ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ ಈ ರೀತಿ

Published : Aug 03, 2026, 08:30 AM IST
NWKRTC

ಸಾರಾಂಶ

ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.

ಬೆಳಗಾವಿ: ರಾಜ್ಯ ರಾಜಧಾನಿ ಬೆಂಗಳೂರಿಗೆ ಸವದತ್ತಿಯಿಂದ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ನೂತನ ಪಲ್ಲಕ್ಕಿ ಎರಡು ಬಸ್‌ಗಳಿಗೆ ಪೂಜೆ

ನಗರದ ಸಾರಿಗೆ ಘಟಕದಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ನೂತನ ಪಲ್ಲಕ್ಕಿ ಎರಡು ಬಸ್‌ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಸುರಕ್ಷಿತ ಹಾಗೂ ಸುಖಕರ ಪ್ರಯಾಣದ ಹಿತದೃಷ್ಠಿಯಿಂದ ಪ್ರಯಾಣಿಕರಿಗೆ ಈ ನೂತನ ಪಲ್ಲಕ್ಕಿ ಬಸ್‌ಗಳನ್ನು ಸವದತ್ತಿ ಘಟಕಕ್ಕೆ ನೀಡಲಾಗಿದ್ದು, ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಈ ಬಸ್‌ಗಳ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದರು.

ಸಾರಿಗೆ ಘಟಕ ವ್ಯವಸ್ಥಾಪಕ ಅರುಣ ಕಿಟಕಿ ಮಾತನಾಡಿ, ಸವದತ್ತಿ ಘಟಕಕ್ಕೆ ಹೊಸದಾಗಿ ಸ್ಲೀಪರ್ ಬಸ್‌ಗಳು ಬಂದಿರುವುದು ಸಂತಸದ ವಿಷಯವಾಗಿದ್ದು, ಪ್ರತಿನಿತ್ಯ ಸವದತ್ತಿಯಿಂದ ರಾತ್ರಿ ೯ ಗಂಟೆಗೆ ಬೆಂಗಳೂರಿಗೆ ಬಿಡಲಾಗುತ್ತಿದ್ದು, ಬೆಂಗಳೂರಿನಿಂದ ರಾತ್ರಿ ೧೦ ಗಂಟೆಗೆ ಬಿಟ್ಟು ಸವದತ್ತಿಗೆ ಬೆಳಿಗ್ಗೆ ತಲುಪುತ್ತವೆ. ಈ ಭಾಗದಲ್ಲಿನ ಸಾರ್ವಜನಿಕರ ಬೇಡಿಕೆಯಂತೆ ನೂತನ ಬಸ್‌ಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Exclusive: ಕರಾವಳಿ ವಿವಾದದಿಂದ ಕಲಿತ ಪಾಠ ಏನು? ಪ್ರಜ್ವಲ್ ದೇವರಾಜ್ ಮನದಾದಳ ಮಾತು

ಗಿರೀಶ ಮುನವಳ್ಳಿ, ಡಾ.ವೈ.ಎಮ್.ಯಾಕೊಳ್ಳಿ, ಮಲ್ಲಿಕಾರ್ಜುನ ಬೇವೂರ, ಬಿ.ಎನ್.ಪ್ರಭುನವರ, ಪ್ರವೀಣ ರಾಮಪ್ಪನವರ, ಉಮೇಶ ಗೌಡರ, ಆಸೀಫ್ ಬಾಗೋಜಿಕೊಪ್ಪ, ಎಟಿಎಸ್ ಹನಮಂತ ಭೋವಿ, ಗೌರಮ್ಮ ಬೀಟಕ್ಕನವರ, ನಿಂಗಪ್ಪ ನಡಕಟ್ಟಿನ, ಬಸವರಾಜ ಹಂಚಿನಾಳ ಹಾಗೂ ಸಾರಿಗೆ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ

PREV
Read more Articles on
click me!

Recommended Stories

ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ
Karnataka Bandh: ಕಾವೇರಿ ನೀರಿಗಾಗಿ ಮತ್ತೆ ಹೋರಾಟ 13ರಂದು ಕರ್ನಾಟಕ ಬಂದ್ ಫಿಕ್ಸ್, ವಾಪಸ್ ಮಾತೇ ಇಲ್ಲ: ವಾಟಾಳ್