'ದೇಶದ ಯೋಧರ ರಕ್ಷಣೆ ಮಾಡುವ ಯೋಗ್ಯತೆ ಪ್ರಧಾನಿಗಿಲ್ಲ': ಕೆಪಿಸಿಸಿ ವಾಗ್ದಾಳಿ

Suvarna News   | Asianet News
Published : Jun 18, 2020, 12:26 PM ISTUpdated : Jun 18, 2020, 02:21 PM IST
'ದೇಶದ ಯೋಧರ ರಕ್ಷಣೆ ಮಾಡುವ ಯೋಗ್ಯತೆ ಪ್ರಧಾನಿಗಿಲ್ಲ': ಕೆಪಿಸಿಸಿ ವಾಗ್ದಾಳಿ

ಸಾರಾಂಶ

ಪ್ರಧಾನಿ ಮೋದಿ ಕಳ್ಳರ ರೀತಿ ಅವಿತುಕುಳಿತಿದ್ದಾರೆ. ದೇಶದ ಯೋಧರ ರಕ್ಷಣೆ ಮಾಡುವ ಯೋಗ್ಯತೆ ಪ್ರಧಾನಿಗಿಲ್ಲ. ಮನಮೋಹನ್ ಸಿಂಗ್ ಅವರನ್ನು ಮೌನಿ ಪ್ರಧಾನಿ ಎಂದು ಟೀಕಿಸುತ್ತಿದ್ದರು. ಬಿಜೆಪಿ ನಾಯಕರು ಈಗ ಏಕೆ ಸುಮ್ಮನಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು(ಜೂ.18): ಪ್ರಧಾನಿ ಮೋದಿ ಕಳ್ಳರ ರೀತಿ ಅವಿತುಕುಳಿತಿದ್ದಾರೆ. ದೇಶದ ಯೋಧರ ರಕ್ಷಣೆ ಮಾಡುವ ಯೋಗ್ಯತೆ ಪ್ರಧಾನಿಗಿಲ್ಲ. ಮನಮೋಹನ್ ಸಿಂಗ್ ಅವರನ್ನು ಮೌನಿ ಪ್ರಧಾನಿ ಎಂದು ಟೀಕಿಸುತ್ತಿದ್ದರು. ಬಿಜೆಪಿ ನಾಯಕರು ಈಗ ಏಕೆ ಸುಮ್ಮನಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಮೌನದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಸೈನಿಕರ ಸಾವಿನ ವಿಚಾರದಲ್ಲಿ ಅಂಕಿ ಅಂಶಗಳನ್ನು ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್

ಮೊದಲು ಮೂವರು ಸಾವನ್ನಪ್ಪಿರುವ ಬಗ್ಗೆ ಮಾತ್ರ ಮಾಹಿತಿ ನೀಡಿದ್ರು. ನಂತರ 20ಮಂದಿ ಸಾವನ್ನಪ್ಪಿರುವ ಮಾಹಿತಿ ಬಹಿರಂಗ ಮಾಡಲಾಗಿದೆ. ಭಾರತ ಚೀನಾ ಗಡಿ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿರೋಧ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳತ್ತಿಲ್ಲ.

ರಾಹುಲ್ ಗಾಂಧಿಗೆ ಚೈನಾದೊಂದಿಗೆ ನಂಟಿದೆ ಎಂದು ಆರೋಪ ಮಾಡುತ್ತಾರೆ. ರಾಜನಾಥ್ ಸಿಂಗ್ ಯುಸ್ ಲೆಸ್ ಡಿಫೆನ್ಸ್ ಮಿನಿಸ್ಟರ್. ಮೋದಿ ಭಜನೆ ಮಾಡುವವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ.

"

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!