CAA ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: CM ಇಬ್ರಾಹಿಂ

Kannadaprabha News   | Asianet News
Published : Feb 26, 2020, 03:01 PM IST
CAA ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: CM ಇಬ್ರಾಹಿಂ

ಸಾರಾಂಶ

ನಮ್ಮ ಕೈಯಲ್ಲಿ ಖಡ್ಗವಿಲ್ಲ. ಆದರೆ, ಪ್ರಾರ್ಥನೆ ಮಾಡುವ ಎರಡು ಕೈಗಳಿವೆ| ಹೀಗಾಗಿ ಹೋರಾಟದಿಂದ ನಾವು ಹಿಂದೆ ಸರಿಯಲ್ಲ| ಸರ್ವಶಕ್ತ ನಾದ ಅಲ್ಲಾಹುವಿನಲ್ಲಿ ಪ್ರಾರ್ಥಿಸಿ ಶಕ್ತಿ ನೀಡು ಎಂದು ನಮಾಜ್‌ನಲ್ಲಿ ಪ್ರಾರ್ಥಿಸಿ ಎಂದ ಇಬ್ರಾಹಿಂ|    

ವಿಜಯಪುರ(ಫೆ.26): ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ಮೊಳಗಿಸುವ ಮೋದಿ ಅವರಿಗೆ ಶಹೀನ್ ಭಾಗ್‌ನಲ್ಲಿ ಕುಳಿತ ಮಹಿಳೆಯರು ಕಾಣಲಿಲ್ಲವೇ ಎಂದು ಕೇಂದ್ರ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದ್ದಾರೆ. 

ನಗರದ ಕೊಲ್ಹಾರ ರಸ್ತೆ ಜುಮನಾಳ ಕ್ರಾಸ್ ಬಳಿ ಸೋಮವಾರ ಬಿಜಾಪುರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ‘ಸಂವಿಧಾನ ಉಳಿಸಿ’ ಆಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು ಬೇಟಿ-ಬಚಾವೋ ಬೇಟಿ ಪಡಾವೋ ಎಂದು ಮೋದಿ ಘಂಟಾಘೋಷವಾಗಿ ಹೇಳುತ್ತಾರೆ. ಆದರೆ, ಶಹೀನ್ ಭಾಗದಲ್ಲಿರುವ ಸಹೋದರಿ ಯರು ಮೋದಿ ಅವರ ಕಣ್ಣಿಗೆ ಕಾಣುತ್ತಿಲ್ಲ. ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಅಲ್ಲಿಗೆ ಭೇಟಿ ನೀಡುವ ಪ್ರಯತ್ನವನ್ನು ಮಾಡಲಿಲ್ಲ ಎಂದು ದೂರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಹೀನ ಬಾಗ್ ಶಹೀದ್ ಬಾಗ್ ಆದರೂ ಚಿಂತೆಯಿಲ್ಲ, ಹೋರಾಟದಿಂದ ಹಿಂದೆ ಸರಿಯಲ್ಲ. ಯಾವುದೇ ಪ್ರಯತ್ನಕ್ಕೂ ನಾವು ಬಗ್ಗುವುದಿಲ್ಲ. ನಮ್ಮ ಕೈಯಲ್ಲಿ ಖಡ್ಗವಿಲ್ಲ. ಆದರೆ, ಪ್ರಾರ್ಥನೆ ಮಾಡುವ ಎರಡು ಕೈಗಳಿವೆ. ಹೀಗಾಗಿ ಹೋ ರಾಟದಿಂದ ನಾವು ಹಿಂದೆ ಸರಿಯಲ್ಲ. ಸರ್ವಶಕ್ತ ನಾದ ಅಲ್ಲಾಹುವಿನಲ್ಲಿ ಪ್ರಾರ್ಥಿಸಿ ಶಕ್ತಿ ನೀಡು ಎಂದು ನಮಾಜ್‌ನಲ್ಲಿ ಪ್ರಾರ್ಥಿಸಿ, ಆತನಿಂದ ರಕ್ಷಣೆ ಕೋರಿ, ಆತ್ಮಸ್ಥೈರ್ಯ ನೀಡುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥಿಸಿ ಎಂದು ತಿಳಿಸಿದರು.

ನನ್ನನ್ನು ಸಹ ಐಟಿರೇಡ್ ಎಂಬಿತ್ಯಾದಿ ವಿಷಯದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದರು. ಆದರೆ, ನನ್ನ ಬಳಿ ಇರುವುದು ಜುಬ್ಬಾ -ಪೈಜಾಮಾ ಬಿಟ್ಟು ಏನೂ ಇಲ್ಲ. ತುರ್ತು ಪರಿಸ್ಥಿತಿ ವಿರೋಧಿಸಿ ಅಡ್ವಾಣಿ, ವಾಜಪೇಯಿ ಸೇರಿದಂತೆ ನಾನಾ ನಾಯಕರೊಂದಿಗೆ ಜೈಲಿನಲ್ಲಿ ಇದ್ದವನು ನಾನು, ಜೈಲಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. 
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!