ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಪುತ್ರಿಯ ವಿವಾಹ ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಬಗ್ಗೆ ಶಾಸಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಏನ್ ಹೇಳಿದ್ರು ಕೇಳಿ.
ಚಿಕ್ಕಬಳ್ಳಾಪುರ(ಮಾ.06): ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಪುತ್ರಿಯ ವಿವಾಹ ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಬಗ್ಗೆ ಶಾಸಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದ್ಧೂರಿ ಮದುವೆ ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ ಈ ಶಾಸಕ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಶ್ರೀರಾಮುಲು ಪುತ್ರಿ ವಿವಾಹದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಶ್ರೀರಾಮುಲು ಮಗಳ ಮದುವೆ ಬಗ್ಗೆ ಸುಬ್ಬಾರೆಡ್ಡಿ ಹೇಳಿಕೆ ನೀಡಿದ್ದು ನಾವೆಲ್ಲ ಬಾಯಿ ಮೇಲೆ ಬೆರಳಿಟ್ಟುಕೊಳ್ಳಬೇಕು. ಅಂತಹ ಅದ್ಧೂರಿ ಮದುವೆಯದು ಎಂದಿದ್ದಾರೆ.
9 ದಿನದ ಉಡುಪಿಗೆ 1.50 ಕೋಟಿ ರೂ.ವಸ್ತ್ರ ಮದುವೆ ಆಭರಣ, ಅಲಂಕಾರಕ್ಕೆ ದುಡ್ಡು ಬೇರೆ!
ಇಂತಹ ಅದ್ಧೂರಿ ಮದುವೆಗಳನ್ನು ಪ್ರೋತ್ಸಾಹಿಸಬೇಡಿ. ಮಾಧ್ಯಮಗಳಲ್ಲಿ ಮದುವೆ ವೀಕ್ಷಿಸಿದೆ. ನನಗೂ ಇದೇ ರೀತಿ ಮಾಡಬೇಕು ಅನಿಸಿಬಿಡ್ತು. ಸಾಲ ಮಾಡಿ ಇಂತಹ ಮದುವೆಗಳು ಮಾಡಲು ಮುಂದಾಗ್ತಾರೆ. ದಯವಿಟ್ಟು ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸಿ ಎಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿದ್ದಾರೆ.
ಸೆಲಬ್ರಿಟಿ ಡಿಸೈನರ್ ಸಾನಿಯಾ ಸರ್ದಾರಿಯಾ ರಾಮುಲು ಪುತ್ರಿಗೆ ಸ್ಟೈಲಿಸ್ಟ್!