ಲಾಕ್‌ಡೌನ್‌: ಆಚೆ ಬರಬೇಡಿ ಮನೆ ಬಾಗಿಲಿಗೇ ಬರಲಿದೆ ಪೋಸ್ಟ್‌ ಆಫೀಸ್‌!

Suvarna News   | Asianet News
Published : Apr 11, 2020, 01:36 PM IST
ಲಾಕ್‌ಡೌನ್‌: ಆಚೆ ಬರಬೇಡಿ ಮನೆ ಬಾಗಿಲಿಗೇ ಬರಲಿದೆ ಪೋಸ್ಟ್‌ ಆಫೀಸ್‌!

ಸಾರಾಂಶ

ಬೆಳಿಗ್ಗೆಯಿಂದ ಬಾಗಲಕೋಟೆ ನಗರದ ವಿವಿಧೆಡೆ ಸಂಚರಿಸುತ್ತಿರೋ ಸಂಚಾರಿ ಅಂಚೆ ಕಚೇರಿ| ಗ್ರಾಹಕರು ಯಾವುದೇ ಬ್ಯಾಂಕ್‌ನ ಅಕೌಂಟ್ ಇದ್ರೂ ಹಣ ಸಿಗಲಿದೆ| ಎಇಪಿಎಸ್ ಮುಖಾಂತರ ಅಂಚೆ ಕಚೇರಿ ಸಿಬ್ಬಂದಿ ಗ್ರಾಹಕರಿಗೆ ಹಣ|

ಬಾಗಲಕೋಟೆ(ಏ.11): ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಜನರು ಮನೆ ಬಿಟ್ಟು ಹೊರಗಡೆ ಬರದಿರಲಿ ಎಂಬ ಉದ್ದೇಶದಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ  ಸಂಚಾರಿ ಅಂಚೆ ಕಚೇರಿ ಆರಂಭವಾಗಿದೆ. 

ಸಿಬ್ಬಂದಿ ಸಹಿತ ಇರುವ ಸಂಚಾರಿ ಅಂಚೆ ಕಚೇರಿ ವಾಹನ ನಗರದ ಓಣಿ ಓಣಿಗೂ ಸಂಚಾರ ಮಾಡುತ್ತ ಸೇವೆ ಸಲ್ಲಿಸುತ್ತಿದೆ. ಗ್ರಾಹಕರು ಯಾವುದೇ ಬ್ಯಾಂಕ್‌ನ ಅಕೌಂಟ್ ಇದ್ರೂ ಹಣ ನೀಡುತ್ತಿದ್ದಾರೆ. ಎಇಪಿಎಸ್ ಮುಖಾಂತರ ಅಂಚೆ ಕಚೇರಿ ಸಿಬ್ಬಂದಿ ಗ್ರಾಹಕರಿಗೆ ಹಣ ನೀಡುತ್ತಿದ್ದಾರೆ.

ಮೂವರು ಚಿಕ್ಕ ಮಕ್ಕಳಿಗೆ ಕೊರೋನಾ: ಕರುನಾಡಲ್ಲಿ ಮುಂದುವರಿದ ರುದ್ರ ನರ್ತನ...!

ದಿನಕ್ಕೆ ಒಂದು ಅಕೌಂಟ್‌ಗೆ 10 ಸಾವಿರ ಹಣ ನಿಗದಿ ಮಾಡಿದ್ದು, ಆಧಾರ ಕಾರ್ಡ್‌ ಮೂಲಕ ಅಂಚೆ ಕಚೇರಿ ಸಿಬ್ಬಂದಿ ವ್ಯವಹಾರ ನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪೋಸ್ಟ್ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್ ನಿಂದ ತೊಂದರೆಪಡುತ್ತಿರುವ ಜನರಿಗೆ ಸಂಚಾರಿ ಪೋಸ್ಟ್ ಆಫೀಸ್ ತಸು ನೆಮ್ಮದಿ ತಂದಿದೆ. 
 

PREV
click me!

Recommended Stories

Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?