Mandya Politics: ಸಂಸದೆ ಸುಮಲತಾ ಸೇರಿ ಅನೇಕರ ಮನ ಒಲಿಸಿದ ಕಿಂಗ್ ಮೇಕರ್‌ : ಕೈಗೊಲಿದ ಜಯ

By Kannadaprabha NewsFirst Published Dec 15, 2021, 12:39 PM IST
Highlights
  •  ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ನೆಲೆ ಕೊಡಿಸಿದ ಗೂಳಿಗೌಡ
  • ಜೆಡಿಎಸ್‌ ಭದ್ರಕೋಟೆ ಛಿತ್ರ ಮಾಡಿ, ಬಿಜೆಪಿಯನ್ನೂ ಧೂಳಿಪಟ ಮಾಡಿದ ಕಾಂಗ್ರೆಸ್ಸಿಗ
  • ಒಬ್ಬನೇ ಕಾಂಗ್ರೆಸ್‌ ಶಾಸಕ ಇಲ್ಲದಿದ್ದರೂ ಜಯಗಳಿಸಿದ ದಿನೇಶ್‌

  ಬೆಂಗಳೂರು (ಡಿ.15): ಜೆಡಿಎಸ್‌ (JDS) ಭದ್ರ ಕೋಟೆಯನ್ನು ಛಿದ್ರಗೊಳಿಸಿದ್ದು ಅಲ್ಲದೇ ನೆಲೆಯೂರಲು ಹವಣಿಸುತ್ತಿದ್ದ ಬಿಜೆಪಿಯನ್ನೂ (BJP) ಧೂಳಿಪಟ ಮಾಡಿರುವ ಕಾಂಗ್ರೆಸ್‌ (Congress) ಅಭ್ಯರ್ಥಿ ದಿನೇಶ್‌ ಗೂಳಿಗೌಡ ಮತ್ತೆ ಮಂಡ್ಯದಲ್ಲಿ (Mandya) ಕಾಂಗ್ರೆಸ್‌ (Congress) ಮತ್ತೆ ನೆಲೆ ಕಂಡುಕೊಳ್ಳುವ ದಾರಿ ಸುಗಮಗೊಳಿಸಿದ್ದಾರೆ.  ಜಿಲ್ಲೆಯ ಏಳು ವಿಧಾನಸಭಾ (Assembly election ) ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್‌ ಶಾಸಕರಿದ್ದು, ಕೆ.ಆರ್‌.ನಗರದಲ್ಲಿ ಗೆದ್ದಿರುವ ಕೆ.ಸಿ.ನಾರಾಯಣಗೌಡ ಮಂಡ್ಯ (Mandya) ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಜೊತೆಗೆ ತಮ್ಮ ಪ್ರತಿಸ್ಪರ್ಧಿ ವಿಧಾನ ಪರಿಷತ್ತು ಹಾಲಿ ಸದಸ್ಯರಾಗಿದ್ದರೂ ಅವರ ವಿರುದ್ಧ ದಿನೇಶ್‌ ಗೂಳಿಗೌಡ 167 ಮತಗಳ ಅಂತರದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

14 ವರ್ಷ ಕಾಲ ಮಾಧ್ಯಮ ಉಸ್ತುವಾರಿ:  ಮೂಲತಃ ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮಾರ ಸಿಂಗನಹಳ್ಳಿಯ ರೈತನ ಮಗನಾದ ದಿನೇಶ್‌ ಗೂಳಿ ಗೌಡ ಅವರು, 1988ರಲ್ಲಿ ಎಸ್‌.ಎಂ.ಕೃಷ್ಣ (SM Krishan) ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ (Congress) ಸೇರ್ಪಡೆಗೊಂಡಿದ್ದರು. ನಾಲ್ಕು ವರ್ಷದ ಬಳಿಕ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾಧ್ಯಮ ಉಸ್ತುವಾರಿಯಾಗಿ ಸೇರ್ಪಡೆಗೊಂಡ ಅವರು ಸುಮಾರು 14 ವರ್ಷಗಳ ಕಾಲ ಮಾಧ್ಯಮ ಉಸ್ತುವಾರಿಯಾಗಿಯೇ ಕೆಲಸ ಮಾಡಿದ್ದರು.

2013ರಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್‌ (Congress) ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ (Dr Parameshwar) ಅವರ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಿ.ಪರಮೇಶ್ವರ್‌ (G parameshwat) ಅವರ ವಿಶೇಷಾಧಿಕಾರಿಯಾಗಿದ್ದರು. ನಂತರ ಎಸ್‌.ಟಿ. ಸೋಮಶೇಖರ್‌ (ST Somashekar) ಜೊತೆಗೆ ಹೋಗಿದ್ದ ದಿನೇಶ್‌ ಗೂಳಿಗೌಡ ಅವರಿಗೂ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕಾಂಗ್ರೆಸ್‌ನಿಂದ (Congress) ಟಿಕೆಟ್‌ ಪಡೆದು ಮಂಡ್ಯ ವಿಧಾನ ಪರಿಷತ್‌ ( ಸ್ಪರ್ಧಿಸಿದ್ದರು.

