ಮುಡಾ ಹಗರಣ: ಲೋಕಾಯುಕ್ತ ಸರ್ಕಾರದ ಕೈಗೊಂಬೆ, ಎಚ್. ವಿಶ್ವನಾಥ್

Published : Jan 28, 2025, 09:42 AM IST
ಮುಡಾ ಹಗರಣ: ಲೋಕಾಯುಕ್ತ ಸರ್ಕಾರದ ಕೈಗೊಂಬೆ,  ಎಚ್. ವಿಶ್ವನಾಥ್

ಸಾರಾಂಶ

ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಖಂಡಿಸಿದರು. ಸಿಎಂ ಅದಾಗಲೆಲ್ಲಾ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ಕೊಡ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ ಎಂದು ಕಿಡಿಕಾರಿದ ಎಚ್. ವಿಶ್ವನಾಥ್ 

ಮೈಸೂರು(ಜ.28): ಸಿದ್ದರಾಮಯ್ಯ ಸಿಎಂ ಆದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ರಾಜವಂಶಸ್ಥರೊಂದಿಗೆ ಕುಳಿತು ಮಾತನಾಡಿ ಸೆಟಲ್ಲೆಂಟ್ ಮಾಡಬಹುದಿತ್ತು ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಖಂಡಿಸಿದರು. ಸಿಎಂ ಅದಾಗಲೆಲ್ಲಾ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ಕೊಡ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವವಾದಿ ತಾನು ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆ. ಸಿಎಂ ಈ ರೀತಿ ನಡೆದುಕೊಳ್ಳಬಾರದು ಎಂದು ಅವರು ಹೇಳಿದರು. 

ಲೋಕಾಯುಕ್ತ ಕೈಗೊಂಬೆ: 

ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ನೀಡಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು. ಲೋಕಾಯುಕ್ತ ಸರ್ಕಾರದ ಕೈಗೊಂಬೆ. ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡೋದು ಸರ್ಕಾರ. ಸರ್ಕಾರದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ದೂರಿದರು. 

ಇಡೀ ದೇಶದಲ್ಲೇ ಇಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದೆಯಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್‌ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಗಂಭೀರವಾಗಿ ತೆಗೆದುಕೊಂಡಿಲ್ಲ? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೋ ಶಾಸಕರ ಅಧಿಕಾರಿಗಳಾಗಬಾರದು ಎಂದರು. 

ಶ್ರೀರಾಮುಲು ಪರ ಬ್ಯಾಟಿಂಗ್: 

ಜನಾರ್ಧನ ರೆಡ್ಡಿ- ಶ್ರೀರಾಮುಲು ನಡುವೆ ವೈಮನಸ್ಸು ಕುರಿತು ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅವರು, ಜನಾರ್ಧನ ರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ, ದುಡ್ಡನು ಅವರಪ್ಪನ ಮನೆಯಿಂದ ತಂದಿದ್ದಾ? ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು. ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದು ಎಂದರು. ಎಲ್ಲಾ ಪಕ್ಷದಲ್ಲೂ ಡಮ್ಮಿ ವರಿಷ್ಠರು: ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಇರೋರು ಡಮ್ಮಿ ವರಿಷ್ಠರು. ಯಾರೋ ಹೇಳಿದ್ದನ್ನು ಬಂದು ಹೇಳುವ ವರಿಷ್ಠರು ಇದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಇದೇ ತರಹದ ವರಿಷ್ಠರು ಇದ್ದಾರೆ. ವಿಜಯೇಂದ್ರ ಯಾರು? ಯಡಿಯೂರಪ್ಪ ಯಾರು? ಎಂದು ಎಲ್ಲರಿಗೂ ಗೊತ್ತು. ವಿಜಯೇಂದ್ರಗೆ ಅಧಿಕಾರ ಮಾಡಲು ಯತ್ನಾಳ್ ಗುಂಪು ಬಿಡುತ್ತಿಲ್ಲ. ನನ್ನ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ನನ್ನನ್ನು ಬಿಜೆಪಿ ಸಭೆಗೆ ಕರೆಯೋದಿಲ್ಲ. ಸಭೆಯಲ್ಲಿ ಎಲ್ಲಿ ನಾನು ಕೆಲವು ವಿಷಯ ಬಾಯಿ ಬಿಡುತ್ತೇನೋ ಎ೦ದು ಕರೆಯೋದಿಲ್ಲ. ಮೈಸೂರಿನ ಬಿಜೆಪಿಯವರು ಕರೆಯೋದಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಸಭೆಗೂ ಕರೆದಿಲ್ಲ ಎಂದರು. 

ಜಿಟಿಡಿ ಕುಟುಂಬ ಪಾತ್ರವಿದೆ : 

ಮುಡಾ ಹಗರಣದಲ್ಲಿ ಶಾಸಕ ಜಿ.ಟಿ ದೇವೇಗೌಡ ಕುಟುಂಬದವರ ಹೆಸರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಶಾಸಕ ಜಿ.ಟಿ. ದೇವೇಗೌಡರಿಂದ ಸಿಎಂ ಮೆಚ್ಚಿಸುವ ಕೆಲಸ ಆಗ್ತಿದೆ. ತಮ್ಮ ಹಗರಣದಿಂದ ತಪ್ಪಿಸಿಕೊಳ್ಳಲು ಇಷ್ಟೆಲ್ಲ ಯತ್ನ ನಡೆಯುತ್ತಿದೆ. ಹಗರಣ ಮುಚ್ಚಿಕೊಳ್ಳಲು ಸಿಎಂ ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಜಿಟಿಡಿ ಕುಟುಂಬದ ಪಾತ್ರ ಇದೆ. ಆದರೆ, ಜಿಟಿಡಿ ಪುತ್ರ, ಶಾಸಕ ಹರೀಶ್ ಗೌಡನ ಪಾತ್ರವಿಲ್ಲ. ಜಿಟಿಡಿ ಜೆಡಿಎಸ್ ಬಿಟ್ಟರೂ ಏನು ತೊಂದರೆ ಆಗೋದಿಲ್ಲ. ಜೆಡಿಎಸ್ ಗೆ ಬಂದು ಎಲ್ಲರನ್ನು ಗೆಲ್ಲಿಸಿದ್ದಾರಾ ಎಂದು ಪ್ರಶ್ನಿಸಿದರು. 

ಡಮ್ಮಿ ಹೋಂ ಮಿನಿಸ್ಟರ್‌: 

ರಾಜ್ಯದಲ್ಲಿ ದರೋಡೆ ಪ್ರಕರಣ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಡಾ. ಪರಮೇಶ್ವರ್‌ ಒಬ್ಬ ಡಮ್ಮಿ ಹೋಮ್ ಮಿನಿಸ್ಟರ್‌. ಅವರು ಸಬ್ ಇನ್ಸ್ ಪೆಕ್ಟರ್ ವರ್ಗಾವಣೆಗಳಿಗಷ್ಟೇ ಸೀಮಿತವಾಗಿದ್ದಾರೆ. ಗೃಹ ಇಲಾಖೆಯ ಎಲ್ಲಾ ಅಧಿಕಾರ ಸಿಎಂ ಬಳಿಯೇ ಇದೆ. ರಾಜ್ಯದ ಬೆಳವಣಿಗೆ ನೋಡಿದರೆ ಹೋಮ್ ಮಿನಿಸ್ಟರ್‌ ಡಮ್ಮಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