ಬೀದಿ ವ್ಯಾಪಾರಿಗಳಿಗೆ ಜ್ವರ- ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲು, ಕೊರೋನಾ ಭೀತಿ

By Kannadaprabha News  |  First Published May 30, 2020, 8:16 AM IST

ಪುತ್ತೂರು ನಗರದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿರುವ ಮೈಸೂರು ಮೂಲದ ಇಬ್ಬರು ವ್ಯಾಪಾರಿಗಳಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡಿರುವ ಇಬ್ಬರನ್ನೂ ಶುಕ್ರವಾರ ಬೆಳಗ್ಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪುತ್ತೂರು(ಮೇ 30): ಪುತ್ತೂರು ನಗರದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿರುವ ಮೈಸೂರು ಮೂಲದ ಇಬ್ಬರು ವ್ಯಾಪಾರಿಗಳಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡಿರುವ ಇಬ್ಬರನ್ನೂ ಶುಕ್ರವಾರ ಬೆಳಗ್ಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ನಗರದಲ್ಲಿನ ಗಾಂಧಿಕಟ್ಟೆಸಮೀಪ ಬೀದಿಬದಿಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳು ಅನಾರೋಗ್ಯಕ್ಕೆ ಈಡಾಗಿದ್ದು ಅವರನ್ನು ತಾಲೂಕು ವೈದ್ಯಾಧಿಕಾರಿಗಳ ನೆರವಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

Tap to resize

Latest Videos

ಫುಟ್ಬಾಲ್‌ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್‌

ಈ ಇಬ್ಬರು ಕಳೆದ ಹಲವು ವರ್ಷಗಳಿಂದ ಇಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮೈಸೂರಿಗೆ ತೆರಳಿದ್ದ ಈ ವ್ಯಾಪಾರಿಗಳು ಲಾಕ್‌ಡೌನ್‌ ಸಡಿಲಿಕೆ ನಂತರ ಮತ್ತೆ ಹಿಂದಿರುಗಿ ತರಕಾರಿ ವ್ಯಾಪಾರ ಮುಂದುವರಿಸುತ್ತಿದ್ದರು. ತಾವು ವ್ಯಾಪಾರ ನಡೆಸುತ್ತಿರುವ ಪಕ್ಕದಲ್ಲಿಯೇ ಬಾಡಿಗೆ ಕೊಠಡಿಯೊಂದರಲ್ಲಿ ವಾಸ್ತವ್ಯ ಹೊಂದಿದ್ದ ಈ ವ್ಯಾಪಾರಿಗಳಿಗೆ ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡತ್ತು.

ಕೊರೋನಾ ಸಾವಿನಲ್ಲೂ ಚೀನಾ ಹಿಂದಿಕ್ಕಿದ ಭಾರತ!

ಜ್ವರದಿಂದ ತೀವ್ರ ಅಸ್ವಸ್ಥಗೊಂಡು ಬಾಡಿಗೆ ಕೊಠಡಿಯಲ್ಲಿ ಮಲಗಿದ್ದು, ಮಾಹಿತಿ ಅರಿತ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಶಾಸಕರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಬಳಿಕ ಇಬ್ಬರು ವ್ಯಾಪಾರಿಗಳನ್ನೂ ಆಸ್ಪತ್ರೆಗೆ ಕೊಂಡೊಯ್ಯುಲಾಗಿದೆ.

ಪರೀಕ್ಷೆ ಬಳಿಕ ಕ್ವಾರಂಟೈನ್‌ಗೆ:

ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆ ಇದ್ದ ಓರ್ವ ವ್ಯಾಪಾರಿಯ ಗಂಟಲು ದ್ರವ ಸಂಗ್ರಹಿಸಿ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಇಬ್ಬರು ವ್ಯಾಪಾರಿಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

click me!