ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಪೋಷಣೆಗೆ ಕೂಸಿನ ಮನೆ ಆರೈಕೆ ಕೇಂದ್ರ ಆರಂಭ

By Kannadaprabha NewsFirst Published Dec 13, 2023, 9:48 AM IST
Highlights

ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಆರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಕೂಸಿನ ಮನೆ ಬರುವ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನ ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನರಸಿಂಹಮೂರ್ತಿ ಆರೈಕೆದಾರರುಗಳಿಗೆ ಕಿವಿಮಾತು ಹೇಳಿದರು.

 ಶಿರಾ :  ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಳ ಆರೈಕೆ ಮಾಡುವ ಉದ್ದೇಶದಿಂದ ಸರ್ಕಾರ ಕೂಸಿನ ಮನೆ ಬರುವ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನ ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಬೇಕು ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನರಸಿಂಹಮೂರ್ತಿ ಆರೈಕೆದಾರರುಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜುಂಜರಾಮನಹಳ್ಳಿ ಗ್ರಾಮದಲ್ಲಿ ಗುರುತಿಸಿರುವ ಕೂಸಿನ ಮನೆಗೆ ಭೇಟಿ ನೀಡಿ ಆರೈಕೆದಾರರುಗಳನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೂಸಿನ ಮನೆಗಳ ಪಾಲಕರಿಗೆ ಮೊದಲನೇ ಹಂತದ ತರಬೇತಿ ಮಕ್ತಾಯವಾಗಿದ್ದು, ಮೊದಲ ಹಂತದ ತರಬೇತಿಗೆ 175 ಕೂಸಿನ ಮನೆಗಳ ಪೈಕಿ 700 ಜನ ಆರೈಕೆದಾರರಿಗೆ ತರಬೇತಿಯನ್ನು ನೀಡಲಾಗಿದೆ. ಮೊದಲನೇ ಹಂತದಲ್ಲಿ ನಮ್ಮ ಜಿಲ್ಲೆಗೆ 175 ಕೂಸಿನ ಮನೆಗಳನ್ನ ನಿಗಾ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸಂಪನ್ಮೂಲ ವ್ಯಕ್ತಿಗಳು ಕೂಸಿನ ಮನೆ ತರಬೇತಿ ನೀಡಿದ್ದಾರೆ. ಭಾನುವಾರದಿಂದ 2ನೇ ಹಂತದ ತರಬೇತಿ ಪ್ರಾರಂಭವಾಗಲಿದೆ. ಇನ್ನು 700 ಜನ ಕೇರ್ ಟೇಕರ್ಸ್‌ಗಳಿಗೆ ಒಂದು ವಾರದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೂಸಿನ ಮನೆ ಆರೈಕೆದಾರರಾದ ಶಿರಾ ತಾಲೂಕು ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾವಣ್ಯ ಎಂಬುವರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿದೆ ಎಂದರು.

ತಾಪಂ ಕಾರ್ಯನಿರ್ವಹಣಾಕಾರಿ ಅನಂತರಾಜು, ಸಹಾಯಕ ನಿರ್ದೇಶಕರು (ಗ್ರಾ.ಉ.) ಡಿ.ವಿ. ವೆಂಕಟೇಶ್ ಸೇರಿದಂತೆ ಆರೈಕೆದಾರರು ಹಾಜರಿದ್ದರು.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ?

1. ಸ್ತನ್ಯಪಾನ: ನವಜಾತ ಶಿಶುವಿಗೆ ಕನಿಷ್ಠ ಮೊದಲ ಆರು ತಿಂಗಳವರೆಗೆ ಹಾಲುಣಿಸುವುದು ಅವಶ್ಯಕ. ಮಗುವಿಗೆ ಆರಂಭದ ದಿನಗಳಲ್ಲಿ ತಾಯಿ ನೀಡುವ ಹಾಲು ಅಪಾರ ಪ್ರಯೋಜನಗಳನ್ನು ಹೊಂದಿದೆ. ಮಗು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಸ್ತನ್ಯಪಾನವು (Breast feeding) ಜಠರಗರುಳಿನ ಸೋಂಕುಗಳು ಮತ್ತು ಉಸಿರಾಟದ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನವು ಅಲರ್ಜಿಯನ್ನು ಸಹ ಕಡಿಮೆ ಮಾಡುತ್ತದೆ.

2. ಮಕ್ಕಳಿಗೆ ಲಸಿಕೆ ಹಾಕಿಸಿ: ಡೆಂಗ್ಯೂ, ಮಲೇರಿಯಾ, ಕೋವಿಡ್-19, ಇತ್ಯಾದಿಗಳು ಹರಡುತ್ತಿರುವಾಗ, ರೋಗ ನಿರೋಧಕ ಶಕ್ತಿಯನ್ನು ಹಚ್ಚಿಸಿಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಮಕ್ಕಳಿಗೆ ತಪ್ಪದೇ ವೈದ್ಯರು ಸೂಚಿಸುವ ಲಸಿಕೆ (Vaccine)ಯನ್ನು ಹಾಕಿಸಿ. ಸೋಂಕುಗಳನ್ನು ಕಡಿಮೆ ಮಾಡಲು ಫ್ಲೂ ಮತ್ತು ನ್ಯುಮೋಕೊಕಲ್ ಲಸಿಕೆಗಳ ಸಮಯೋಚಿತ ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಪೋಷಕರು ಅನುಸರಿಸಬೇಕು.

