ಲಾಕ್‌ಡೌನ್ ಬಗ್ಗೆ ಕ್ಯಾರೆ ಅನ್ನದೇ ಹೋದರೆ ಜನರಿಗೆ ಅನನುಕೂಲವಾದರೂ ಸರಿ ಸೀಲ್ ಡೌನ್ ಮಾಡಿ ಕೊರೋನಾ ಮಾಹಾಮಾರಿಯನ್ನು ನಿಯಂತ್ರಣಕ್ಕೆ ತರಬೇಕಾದ ಅನಿವಾರ್ಯತೆ ಇದೆ ಎಂದು ನಾಗಮಂಗಲ ಶಾಸಕ ಕೆ. ಸುರೇಶ್ ಗೌಡ ತಿಳಿಸಿದ್ದಾರೆ.
ಮಂಡ್ಯ(ಏ.11): ಲಾಕ್‌ಡೌನ್ ಬಗ್ಗೆ ಕ್ಯಾರೆ ಅನ್ನದೇ ಹೋದರೆ ಜನರಿಗೆ ಅನನುಕೂಲವಾದರೂ ಸರಿ ಸೀಲ್ ಡೌನ್ ಮಾಡಿ ಕೊರೋನಾ ಮಾಹಾಮಾರಿಯನ್ನು ನಿಯಂತ್ರಣಕ್ಕೆ ತರಬೇಕಾದ ಅನಿವಾರ್ಯತೆ ಇದೆ ಎಂದು ನಾಗಮಂಗಲ ಶಾಸಕ ಕೆ. ಸುರೇಶ್ ಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ ಇಡೀ ಮಂಡ್ಯವನ್ನೇ ಸೀಲ್‌ಡೌನ್ ಮಾಡುತ್ತಾರೆ ನೋಡುತ್ತಾರೆ ಇರಿ. ಬರೀ ರೆಡ್‌ಝೋನ್ ಅಲ್ಲ, ಸೀಲ್‌ಡೌನ್‌ನೇ ಮಾಡ್ತಾರೆ. ಎಲ್ಲರೂ ಮನೆ ಒಳಗೆ ಇರಬೇಕಾಗುತ್ತೆ.
undefined
ಸೀಲ್‌ಡೌನ್‌ಗೆ ರಾಜ್ಯ ಸಿದ್ಧ; ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಪೂರೈಕೆ
ಯಾರೂ ಯಾವ ಕಾರಣಕ್ಕೂ ಹೊರಗೆ ಬರಬಾರದು ಎಂದು ಎಷ್ಟೇ ಹೇಳಿದರೂ ಜನರು ಮಾತೇ ಕೇಳುವುದಿಲ್ಲ. ಹೀಗಾಗಿ ಮನುಷ್ಯನ ಜೀವ ಉಳಿದುಕೊಳ್ಳಬೇಕಾದರೆ ಸೀಲ್‌ಡೌನ್ ಅವಶ್ಯಕತೆ ಇದೆ. ಇದಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದು ಹೇಳಿದು.
ಈ ಮಾರ್ಗ ಬಿಟ್ಟು ಪರ್ಯಾಯ ಮಾರ್ಗವೇ ಇಲ್ಲ. ಸದ್ಯಕ್ಕೆ ನಾಗಮಂಗಲದಲ್ಲಿ ಪಾಸಿಟಿವ್ ಇಲ್ಲ ಅನ್ನೋ ನೆಮ್ಮದಿ ಇದೆ. ಮುಂದೆ ಬರೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಈಗಾಗಲೇ ಸೀಲ್ಡೌನ್ ನಂತಹ ಕಠಿಣ ಕ್ರಮ ಅವಶ್ಯಕ.