ಹಾವೇರಿ: ಕೊರೋನಾ ಆತಂಕ, ಮೊಬೈಲ್‌ ಸ್ವ್ಯಾಬ್‌ ಸಂಗ್ರಹ ವಾಹನಕ್ಕೆ ಚಾಲನೆ

By Kannadaprabha News  |  First Published May 30, 2020, 8:46 AM IST

ಗ್ರಾಮಗಳಿಗೆ ತೆರಳಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಗಂಟಲು ದ್ರವ್ಯದ ಮಾದರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಅನುಕೂಲ| ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‌ವೊಂದನ್ನು ಪ್ರಯೋಗಾಲಯವಾಗಿ ಬದಲಾಯಿಸಿ ಒಳಗೆ ಮಾದರಿ ಸಂಗ್ರಹದ ಉಪಕರಣಗಳನ್ನು ಅಳವಡಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ|


ಹಾವೇರಿ(ಮೇ.30): ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ರೂಪಿಸಲಾದ ಕೋವಿಡ್‌-19 ಮೊಬೈಲ್‌ ಸ್ವ್ಯಾಬ್‌ ಕಲೆಕನ್ಸ್‌ ವಾಹನಕ್ಕೆ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದ್ದಾರೆ. 

ಗ್ರಾಮಗಳಿಗೆ ತೆರಳಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಗಂಟಲು ದ್ರವ್ಯದ ಮಾದರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಅನುಕೂಲವಾಗಲಿದೆ. ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‌ವೊಂದನ್ನು ಪ್ರಯೋಗಾಲಯವಾಗಿ ಬದಲಾಯಿಸಿ ಒಳಗೆ ಮಾದರಿ ಸಂಗ್ರಹದ ಉಪಕರಣಗಳನ್ನು ಅಳವಡಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.

Latest Videos

undefined

'ಪರವಾನಗಿ ಇಲ್ಲದ ಖಾಸಗಿ ಸಾರಿಗೆ ವಾಹನಗಳ ಲೈಸನ್ಸ್‌ ರದ್ದು'

ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಅರುಣಕುಮಾರ ಗುತ್ತೂರ, ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್‌.ಪಾಟೀಲ, ಜಿಪಂ ಸದಸ್ಯ ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ ಉಪಸ್ಥಿತರಿದ್ದರು.
 

click me!