ಗೆಲುವಿನ ಪ್ರಮುಖ ರೂವಾರಿ ಚೆಲುವರಾಯಸ್ವಾಮಿ:

ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರೇ ದಿನೇಶ್‌ (Dinesh) ಗೂಳಿಗೌಡ ಅವರ ಗೆಲುವಿನ ಪ್ರಮುಖ ರುವಾರಿ. ಮಂಡ್ಯ (Mandya) ಜಿಲ್ಲೆಯಲ್ಲಿ ಒಂದೇ ಒಂದು ಶಾಸಕರನ್ನೂ ಹೊಂದಿಲ್ಲದ ಕಾಂಗ್ರೆಸ್‌ (Congress) ವಿಧಾನ ಪರಿಷತ್‌ ಚುನಾವಣೆಯಲ್ಲಿ (Election) ಜಯಭೇರಿ ಭಾರಿಸಲು ಚೆಲುವರಾಯ ಸ್ವಾಮಿ(Cheluvarayaswamy) ಅವರೇ ಪ್ರಮುಖ ಕಾರಣ. ಇಲ್ಲಿ ಪ್ರತಿ ಚುನಾವಣೆಯಲ್ಲೂ ಗುಂಪುಗಾರಿಕೆ ಇದ್ದದ್ದೆ. ಆದರೆ, ಪುಟ್ಟಣಯ್ಯ ಅವರ ಮಗ ದರ್ಶನ್‌ ಪುಟ್ಟಣ್ಣಯ್ಯ, ಸಚಿವ ಕೆ.ಸಿ.ನಾರಾಯಣ ಸ್ವಾಮಿ (KC Narayanaswamy), ಸಂಸದೆ ಸುಮಲತಾ Sumalatha) ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಮನವೊಲಿಸಿ ಕಾಂಗ್ರೆಸ್‌ ಪರ ವಾತಾವರಣ ಸೃಷ್ಟಿಸಿದ್ದು ಚೆಲುವರಾಯ ಸ್ವಾಮಿ. ಇದಕ್ಕೆ ಪೂರಕವಾಗಿ ದಿನೇಶ್‌ ಗೂಳಿಗೌಡ ಅವರು ಕ್ಷೇತ್ರದ ಎಲ್ಲೆಡೆ ವ್ಯವಸ್ಥಿತ ಕ್ಯಾಂಪೇನ್‌ ನಡೆಸಿ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ತಲುಪಿ ಓಲೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಕಾರಣವಾಗಿದೆ.

ಕಾಂಗ್ರೆಸ್‌ನ (Congress) ಸಾಮಾನ್ಯ ಕಾರ್ಯಕರ್ತ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುವಲ್ಲಿ ಸಾಕಷ್ಟು ಶ್ರಮಿಸಿದ್ದು ಮಂಡ್ಯದಲ್ಲಿ (Mandya) ಜೆಡಿಎಸ್‌ (JDS) ಪ್ರಾಬಲ್ಯದ ಕೊಂಡಿಯನ್ನು ಕಳಚಿದ್ದಾರೆ.

ಕಾಂಗ್ರೆಸ್‌ (Congress) ನನಗೆ ಅನ್ನವನ್ನು ಕೊಟ್ಟಿತ್ತು. ನನ್ನ ಮೇಲೆ ವಿಶ್ವಾಸವಿಟ್ಟು ಮಂಡ್ಯ (Mandya) ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿತು. ಮಂಡ್ಯ ಕಾಂಗ್ರೆಸ್‌ ನಾಯಕರ ಸಾಮೂಹಿಕ ಒಗ್ಗಟ್ಟಿನ ಪ್ರಯತ್ನ ಗೆಲುವು ಸಾಧ್ಯವಾಗಿದೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಬೆಂಬಲ ಹಾಗೂ ಚೆಲುವರಾಯಸ್ವಾಮಿ ಮತ್ತು ಅವರ ತಂಡ ಸೈನಿಕರಂತೆ ಕಾರ್ಯ ನಿರ್ವಹಿಸಿದ್ದು ಮಂಡ್ಯದಲ್ಲಿ ಪಕ್ಷದ ಗೆಲುವಿಗೆ ಮುಖ್ಯ ಕಾರಣ.

- ದಿನೇಶ್‌ ಗೂಳಿಗೌಡ

click me!