
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ 27) : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗ ಹಳ್ಳದ ನೀರು ಕಲುಷಿತಗೊಳ್ಳುತ್ತಿದ್ದು ನೀರಿನ ಬಣ್ಣವೇ ಬದಲಾವಣೆ ಆಗುತ್ತಿದೆ. ಕುಡಿಯುವ ನೀರಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಮನುಷ್ಯರ ಆರೋಗ್ಯದ ಜೊತೆಗೆ ಜಲಚರ ಪ್ರಾಣಿಗಳ ಜೀವಕ್ಕೂ ಕಂಟಕ ಎದುರಾಗಿದೆ.
ಹರಪನಹಳ್ಳಿ: ಕಲುಷಿತ ನೀರು ಸೇವಿಸಿ 2 ಸಾವು, 15 ಮಂದಿ ಆಸ್ಪತ್ರೆಗೆ ದಾಖಲು
ಕುಡಿಯುವ ನೀರಿಗೆ ಕಾಫಿ ಪಲ್ಪರ್ ನೀರು:
ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕೆಲ ಕಾಫಿಬೆಳೆಗಾರರು ಕುಡಿಯುವ ನೀರಿಗೆ ಕಾಫಿ ಪಲ್ಪರ್ ನೀರು ಬಿಡುವುದರ ಮೂಲಕ ಕಲುಷಿತಗೊಳಿಸುತ್ತಿರುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪವಿರೋ ಆನೆ ಹಳ್ಳಕ್ಕೆ ಕಾಫಿ ಪಲ್ಪರ್ ನೀರು ಬಿಡಲಾಗುತ್ತಿದೆ ಎಂದು ಅರೇನೂರು ಸುಪ್ರೀತ್ ಆರೋಪಿಸಿದ್ದಾರೆ. ಆನೆ ಹಳ್ಳದ ನೀರು ಅರೇನೂರು ಗ್ರಾಮ ಸೇರಿದಂತೆ ಐದು ಹೆಚ್ಚು ಗ್ರಾಮಗಳ ಜನರ ಕುಡಿಯುವ ನೀರಿನ ಮೂಲವಾಗಿದೆ. ಎಸ್ಟೇಟ್ ನ ಮಾಲೀಕರು ಕಾಫಿ ಪಲ್ಪರ್ ನೀರು ಬಿಡುವುದರ ಮೂಲಕ ಕಲುಷಿತಗೊಳಿಸುತ್ತಿದ್ದಾರೆ. ಇದರಿಂದ ಮನುಷ್ಯರ ರೋಗದ ಮೇಲೆ ಕಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಜೊತೆಗೆ ಹಳ್ಳದಲ್ಲಿರುವ ಮೀನು ಸೇರಿದಂತೆ ಜಲಚರ ಪ್ರಾಣಿಗಳ ಜೀವಕ್ಕೂ ಕಂಟಕ ಎದುರಾಗಿದೆ.
ಒಂದೇ ವಾರದಲ್ಲಿ ಬೋಳು ತಲೆ; 3 ಗ್ರಾಮದ ಜನರಲ್ಲಿ ಶುರುವಾಯ್ತು ಆತಂಕ, ತನಿಖೆ ಆರಂಭ!
ಕಪ್ಪು ಬಣ್ಣಕ್ಕೆ ಹಳ್ಳದ ನೀರು :
ಈ ಭಾಗದ ಕಾಫಿಬೆಳೆಗಾರರು ಕಾಫಿಯನ್ನ ಪಲ್ಪರಿಂಗ್ ಮಾಡಿ ಪಲ್ಪರಿಂಗ್ನ ವೇಸ್ಟ್ ನೀರನ್ನ ಹಳ್ಳದ ಒಡಲಿಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹೋದ್ರೆ, ಬೇಸಿಗೆಯಲ್ಲಿ ನೀರಿಗೆ ಬಣ್ಣವಿಲ್ಲದಿದ್ದರೂ ಶುಭ್ರವಾಗಿ ಹರಿಯುತ್ತೇದೆ. ಆದರೆ, ಕಾಫಿತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನ ನೇರವಾಗಿ ಹಳ್ಳಕ್ಕೆ ಸೇರಿಸುತ್ತಿರೋದ್ರಿಂದ ಸ್ವಚ್ಛವಾಗಿ ಹರಿಯುವ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ನೀರು ಕೂಡ ದುರ್ವಾಸನೆ ಬೀರುತ್ತಿದೆ. ಇದು ಸ್ಥಳಿಯರು ಆಕ್ರೋಶಕ್ಕೂ ಕಾರಣವಾಗಿದೆ. ಕಾಫಿ ಪಲ್ಪರ್ ಮಾಡಿದ ನೀರನ್ನ ಇಂಗು ಗುಂಡಿ ಮೂಲಕ ಇಂಗಿಸಬೇಕು. ಅಧಿಕಾರಿಗಳು ಇತ್ತ ಸೂಕ್ತ ಗಮನ ಹರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ. ಒಟ್ಟಾರೆ ಕೆಲ ಬೆಳೆಗಾರರ ಬೇಜವಾಬ್ದಾರಿ ವರ್ತನೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ. ಇಲ್ಲವಾದರೆ, ನಾಡಿನ ಜೀವಜಲ ಜನ-ಜಾನುವಾರುಗಳ ಪಾಲಿಗೆ ವಿಷಜಲವಾಗೋದು ಗ್ಯಾರಂಟಿ.