ಅಮ್ಮ ಕರೆಸಿಕೊಂಡರೆ ಕೊಲ್ಲೂರಿಗೆ ಬರುವೆ ಎಂದ್ರು ಮೋದಿ

By Kannadaprabha NewsFirst Published Aug 22, 2019, 10:01 AM IST
Highlights

ಆಗಸ್ಟ್‌ 4ರಂದು ನಿರ್ಮಲಾ ಸೀತಾರಾಮನ್‌ ಕಚೇರಿಯಿಂದ ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರಿಗೆ ಕರೆ ಬಂದಿದ್ದು, ಕೊಲ್ಲೂರು ಮೂಕಾಂಬಿಕೆಗೆ ವಿಶೇಷವಾದ ಪೂಜೆ ಸಲ್ಲಿಸಿ ಎಂದು ಸೂಚಿಸಿದ್ದರು. ಪೂಜೆಯ ಪ್ರಸಾದವನ್ನು ಸ್ವತಃ ಅರ್ಚಕರೇ ತೆಗೆದುಕೊಂಡು ಹೋಗಿ ಪ್ರಧಾನಿಗೆ ನೀಡಿದ್ದಾರೆ. ಈ ಸಂದರ್ಭ ಪ್ರಧಾನಿ ಅಮ್ಮ ಕರೆಸಿಕೊಂಡರೆ ಕೊಲ್ಲೂರಿಗೆ ಖಂಡಿತ ಬರುವೆನೆಂದು ತಿಳಿಸಿದ್ದಾರೆ.

ಉಡುಪಿ(ಆ.22): ಕಾಶ್ಮೀರಕ್ಕೆ ನೀಡುತ್ತಿರುವ ವಿಶೇಷವಾದ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವ ಮೊದಲು ಅದರ ಯಶಸ್ಸಿಗಾಗಿ ಕೊಲ್ಲೂರು ಮೂಕಾಂಬಿಕೆಗೆ ದೇವಳದಲ್ಲಿ ವಿಶೇಷ ಚಂಡಿಕಾ ಹೋಮ ನಡೆಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಚೇರಿಯಿಂದ ಕರೆ ಬಂದಿತ್ತು ಎಂಬ ಮಹತ್ತವಾದ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಈ ವಿಷಯವನ್ನು ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರು ಖಚಿತಪಡಿಸಿದ್ದಾರೆ. ಆಗಸ್ಟ್‌ 4ರಂದು ನಿರ್ಮಲಾ ಸೀತಾರಾಮನ್‌ ಕಚೇರಿಯಿಂದ ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರಿಗೆ ಕರೆ ಬಂದಿದ್ದು, ಕೊಲ್ಲೂರು ಮೂಕಾಂಬಿಕೆಗೆ ವಿಶೇಷವಾದ ಪೂಜೆ ಸಲ್ಲಿಸಿ ಎಂದು ಸೂಚಿಸಿದ್ದರು.

ಉಡುಪಿ: 'ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್‌ಗೆ ಪ್ರಮೋಷನ್'

ಆ.5ರಂದು ಸೀತಾರಾಮನ್‌ ಕಚೇರಿಯಿಂದ ಪುನಃ ಕರೆ ಬಂದಿದ್ದು, ಪ್ರಸಾದವನ್ನು ಮೂರು ಭಾಗವಾಗಿ ವಿಂಗಡಿಸಿ ಕೂಡಲೇ ದೆಹಲಿಗೆ ತನ್ನಿ ಎಂದಿದ್ದಾರೆ. ಪುತ್ರ ಸುಬ್ರಹ್ಮಣ್ಯ ಅಡಿಗ ಹಾಗೂ ಸಹೋದರ ಪರಮೇಶ್ವರ್‌ ಅಡಿಗರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ನಿರ್ಮಲಾ ಸೀತರಾಮನ್‌, ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಅವರಲ್ಲಿಯೂ 10 ನಿಮಿಷಗಳ ಮಾತನಾಡಿದ್ದೇನೆ. ಮರುದಿನ ಮೋದಿಯನ್ನು ಭೇಟಿ ಮಾಡಿ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದೇನೆಂದು ಅಡಿಗರು ಮಾಹಿತಿ ನೀಡಿದ್ದಾರೆ.

ಅಮ್ಮ ಕರೆಸಿಕೊಂಡರೆ ಖಂಡಿತವಾಗಿಯೂ ಬರುವೆ: ಪ್ರಧಾನಿ ಮೋದಿ

ಮಂಗಳೂರು, ಉಡುಪಿಗೆ ಭೇಟಿ ನೀಡಿದಾಗ ಕೊಲ್ಲೂರಿಗೆ ಬರಬೇಕಿತ್ತು ಎಂದಿರುವ ಅಡಿಗರ ಮಾತಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಅಮ್ಮ ಕರೆಸಿಕೊಂಡರೆ ಖಂಡಿತವಾಗಿಯೂ ಬರುವೆ. ಕೊಲ್ಲೂರು ಮೂಕಾಂಬಿಕೆ ಬಯಸಿದರೆ ಕೂಡಲೇ ಬರುವೆ ಎಂದಿದ್ದಾರೆ. ‘ನಿಮಗೆ ಒಳ್ಳೆಯದಾಗಲಿ’ ಎಂದು ಅಡಿಗರು ಹೇಳುತ್ತಿದ್ದಂತೆಯೇ ‘ನನಗೆ ಬೇಡ, ದೇಶಕ್ಕೆ ಒಳ್ಳೆಯದಾದರೆ ಸಾಕು’ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ ಎಂದು ಅಡಿಗರು ತಿಳಿಸಿದ್ದಾರೆ.

'ಮೋದಿ ಭೂತಾನ್‌ಗೆ ಹೋಗಿ ಮಕ್ಕಳ ಬೆನ್ನು ತಟ್ಟುವ ಬದಲು ಸಂತ್ರಸ್ತರ ಕಣ್ಣೀರೊರೆಸಲಿ'

ಕೊಲ್ಲೂರಿನಲ್ಲಿ ಶಂಕರ ಪೀಠವಿದ್ದು, ಕಾಶ್ಮೀರದಲ್ಲಿಯೂ ಶಂಕರಪೀಠ ಇದೆ. ಹೀಗಾಗಿ ಕೊಲ್ಲೂರಿಗೂ ಮತ್ತು ಕಾಶ್ಮೀರಕ್ಕೂ ಸಂಬಂಧವಿದೆ. ಕಾಶ್ಮೀರದಲ್ಲಿರುವ ಶಂಕರಪೀಠವೂ ಬೇಗ ಭಾರತದೊಳಗೆ ಬರುವಂತಾಗಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ಕೊಲ್ಲೂರು ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರು ತಿಳಿಸಿದ್ದಾರೆ.

click me!