಿನಲ್ಲಿರುವ ಕಿರಣ್‌ ಮಜುಂದಾರ್‌ ಷಾ ಮನೆಗೆ ಭೇಟಿ ನೀಡಿದ್ದ ಭಾಗವತ್, ಕೆಲ ಕಾಲ ಅವರೊಂದಿಗೆ ಚರ್ಚೆ ನಡೆಸಿದರು. ಈ ಭೇಟಿ ವೇಳೆ ಯಾರಿಗೂ ಮನೆಯೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮೆಟ್ರೋ ನಿಲ್ದಾಣಕ್ಕೆ ಬಯೋಕಾನ್‌ನಿಂದ 65 ಕೋಟಿ ದೇಣಿಗೆ

ರಾಮ ಮಂದಿರ ನಿಧಿ ಸಮರ್ಪಣೆ ಬಗ್ಗೆ ಚರ್ಚೆ ಮಾಡುವುದಕ್ಕೋ ಅಥವಾ ರಾಜಕಾರಣದ ಬಗ್ಗೆ ಮಾತನಾಡಲೋ?, ಯಾವ ಕಾರಣಕ್ಕೆ ಭೇಟಿ ನೀಡಿದ್ದರು ಎಂಬುದು ತಿಳಿದುಬಂದಿಲ್ಲ.  ಕೋವಿಡ್‌ ಲಸಿಕೆಯ ದರದ ಬಗ್ಗೆ ಕಿರಣ್‌ ಮಜುಂದಾರ್‌ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಭೇಟಿ ಮಹತ್ವ ಪಡೆದಿದೆ ಎನ್ನಲಾಗಿದೆ.
 

PREV
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