ಇಸ್ರೇಲ್‌ ಯುದ್ಧ: ಮೋದಿ ಸರ್ಕಾರ ಕರಾವಳಿಗರನ್ನ ಸುರಕ್ಷಿತವಾಗಿ ಕರೆತರುತ್ತೆ, ಕಟೀಲ್‌

By Girish Goudar  |  First Published Oct 10, 2023, 11:51 AM IST

ಕೇಂದ್ರ ಸಚಿವ ಮುರಳೀಧರನ್ ಅವರ ಜೊತೆಗೂ ನಾನು ಮಾತನಾಡಿದ್ದೇನೆ. ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿಕೊಳ್ಳಲು ಸೂಚಿಸ್ತೇನೆ. ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಭಯದ ವಾತಾವರಣ ಇರುತ್ತವೆ. ಈಗಲೂ ಇಸ್ರೇಲ್‌ನಲ್ಲಿದ್ದವರು ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದೆ: ನಳಿನ್ ಕುಮಾರ್ ಕಟೀಲ್  
 


ಮಂಗಳೂರು(ಅ.10): ಇಸ್ರೇಲ್‌ನಲ್ಲಿ ಐದು ಸಾವಿರ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇದ್ದಾರೆಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸ್ತೇವೆ. ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು,  ಕೇಂದ್ರ ಸಚಿವ ಮುರಳೀಧರನ್ ಅವರ ಜೊತೆಗೂ ನಾನು ಮಾತನಾಡಿದ್ದೇನೆ. ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿಕೊಳ್ಳಲು ಸೂಚಿಸ್ತೇನೆ. ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಭಯದ ವಾತಾವರಣ ಇರುತ್ತವೆ. ಈಗಲೂ ಇಸ್ರೇಲ್‌ನಲ್ಲಿದ್ದವರು ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದೆ ಎಂದು ಹೇಳಿದ್ದಾರೆ. 

Tap to resize

Latest Videos

ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!

ರಷ್ಯಾ-ಉಕ್ರೇನ್ ಯುದ್ಧ ಆದಾಗಲೂ ಇಂಥದ್ದೇ ಪರಿಸ್ಥಿತಿ ಇತ್ತು. ಆಗಲೂ ಅವರ ಮನೆಗಳಿಗೆ ತೆರಳಿ ಸಮಾಧಾನ ಹೇಳಿದ್ದೆವು. ಮೋದಿ ಸರ್ಕಾರ ಆಗಲೂ ಅಲ್ಲಿದ್ದ ಭಾರತೀಯರ ರಕ್ಷಣೆ ‌ಮಾಡಿತ್ತು. ಈಗಲೂ ನಾನು ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ಯಾರೂ ಭಯ ಪಡೋ ಅಗತ್ಯ ಇಲ್ಲ, ಏನೇ ಆತಂಕ ಇದ್ದರೂ ನನ್ನನ್ನ ನೇರವಾಗಿ ಸಂಪರ್ಕಿಸಿ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. 

click me!