ಬಿಬಿಎಂಪಿ ಆಫೀಸರ್‌ ಹೆಸರಲ್ಲಿ ರಸ್ತೆಯಲ್ಲಿ ಮಹಿಳೆಯ ಆವಾಜ್‌, ಚಳಿ ಬಿಡಿಸಿದ ಸ್ಟೂಡೆಂಟ್ಸ್‌!

By Santosh NaikFirst Published Apr 5, 2023, 8:03 PM IST
Highlights

ಇದು ಎಲೆಕ್ಷನ್‌ ಟೈಮ್‌. ರಸ್ತೆಯಲ್ಲಿ ನಡೆಯುವಾಗ ಮೈಯೆಲ್ಲಾ ಕಣ್ಣಾಗಿ ನಡೆಯಬೇಕು. ಯಾಕೆ ಅನ್ನೋದಕ್ಕೆ ಉದಾಹರಣೆಯಂತಿದೆ ಇಲ್ಲಿನ ಪ್ರಕರಣ. ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ತಾನು ಬಿಬಿಎಂಪಿ ಆಫೀಸರ್‌ ಎಂದುಕೊಂಡು ಬದ ಮಹಿಳೆ ಕಿತಾಪತಿ ಮಾಡಿದ್ದಾಳೆ.

ಬೆಂಗಳೂರು (ಏ.5): ಇದು ಎಲೆಕ್ಷನ್‌ ಟೈಮ್‌. ಕೆಲವರಿಗೆ ಸುಮ್ಮಸುಮ್ಮನೆ ತಾನು ದೊಡ್ಡ ಆಫೀಸರ್ ಎಂದು ಹೇಳಿಕೊಂಡು ಜನರನ್ನು ಬೆದರಿಸುವ ಚಾಳಿ ತಾನೇತಾನಾಗಿ ಬಂದು ಬಿಡುತ್ತದೆ. ಪೊಲೀಸ್‌ ಆಫೀಸರ್‌, ಇನ್‌ಕಮ್‌ ಟ್ಯಾಕ್ಸ್‌ ಆಫೀಸರ್‌, ಅಬಕಾರಿ ಇಲಾಖೆ ಅಧಿಕಾರಿ ಇಂಥ ಹೆಸರೇಳಿಕೊಂಡು ಜನಸಾಮಾನ್ಯರ ಮೇಲೆ ದರ್ಪ ತೋರಿವ ಖಯಾಲಿ ಮಾಡಿಕೊಂಡಿರುತ್ತಾರೆ. ಹೆದರುವಂತವರಾದರೆ, ಇನ್ನಷ್ಟು ಹೆದರಿಸಿ ಹಣವನ್ನು ಪೀಕಿಸುವ ಜನರೂ ಇದ್ದಾರೆ. ನಗರ ಪ್ರದೇಶಗಳಲ್ಲಿ ಇದು ಹೆಚ್ಚು. ಇತ್ತೀಚೆಗೆ ಬೆಂಗಳೂರಿನಲ್ಲಿ ಆಗಿರುವ ಇಂಥದ್ದೇ ಘಟನೆಯನ್ನು ಕಾರ್ತಿಕ್‌ ಎನ್ನುವವರು ಫೇಸ್‌ಬುಕ್‌ನ ರೀಲ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ಇಡೀ ಸಂದರ್ಭವನ್ನು ಅವರು ಬರೆದುಕೊಂಡಿದ್ದಾರೆ. ತಾವು ಬಿಬಿಎಂಪಿ ಆಫೀಸರ್‌ ಎಂದು ಹೇಳಿಕೊಳ್ಳುವ ಮಹಿಳೆ ಸ್ಕೂಟಿಯಲ್ಲಿ ಬಂದು ತಮ್ಮ ಪಾಡಿಗೆ ಹೋಗುತ್ತಿದ್ದ ಹುಡುಗರಿಗೆ ಅವಾಜ್‌ ಹಾಕಿ ಮಾತನಾಡುತ್ತಾಳೆ. ಆದರೆ, ವಿದ್ಯಾರ್ಥಿಗಳು ಸುಮ್ನೆ ಬಿಡ್ತಾರಾ, ಯುವತಿಗೆ ಸರಿಯಾಗಿಯೇ ಪ್ರಶ್ನೆ ಮಾಡಿದ್ದಾರೆ. ಕೊನೆಗೆ ವಿಡಿಯೋ ಮಾಡುತ್ತಿರುವುದೇಕೆ ಎಂದೂ ಆಕೆ ಪ್ರಶ್ನೆ ಮಾಡಿದ್ದಾರೆ. 

