ಪಾಲಿಕೆ ಆಯುಕ್ತರಿಗೂ ಕೊರೊನಾ ಪಾಸಿಟಿವ್, ಸಂಪೂರ್ಣ ಲಾಕ್‌ಡೌನ್‌ಗೆ ಶಾಸಕ ಮನವಿ

Suvarna News   | stockphoto
Published : Jul 12, 2020, 03:29 PM IST
ಪಾಲಿಕೆ ಆಯುಕ್ತರಿಗೂ ಕೊರೊನಾ ಪಾಸಿಟಿವ್, ಸಂಪೂರ್ಣ ಲಾಕ್‌ಡೌನ್‌ಗೆ ಶಾಸಕ ಮನವಿ

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ. ಮಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಲಾಕ್‌ಡೌನ್ ಮಾಡಲು ಒತ್ತಾಯ ಹೆಚ್ಚಿದೆ.

ಮಂಗಳೂರು(ಜು.12): ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ. ಮಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಲಾಕ್‌ಡೌನ್ ಮಾಡಲು ಒತ್ತಾಯ ಹೆಚ್ಚಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳಿಂದ ಅವರಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು.

ದಕ್ಷಿಣ ಕನ್ನಡ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗೋದು ಪಕ್ಕಾ: ಸಚಿವ ಕೋಟ

ಸ್ವಾಬ್ ಟೆಸ್ಟ್ ರಿಪೋರ್ಟ್ ನಲ್ಲಿ ಕೊರೊನಾ ಸೋಂಕಿತರಾಗಿರುವುದು ಧೃಡವಾಗಿದೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು, ಉಳ್ಳಾಲ ಭಾಗದಲ್ಲಿ ಸಂಪರ್ಕಿತ ಸೋಂಕಿತ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಲಾಕ್‌ಡೌನ್‌ಗೆ ಶಾಸಕ ಖಾದರ್ ಆಗ್ರಹ:

ದಕ್ಷಿಣ ಕನ್ನಡ ಜಿಲ್ಲೆಯ‌ ಪರಿಸ್ಥಿತಿ ದಿನೇ ದಿನೇ ಕೈ ಮೀರುತ್ತಿದೆ. ಬೆಂಗಳೂರಿನಂತೆ ಇಲ್ಲೂ ಲಾಕ್ ಡೌನ್ ಮಾಡಿ.ಇನ್ನಷ್ಟು ಆರೋಗ್ಯ ಹಾಗೂ ವೈದ್ಯಕೀಯ ಮೂಲ ಸೌಕರ್ಯ ಸಿದ್ದತೆ ಮಾಡಿ,ಸೂಕ್ತ ಸಮಯ ನೋಡಿ ಪೂರಕ ಯೋಜನೆಯ ಅನುಷ್ಠಾನ ಮಾದರಿ ಸಿದ್ದಪಡಿದ ಬಳಿಕವಷ್ಟೇ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿ.ಇದು ನನ್ನ ವಿನಯ ಪೂರ್ವಕ ಮನವಿ ಎಂದು ಟ್ವೀಟ್ ಮೂಲಕ ಶಾಸಕ ಖಾದರ್ ಸಿಎಂಗೆ ಮನವಿ ಮಾಡಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!