KRSನಿಂದ ತಮಿಳುನಾಡಿಗೆ 5885 ಕ್ಯೂಸೆಕ್ ನೀರು ಬಿಡುಗಡೆ

By Suvarna NewsFirst Published Feb 26, 2020, 2:57 PM IST
Highlights

KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುಗಡೆ ಆರಂಭಿಸಿದ್ದು, ಕೆಆರ್‌ಎಸ್‌ನಲ್ಲಿ ಪ್ರಸ್ತುತ 112.57 ಅಡಿ ನೀರಿದೆ.

ಮಂಡ್ಯ(ಫೆ.26): KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುಗಡೆ ಆರಂಭಿಸಿದ್ದು, ಕೆಆರ್‌ಎಸ್‌ನಲ್ಲಿ ಪ್ರಸ್ತುತ 112.57 ಅಡಿ ನೀರಿದೆ.

KRS ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳ ಕೋಟದಂತೆ ನೀರು ಬಿಡುಗಡೆಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂನಿಂದ ಎರಡು ತಿಂಗಳಿನಿಂದ 5 ಟಿಎಂಸಿ ನೀರು ಬಿಡಬೇಕಿದೆ.

'ಫಿಟ್ ಫಾರ್ ಎನ್‌ಕೌಂಟರ್, ಮುಗಿಸಿಬಡ್ತೀನಿ', ರೌಡಿಗಳಿಗೆ PSI ಅವಾಜ್

ಅಧಿಕಾರಿಗಳು ಡ್ಯಾಂನಿಂದ ತಮಿಳುನಾಡಿಗೆ 2500 ಕ್ಯೂಸೆಕ್ ನೀರು ಬಿಟ್ಟಿದ್ದಾರೆ. ಸದ್ಯ ವಿಸಿ ನಾಲೆ, ತಮಿಳುನಾಡಿಗೆ ಸೇರಿ 5885 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಅಣೆಕಟ್ಟೆಯಲ್ಲಿ ಗರಿಷ್ಠ 124.80 ಅಡಿ ನೀರು ನಿಲ್ಲುತ್ತದೆ. ಪ್ರಸ್ತುತ 112.57 ಅಡಿ ನೀರಿದೆ. ಒಳ ಹರಿವು - 227 ಕ್ಯೂಸೆಕ್ ಇದೆ. ಹೊರ ಹರಿವು - 5885 ಕ್ಯೂಸೆಕ್ ಇದೆ. ಪ್ರಸ್ತುತ ಸಂಗ್ರಹವಾಗಿರುವ ನೀರು - 34.386 ಟಿಎಂಸಿ

click me!