3. ಆರೋಗ್ಯಕರ ಆಹಾರ ನೀಡಿ: ದೇಹ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಹೊಂದಿರಬೇಕಾದರೆ ಮಕ್ಕಳು ಸೇವಿಸುವ ಆಹಾರ (Food) ಸಹ ಪೋಷಕಾಂಶಯುಕ್ತವಾಗಿರಬೇಕು. ಚಳಿಗಾಲದಲ್ಲಿ, ನಿಮ್ಮ ಮಕ್ಕಳಿಗೆ ಉಷ್ಣತೆ ಮತ್ತು ಶಕ್ತಿಯನ್ನು ಒದಗಿಸುವ ಆರೋಗ್ಯಕರ ಆಹಾರವು ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಗೆ ಅತ್ಯಂತ ಮುಖ್ಯವಾಗಿದೆ. ಮಕ್ಕಳ ಆಹಾರದಲ್ಲಿ ಫೈಬರ್ ಅಂಶವುಳ್ಳ ತಿನಿಸು, ಹಣ್ಣುಗಳು ಮತ್ತು ತರಕಾರಿಗಳು ಸಮೃದ್ಧವಾಗಿರಬೇಕು. ಕಿತ್ತಳೆ, ದ್ರಾಕ್ಷಿಹಣ್ಣು, ಬೆರಿಹಣ್ಣುಗಳು, ಸೇಬುಗಳು ಮತ್ತು ಪೇರಳೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಾಗಿವೆ. ಮೀನು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. 

Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ

4. ನಿಯಮಿತವಾಗಿ ಕೈ ತೊಳೆಯುವುದನ್ನು ಉತ್ತೇಜಿಸಿ: ಸುಮಾರು 80 ಪ್ರತಿಶತದಷ್ಟು ಸೋಂಕುಗಳು ಸ್ಪರ್ಶದಿಂದ ಹರಡುತ್ತವೆ, ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಕೈ ತೊಳೆಯುವುದು ಹೇಗೆ ಎಂಬ ಸರಿಯಾದ ತಂತ್ರವನ್ನು ಕಲಿಸಬೇಕು. ಸೀನು ಮತ್ತು ಕೆಮ್ಮಿನ ನಂತರ ಯಾವಾಗಲೂ ಕೈ ತೊಳೆಯುವಂತೆ ಅವರಿಗೆ ಸೂಚಿಸಬೃಕು. ನೀರು ಮತ್ತು ಸಾಬೂನಿನಿಂದ ಕೈಗಳನ್ನು ತೊಳೆಯುವುದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತೆಗೆದುಹಾಕುತ್ತದೆ ಮತ್ತು ಸೋಂಕನ್ನು ಕಡಿಮೆ ಮಾಡುತ್ತದೆ.

5. ಸರಿಯಾದ ನಿದ್ರೆ: ಮಕ್ಕಳು ಸಾಕಷ್ಟು ನಿದ್ದೆ (Sleep) ಮಾಡುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಮಕ್ಕಳ ನಿದ್ರೆಯ ಅವಶ್ಯಕತೆಗಳು ವಯಸ್ಸಿನೊಂದಿಗೆ ಬದಲಾಗುತ್ತವೆ. 0ರಿಂದ 3 ತಿಂಗಳ ಮಕ್ಕಳು ಸುಮಾರು 15 ರಿಂದ 16 ಗಂಟೆಗಳ ಕಾಲ ನಿದ್ರಿಸುತ್ತಾರೆ, 4 ರಿಂದ 12 ತಿಂಗಳ ನಡುವಿನವರು 12 ರಿಂದ 15 ಗಂಟೆಗಳ ನಿದ್ದೆ ಮಾಡಬೇಕಾಗುತ್ತದೆ ಮತ್ತು ಇದರ ನಂತರ ಮಕ್ಕಳಲ್ಲಿ ನಿದ್ರೆಯ ಅವಶ್ಯಕತೆ ಕ್ರಮೇಣ ಕಡಿಮೆಯಾಗುತ್ತದೆ. ಸುಮಾರು 9 ರಿಂದ 12 ಗಂಟೆಗಳವರೆಗೆ. ಮಗುವಿಗೆ ಸಾಕಷ್ಟು ನಿದ್ರೆ ಸಿಗದಿದ್ದಾಗ ಅದು ಕಡಿಮೆ ಪ್ರೋಟೀನ್‌ಗಳಿಗೆ ಕಾರಣವಾಗುತ್ತದೆ, ವಿಶೇಷವಾಗಿ ಸೈಟೊಕಿನ್‌ಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

6. ವ್ಯಾಯಾಮ: ನಿಯಮಿತ ವ್ಯಾಯಾಮ (Exercise)ದಿಂದ ಮಕ್ಕಳನ್ನು ಸಕ್ರಿಯವಾಗಿ ಮಾಡುವುದರಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಟಿ ಕೋಶಗಳ ಸಂಖ್ಯೆಯನ್ನು ದೇಹದಲ್ಲಿ ಹೆಚ್ಚಿಸಬಹುದು. ಯೋಗ, ನೃತ್ಯ ಅಥವಾ ಇತರ ಕೆಲವು ವ್ಯಾಯಾಮಗಳನ್ನು ಮಾಡಬಹುದು.

click me!