ಫೇಸ್‌ಬುಕ್‌ನಲ್ಲಿ ಕಾರ್ತಿಕ್‌ ಬರೆದುಕೊಂಡಿರುವ ಬರಹ: 'ಕಾಲೇಜಿನ ಸಮಯ ಮುಗಿದ ಬಳಿಕ ನಾನೂ ಹಾಗೂ ನನ್ನ ಸ್ನೇಹಿತರು ಬೆಂಗಖೂರಿನ ವಿಜಯನಗರದಲ್ಲಿರುವ ಹಿಮಾದ್ರಿ ಐಸ್‌ ಕ್ರೀಮ್‌ ಪಾರ್ಲರ್‌ಗೆ ತೆರಳಬೇಕು ಎಂದು ನಿರ್ಧಾರ ಮಾಡಿದ್ದೆವು. ನಾವು ಇನ್ನೇನು ಐಸ್‌ ಕ್ರೀಮ್‌ ಪಾರ್ಲರ್‌ನಿಂದ 200 ಮೀಟರ್‌ ದೂರದಲ್ಲಿದ್ದೆವು. ರಸ್ತೆಯಲ್ಲಿ ಮಾತನಾಡುತ್ತಲೇ ನಾವು ಹೋಗಬೇಕಾದ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದೆವು. ಈ ವೇಳೆ ನಮ್ಮ ಸ್ಕೂಟಿಯಲ್ಲಿ ನಮ್ಮ ಹಿಂದೆ ಬರುತ್ತಿದ್ದ ಮಹಿಳೆಯೊಬ್ಬು ನಿಧಾನವಾಗಿ ನಮ್ಮ ಬಳಿಕ ಬಂದು ಕೂಗಾಡಲು ಆರಂಭಿಸಿದರು. ಅದಲ್ಲದೆ, ನೀವೆಲ್ಲಾ ಗುಂಪು ಗುಂಪಾಗಿ ಎಲ್ಲಿಗೆ ಹೋಗ್ತಾ ಇದ್ದೀರಿ ಎಂದು ಪ್ರಶ್ನೆ ಮಾಡಿದರು. ಈ ಹಂತದಲ್ಲಿ ನಮ್ಮ ಜೊತೆ ಇದ್ದ ಸ್ನೇಹಿತ ನಾವು ಐಸ್‌ ಕ್ರೀಮ್‌ ಪಾರ್ಲರ್‌ಗೆ ಹೋಗ್ತಾ ಇದ್ದೀವಿ ಎಂದು ಹೇಳಿದರು. 



ಇದಕ್ಕೆ ಮತ್ತಷ್ಟು ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ಆಕೆ, ಯಾರಿಗೆ ಗೊತ್ತು ನೀವು ಐಸ್‌ ಕ್ರೀಮ್‌ ಪಾರ್ಲರ್‌ಗೆ ಹೋಗ್ತಾ ಇದ್ದೀರೋ ಅಥವಾ ಬಾರ್‌ಗೆ ಹೋಗ್ತಾ ಇದ್ದೀರೋ ಅಂತಾ ಮಾತನಾಡಿದರು. ಅದಲ್ಲದೆ, ಕೆಲವೊಂದು ಅಶ್ಲೀಲ ಶಬ್ದಗಳನ್ನೂ ನಮ್ಮ ಮೇಲೆ ಪ್ರಯೋಗಿಸಿದರು. ಅಲ್ಲಿಯವರೆಗೂ ಸುಮ್ಮನಿದ್ದ ನಾನು ಹಾಗೂ ನನ್ನ ಸ್ನೇಹಿತ ಆಕೆಯನ್ನು ಪ್ರಶ್ನೆ ಮಾಡಲು ಆರಂಭ ಮಾಡಿದೆವು. ನಾವು ಪ್ರಶ್ನೆ ಮಾಡುತ್ತಿದ್ದಂತೆ ಆಕೆಯ ಮುಖಭಾವ ಸಂಪೂರ್ಣವಾಗಿ ಬದಲಾಯಿತು. ಈ ವೇಳೆ ನನ್ನ ಸ್ನೇಹಿತನೊಬ್ಬ ಘಟನೆಯ ವಿಡಿಯೋವನ್ನು ಮಾಡಲು ಆರಂಭಿಸಿದ. ರಸ್ತೆಯಲ್ಲಿ ಇಂಥ ಮಹಿಳೆಯರು ಕೂಡ ಸಿಗುತ್ತಾರೆ. ಅವರ ಬಗ್ಗೆ ಎಚ್ಚರವಿರಲಿ. ನೀವು ತಪ್ಪು ಮಾಡದೇ ಇದ್ದಲ್ಲಿ ಯಾವುದೇ ಭಯವಿಲ್ಲದೆ ಪ್ರಶ್ನೆ ಮಾಡಿ' ಎಂದು ಬರೆದುಕೊಂಡಿದ್ದಾರೆ.

Latest Videos

ಬೆಂಗ್ಳೂರಲ್ಲಿ ಲೂಟಿಗಿಳಿದ ಮನೆ ಮಾಲೀಕರು, ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತಿದಾರೆ ಬಾಡಿಗೆದಾರರು!

ಇನ್ನು ಅವರು ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಸ್ಕೂಟಿಯಲ್ಲಿ ಬರುವ ಮಹಿಳೆ, ನಾವು ಬಿಬಿಎಂಪಿಯವರಪ್ಪಾ,  ದಾರಿ ಬಿಡ್ತಾ ಇರ್ಲಿಲ್ವಲ್ಲ ಅದಕ್ಕೆ ಪ್ರಶ್ನೆ ಮಾಡಿದೆ ಎಂದು ಮಹಿಳೆ ಕೇಳಿದಾಗ, ವಿದ್ಯಾರ್ಥಿಗಳು ನೀವು ಅಷ್ಟನ್ನು ಮಾತ್ರವೇ ಕೇಳಬೇಕು, ನಾವು ಎಲ್ಲಿಗೆ ಹೋದರೆ ನಿಮಗೇನು? ಬಾರ್ಗೆ ಹೋಗ್ತೀವೋ, ಎಲ್ಲೇ ಹೋಗ್ತೀವೋ ಅದನ್ನು ಕಟ್ಟಿಕೊಂಡು ನಿಮಗೇನಾಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ. 'ನೀವು ಸ್ಟೂಡೆಂಟ್‌ ಆಗಿರಬಹುದು ಮರ್ಯಾದೆ ಕೊಟ್ಟು ಮಾತನಾಡಿ. ನೀವು ವಾಟ್ಸ್‌ಅಪ್‌ಗೆಲ್ಲ ಇದನ್ನ ಹಾಕೋದ್‌ ಬೇಡ' ಎಂದಿದ್ದಾರೆ. ಆದರೆ, ಮಹಿಳೆಯ ಆವಾಜ್‌ಗೆ ಅಷ್ಟೇ ಕೋಪದಲ್ಲಿಯೇ ವಿದ್ಯಾರ್ಥಿಗಳು ಉತ್ತರ ನೀಡಿದ್ದಾರೆ.

ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

ಇನ್ನು ಕಾರ್ತಿಕ್‌ ಶೇರ್‌ ಮಾಡಿಕೊಂಡಿರುವ ಈ ವಿಡಿಯೋಗೆ ಸಾಕಷ್ಟು ಲೈಕ್‌ ಹಾಗೂ ಕಾಮೆಂಟ್‌ಗಳು ಬಂದಿವೆ. ಬಿಬಿಎಂಪಿ ಅಫೀಸರ್‌ ಎನ್ನುತ್ತಿರುವ ಈ ಮಹಿಳೆಗೆ ಮೊದಲು ಹೆಲ್ಮೆಟ್‌ ಹಾಕಿಕೊಳ್ಳೋಕೆ ಹೇಳಿ. ಮೊದಲು ನಿಯಮ ಪಾಲನೆ ಮಾಡಲು ಹೇಳಿ ಎಂದು ಹೆಚ್ಚಿನವರು ಕಾಮೆಂಟ್‌ ಮಾಡಿದ್ದಾರೆ.

click me!