Council Election Result : ಕಾಂಗ್ರೆಸ್‌ ಗೆಲುವು : ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ಸೂಚನೆ

By Kannadaprabha News  |  First Published Dec 15, 2021, 11:39 AM IST
  • ಕಾಂಗ್ರೆಸ್‌ ಗೆಲುವು : ಅಧಿಕಾರಕ್ಕೆ ಬರುವ ಮುನ್ಸೂಚನೆ 
  • ವಿಜಯೋತ್ಸವದಲ್ಲಿ  ಕಾಂಗ್ರೆಸ್‌  ಮುಖಂಡ ಹೇಮಂತ್‌ಕುಮಾರ್‌ ಹೇಳಿಕೆ
     

 ಹೊಸಕೋಟೆ (ಡಿ.15):  ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲಾ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿದ್ದ ಎಸ್‌.ರವಿಯವರು ಗೆಲುವು ಸಾಧಿ​ಸಿದ್ದು, ಜಿಲ್ಲೆಯಲ್ಲಿ ಮುಂದಿನ ರಾಜಕೀಯಕ್ಕೆ (Politics) ದಿಕ್ಸೂಚಿಯಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ (congress) ಅಧ್ಯಕ್ಷ ಹೇಮಂತ್‌ ಕುಮಾರ್‌ ತಿಳಿಸಿದರು.  ಎಂಎಲ್ಸಿ ರವಿ ಅವರ ವಿಜಯದ ಹಿನ್ನೆಲೆಯಲ್ಲಿ ನಗರದ ಕೆಇಬಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ (BJP) ಸರ್ಕಾರದ ಜನ ವಿರೋ​ಧಿ ಆಡಳಿತಕ್ಕೆ ಮತದಾರ ಸದಸ್ಯರು ಬೇಸತ್ತಿದ್ದು ಹೆಚ್ಚಿನ ಮತಗಳ ಅಂತರದಿಂದ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆ (Election), ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲೂ (Loksabha Election) ಕಾಂಗ್ರೆಸ್‌ (congress) ಪಕ್ಷ ಸ್ಪಷ್ಟ  ಬಹುಮತ ಪಡೆಯುವುದರ ಮೂಲಕ ಅ​ಧಿಕಾರದ ಚುಕ್ಕಾಣಿ ಹಿಡಿಯಲಿದೆ. ಜೆಡಿಎಸ್‌ (JDS) ಪಕ್ಷ ಬಿಜೆಪಿ ಪಕ್ಷದ ಬಿ.ಟೀಮ್‌ ಆಗಿ ಕೆಲಸ ಮಾಡಿದರೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್‌ (Congress) ಪಕ್ಷವನ್ನು ಮಣಿಸಲು ಸಾಧ್ಯವಾಗಿಲ್ಲ. ಆಡಳಿತಾರೂಡ ಬಿಜೆಪಿ ಪಕ್ಷ 12 ಸ್ಥಾನ ಪಡೆದಿದೆ. ಆದರೆ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌ ಕೂಡ ಏಕಾಂಗಿಯಾಗಿ ಹೋರಾಟ ಮಾಡಿ 11 ಸ್ಥಾನ ಗಳಿಸಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ (congress) ಉಜ್ವಲ ಭವಿಷ್ಯ ಧಕ್ಕುವುದು ನಿಶ್ಚಿತ ಎಂದರು.

Tap to resize

Latest Videos

undefined

ಕಾಂಗ್ರೆಸ್‌ ಓಬಿಸಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC)  ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಬಲಗೊಳ್ಳುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಶರತ್‌ ಬಚ್ಚೇಗೌಡರು ಕಾಂಗ್ರೆಸ್‌ ಪಕ್ಷದಿಂದ ಸ್ಪ​ರ್ಧಿಸಿ ವಿಜೇತರಾಗುವುದು ನಿಶ್ಚಿತ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತಷ್ಟುತನ್ನ ಅಸ್ತಿತ್ವನ್ನು ವಿಸ್ತರಿಸಿಕೊಂಡಿದ್ದು, ನಾಲ್ಕು ತಾಲೂಕಿನಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ (Congress) ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ  ಜಹೀರ್‌, ಶಬ್ಬೀರ್‌, ಮೌಲಾ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಶೋಭಾ, ಬ್ಲಾಕ್‌ ಕಾಂಗ್ರೆಸ್‌ (Congress) ಅಧ್ಯಕ್ಷರಾದ ಹೇಮಲತಾ, ಮಂಜುಳಾ, ಕಾರ್ಯದರ್ಶಿ ಸರಿತಾ, ಕಾಂಗ್ರೆಸ್‌ ಮುಖಂಡರಾದ ಮಮತಾ, ಮೀನಾಕ್ಷಿ, ರೇಣಾಕಾ ಬಾಯಿ ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ ಎಂಬದನ್ನು ಸಾಬೀತು

 ಟಿ. ನರಸೀಪುರ :  ಮೈಸೂರು - ಚಾಮರಾಜನಗರ (Mysuru - Chamarajanagar) ದ್ವಿಸದಸ್ಯ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ. ಡಿ. ತಿಮ್ಮಯ್ಯ ಮೊದಲ ಸುತ್ತಿನಲ್ಲೇ ವಿಜೇತರಾಗುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ ಎಂಬದನ್ನು ಸಾಬೀತುಪಡಿಸಿದ್ದಾರೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಎನ್‌. ಸೋಮು ಹೇಳಿದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಕಾಂಗ್ರೆಸ್‌ (Congress) ಮುಖಂಡರು ವಿಧಾನ ಪರಿಷತ್‌ ಸದಸ್ಯ ಡಾ. ಡಿ. ತಿಮ್ಮಯ್ಯನವರ ವಿಜಯೋತ್ಸವವನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ ನಂತರ ಅವರು ಮಾತನಾಡಿದರು.

ಮುಂಬರುವ 2023ರ ಚುನಾವಣೆಯಲ್ಲಿ (Election) ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು. ರಾಜ್ಯ ಕಾಂಗ್ರೆಸ್‌ ಪ್ರತಿಪಕ್ಷದಲ್ಲಿದ್ದರು 11 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಅಲೆ ಪ್ರಾರಂಭವಾಗಿದೆ ಎಂಬದನ್ನು ಚುನಾಯಿತ ಪ್ರತಿನಿಧಿಗಳು ಸಾಬೀತುಪಡಿಸಿದ್ದಾರೆ ಎಂದರು.

ಪುರಸಭಾ ಅಧ್ಯಕ್ಷ ಮದನ್‌ರಾಜ ಮಾತನಾಡಿದರು. ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜಾದ್‌ಖಾನ್‌, ಗರ್ಗೇಶ್ವರಿ ಗ್ರಾಪಂ ಉಪಾಧ್ಯಕ್ಷ ಮಸ್ರೂರ್‌. ವರುಣ ಯೂತ್‌ ಉಪಾಧ್ಯಕ್ಷ ಲಿಂಗರಾಜು, ಕಿರಗಸೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಆರ್‌. ಮಹದೇವ್‌, ಮಾಜಿ ತಾಪಂ ಸದಸ್ಯ ರಮೇಶ್‌, ಸಹದೇವ್‌, ಕುಪ್ಪೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಬಸವರಾಜ ಇದ್ದರು.

click me!