ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌

Kannadaprabha News   | Kannada Prabha
Published : Feb 03, 2026, 10:16 AM IST
 TV

ಸಾರಾಂಶ

ಹಾವೇರಿ ತಾಲೂಕಿನ ಎಲ್ಲಾ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಸ್ವಿಚ್‌ ಆಫ್‌ ಮಾಡಿ, ಟಿವಿಗಳನ್ನು ಆಫ್ ಮಾಡುವಂತೆ ಆದೇಶ

 ಹಾವೇರಿ: ಹಾವೇರಿ ತಾಲೂಕಿನ ಎಲ್ಲಾ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಸ್ವಿಚ್‌ ಆಫ್‌ ಮಾಡಿ, ಟಿವಿಗಳನ್ನು ಆಫ್ ಮಾಡುವಂತೆ ಡಂಗುರ ಸಾರಲು ತಾಲೂಕು ಪಂಚಾಯಿತಿ ಇಒ ಪರಮೇಶ ಹುಬ್ಬಳ್ಳಿಯವರು ಪಿಡಿಓಗಳಿಗೆ ಆದೇಶ ಹೊರಡಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪ

 ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಮಕ್ಕಳ ಓದಿಗೆ ಮೊಬೈಲ್ ಹಾಗೂ ಟಿವಿಗಳು ತೊಂದರೆಯಾಗುತ್ತಿವೆ. 

ಮಕ್ಕಳ ಓದಿನ ದೃಷ್ಟಿಯಿಂದ ಆದೇಶ

ಹೀಗಾಗಿ, ಮಕ್ಕಳ ಓದಿನ ದೃಷ್ಟಿಯಿಂದ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಯ ಹಿತದೃಷ್ಟಿಯಿಂದ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಹಾಗೂ ಟಿವಿಗಳನ್ನು ಬಂದ್ ಮಾಡುವಂತೆ ಡಂಗೂರ ಸಾರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಕಾರಿಗಳು ಆದೇಶ ಹೊರಡಿಸಿದ್ದಾರೆ.

PREV
Read more Articles on
click me!

Recommended Stories

ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಮತ್ತೆ ಕೊಕ್! ಕನ್ನಡಿಗರಿಗೆ ತಪ್ಪದ ಅನ್ಯಾಯ; ಹಿಂದಿ-ಇಂಗ್ಲಿಷ್ ಹೇರಿಕೆಗೆ ಆಕ್ರೋಶ
ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ: ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