ಪ್ರಧಾನಿ ಮೋದಿ ಅವರದ್ದು ಹಿಟ್ಲರ್ ಆಡಳಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ನಾವು ಕನಿಷ್ಠ ಪಕ್ಷ 5 ಸಾವಿರ ಕೋಟಿ ಪರಿಹಾರ ತಾತ್ಕಾಲಿಕವಾಗಿ ಕೇಳಿದ್ದೆವು. ಆದ್ರೆ ಎರಡು ತಿಂಗಳ ಬಳಿಕ 1200 ಕೋಟಿ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಮಂಗಳೂರು(ಅ.05): ಪ್ರಧಾನಿ ನರೇಂದ್ರ ಮೋದಿ ಅವರದ್ದು ಫ್ಯಾಸಿಸಂ ಸರ್ಕಾರ. ಮೋದಿಯವರದ್ದು ಹಿಟ್ಲರ್ ಆಡಳಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ವಿರುದ್ಧ ಯಾರು ಮಾತನಾಡಬಾರು. ನಾವು ಕನಿಷ್ಠ ಪಕ್ಷ 5 ಸಾವಿರ ಕೋಟಿ ಪರಿಹಾರ ತಾತ್ಕಾಲಿಕವಾಗಿ ಕೇಳಿದ್ದೆವು. ಆದ್ರೆ ಎರಡು ತಿಂಗಳ ಬಳಿಕ 1200 ಕೋಟಿ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಬೆಳಗಾವಿಯಲ್ಲಿ ಸಿಎಂಗೆ ಘೇರಾವ್: ರೈತರ ಬಂಧನ
ರಾಜ್ಯದಲ್ಲಿ ಹಲವು ಜಿಲ್ಲೆಗಳು ನೆರೆಯಿಂದ ತತ್ತರಿಸಿದ್ದು, ಬಿಜೆಪಿ ಸಂಸದರು ನೆರೆ ಪರಿಹಾರ ತರಿಸುವಲ್ಲಿ ವಿಫಲವಾಗಿರುವುದಕ್ಕೆ ಈಗಾಗಲೇ ರಾಜ್ಕಾಂಯದ ಹಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಅವರೂ ನೆರೆ ಪರಿಹಾರ ವಿಳಂಬವಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಂಸದರಿಗೆ ಬಳೆ, ಕುಂಕುಮ ಕಳಿಸಿದ ಕೈ ಕಾರ್ಯಕರ್ತರು..!
ಮೈಸೂರಿನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ನೆರೆ ಪರಿಹಾರ ತರುವಲ್ಲಿ ವಿಫಲವಾದ ರಾಜ್ಯ ಬಿಜೆಪಿ ಸಂಸದರಿಗೆ ಬಳೆ, ಹಾಗೂ ಕುಂಕುಮ ಕಳುಹಿಸಿಕೊಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.