ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಬಾಗಲಕೋಟೆ ಜಿಲ್ಲಾ ಸ್ವೀಪ್ ವತಿಯಿಂದ ಹಮ್ಮಿಕೊಂಡ ಸಂಚಾರಿ ಅಣಕು ಮತಗಟ್ಟೆ ಅಭಿಯಾನ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಏ.5): ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲು ಜಿಲ್ಲಾ ಸ್ವೀಪ್ ವತಿಯಿಂದ ಹಮ್ಮಿಕೊಂಡ ಸಂಚಾರಿ ಅಣಕು ಮತಗಟ್ಟೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್ ಚಾಲನೆ ನೀಡಿದರು. ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಸ್ವೀಪ್ ವತಿಯಿಂದ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಿದ ಸಂಚಾರಿ ಅಣಕು ಮತಗಟ್ಟೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತದಾನ ಪವಿತ್ರವಾದ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಭದ್ರತೆಗೆ ಎಲ್ಲ ಯುವ ಜನಾಂಗವು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದರು. ಪ್ರತಿ ಬಾರಿ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿರುವದರಿಂದ ಈ ಬಾರಿ ಶೇ.80 ರಷ್ಟು ಮತದಾನವಾಗಲೇಬೇಕೆಂಬ ಉದ್ದೇಶ ಹೊಂದಲಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಉತ್ತಮ ನಾಗರಿಕನಾಗುವ ಮೂಲಕ ಉತ್ತಮ ಮತದಾರರಾಗಬೇಕು ಎಂದರು.
undefined
ಸ್ವೀಪ್ ರಾಯಭಾರಿಗಳಾಗಿ ಕ್ರೀಡಾಪಟು ಸಿದ್ದರೂಢ ಕೊಪ್ಪದ ಮತ್ತು ಜಾನಪದ ವಿದ್ವಾಂಸ ಡಾ.ಶಂಬು ಬಳೆಗಾರ:
ಸ್ವೀಪ್ ಎಕ್ಸಪ್ರೇಸ್ ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಮತದಾನದ ಮಹತ್ವವನ್ನು ಸಾರುವದರ ಜೊತೆಗೆ ಮೊದಲ ಬಾರಿಗೆ ಮತದಾನ ಮಾಡುವ ಯುವಕರಿಗೆ ಮತಗಟ್ಟೆಯ ಅನುಭವನನ್ನು ಉಣಬಡಿಸಲು ಬಸ್‍ನಲ್ಲೆ ಅಣಕು ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಅಲ್ಲದೇ ಕಡಿಮೆ ಮತದಾನವಾಗುವ ಪ್ರದೇಶಗಳಿಗೆ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಅಂತರಾಷ್ಟ್ರೀಯ ವಿಶೇಷ ಚೇತನ, ಕ್ರೀಡಾಪಟು ಸಿದ್ದರೂಢ ಕೊಪ್ಪದ ಮತ್ತು ಜಾನಪದ ವಿದ್ವಾಂಸ ಡಾ.ಶಂಬು ಬಳೆಗಾರ ಅವರನ್ನು ಜಿಲ್ಲೆಯ ಸ್ವೀಪ್ ರಾಯಬಾರಿಯನ್ನಾಗಿ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಸಿಇಓ ಮತ್ತು ಜಿಲ್ಲಾ ಸ್ವೀಲ್ ನೋಡಲ್ ಅಧಿಕಾರಿ ಟಿ.ಭೂಬಾಲ್ ಮಾತನಾಡಿ ಮತದಾನ ಜಾಗೃತಿಗಾಗಿ ವಿನೂತನ ಪ್ರಯೋಗ ಅನುಸರಿಸುತ್ತಿದ್ದು, ಬಾಗಲಕೋಟೆ ಘಟಕದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಸಂಚಾರಿ ಅಣಕು ಮತಗಟ್ಟೆಯ ವಾಹನವನ್ನು ಸಿದ್ದಪಡಿಸಿದ್ದಾರೆ. ಮತದಾನದ ಮಹತ್ವದ ಜೊತೆಗೆ ಮತದಾನದ ಅಣಕು ಪ್ರದರ್ಶನ ಸಹ ಬಸ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಾಗೃತಿ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದರು.
ಬಿಜೆಪಿ ಮುಖಂಡ Yogesh Gowda ಹತ್ಯೆ ಪ್ರಕರಣ, ಬಿರಾದಾರ್ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ
ಪ್ರಿಸೆಡಿಂಗ್ ಅಧಿಕಾರಿಯಾಗಿ ಡಿಸಿ, ಮತಗಟ್ಟೆ ಅಧಿಕಾರಿಯಾಗಿ ಸಿಇಓ:
ಇನ್ನು ಮತದಾರರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಲಾದ ಸಂಚಾರಿ ಅಣಕು ಮತಗಟ್ಟೆ ಬಸ್‍ನಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಪ್ರಿಸೆಡಿಂಗ್ ಅಧಿಕಾರಿಯಾಗಿ, ಜಿ.ಪಂ ಸಿಇಓ ಟಿ.ಭೂಬಾಲನ್ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನವನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಣಕು ಮತಗಟ್ಟೆ ಪ್ರದರ್ಶನ ನಡೆಸಲಾಯಿತು. ಈ ಪ್ರದರ್ಶನದಿಂದ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವವರಿಗೆ ಅಣಕು ಪ್ರದರ್ಶನದಿಂದ ಅನುಕೂಲವಾಯಿತು. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಸೇರಿದಂತೆ ಇತರೆ ಅಧಿಕಾರಿಗಳು ನಗರದಲ್ಲಿ ಸಂಚಾರಿ ಅಣಕು ಮತಗಟ್ಟೆ ಬಸ್‍ನಲ್ಲಿ ಸಂಚರಿಸಿದರು.
ಪಕ್ಷ ವಿರೋಧಿ ಚಟುವಟಿಕೆ, ಗುಬ್ಬಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಉಚ್ಛಾಟನೆ
ಈ ಸಂದರ್ಭದಲ್ಲಿ ಸಂಚಾರಿ ಅಣಕು ಮತಗಟ್ಟೆ ವಾಹನ ಸಿದ್ದಪಡಿಸಲು ಶ್ರಮಿಸಿದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ಜಿಲ್ಲಾ ಸ್ವೀಪ್ ವತಿಯಿಂದ ಅಭಿನಂದನಾ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಯುಕೆಪಿಯ ಮಹಾವ್ಯವಸ್ಥಾಪಕ ಭಂವರ್ ಸಿಂಗ್ ಮೀನಾ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಜಿ.ಪಂ ಯೋಜನಾಧಿಕಾರಿ ಸಿ.ಆರ್.ಮುಂಡರಗಿ, ವಾ.ಕ.ರ.ಸಾ.ಸಂಸ್ಥೆಯ ಜಿಲ್ಲಾ ಸಂಚಾರಿ ಅಧಿಕಾರಿ ಮೈತ್ರಿ, ಜಿಲ್ಲಾ ಸ್ವೀಪ್ ರಾಯಬಾರಿ ಸಿದ್ದಾರೂಢ ಕೊಪ್ಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.