
ಕೊಪ್ಪಳ(ಏ.11): ಲಾಕ್‌ಡೌನ್ ಹಿನ್ನೆಲೆಯಲ್ಲಿ ತಿನ್ನಲು ಆಹಾರ ಸಿಗದೆ ಪರದಾಡುತ್ತಿದ್ದ ಯಶೋಧಮ್ಮ ಎಂಬ ಮಹಿಳೆಯ ಸುದ್ದಿ ಕನ್ನಡಪ್ರಭ ಪತ್ರಿಕೆಯಲ್ಲಿ ಇಂದು(ಶನಿವಾರ) ಪ್ರಕಟವಾಗಿತ್ತು. ಸುದ್ದಿ ಪ್ರಕಟವಾದ ವಿಷಯ ತಿಳಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸ್ಪಂದಿಸಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಯಶೋಧಮ್ಮ ಎನ್ನುವ ಮಹಿಳೆಯ ಕುಟುಂಬಕ್ಕೆ ಕೂಡಲೇ ರೇಷನ್ ಮುಟ್ಟಿಸುವಂತೆ ಸಂಗಾಪುರ ಪಿಡಿಒಗೆ ಶಾಸಕ ಪರಣ್ಣ ಮುನವಳ್ಳಿ ಸೂಚನೆ ನೀಡಿದ್ದರು. ಶಾಸಕರ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾದ ಪಿಡಿಒ ಯಶೋದಮ್ಮ ಕುಟುಂಬಕ್ಕೆ ರೇಷನ್ ಮುಟ್ಟಿಸಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: 'ಉಪವಾಸ ಇದ್ದೇವೆ, ರೇಷನ್ ಕೊಟ್ಟು ಪುಣ್ಯ ಕಟ್ಕೊಳ್ಳಿ'
ಸಂಗಾಪುರದಲ್ಲಿರುವ ಯಶೋದಮ್ಮ ಕುಟುಂಬಕ್ಕೆ ಮಟ್ಟಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಕೃಷ್ಣಪ್ಪ ವಡ್ಡರಹಟ್ಟಿ ಕ್ಯಾಂಪ್ ಇವರಿಂದ ರೇಷನ್ ವಿತರಣೆಯಾಗಿದೆ. ಹೀಗಾಗಿ ಕಷ್ಟದ ಕಾಲದಲ್ಲಿ ಆಹಾರ ಸಿಗುವಂತೆ ಮಾಡಿದ ಕನ್ನಡಪ್ರಭ ಪತ್ರಿಕೆಗೆ ಯಶೋದಮ್ಮ ಅವರು ಧನ್ಯವಾದ ತಿಳಿಸಿದ್ದಾರೆ.