ನಳಿನ್ ಕುಮಾರ ಕಟೀಲ್ ಕಾರ್ಯಕ್ರಮಕ್ಕೆ ಸೋಮಶೇಖರ ರೆಡ್ಡಿ, ಶ್ರೀರಾಮುಲು ಗೈರು|ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸವನ ಗೌಡ ಪದಗ್ರಹಣ ಕಾರ್ಯಕ್ರಮಕ್ಕೆ ಗೖರಾದ ರೆಡ್ಡಿ, ಶ್ರೀರಾಮುಲು| ಜಿಲ್ಲಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಬಣಕ್ಕೆ ಹಿನ್ನಡೆ|
ಬಳ್ಳಾರಿ[ಫೆ.08]: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮತ್ತು ಸಚಿವ ಶ್ರೀರಾಮುಲು ಅವರು ಗೈರಾದ ಘಟನೆ ಇಂದು[ಶನಿವಾರ] ನಡೆದಿದೆ. ಇಂದು ನಡೆದ ಬಳ್ಳಾರಿ ಜಿಲ್ಲಾಧ್ಯಕ್ಷ ಚನ್ನಬಸವನ ಗೌಡ ಪದಗ್ರಹಣ ಕಾರ್ಯಕ್ರಮಕ್ಕೆ ಸೋಮಶೇಖರ ರೆಡ್ಡಿ ಮತ್ತು ಸಚಿವ ಶ್ರೀರಾಮುಲು ಗೈರು ಆಗಿದ್ದಾರೆ.
ಈ ಹಿಂದೆ ಜಿಲ್ಲಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಬಣಕ್ಕೆ ಹಿನ್ನಡೆಯಾಗಿತ್ತು. ಎರಡನೇ ಬಾರಿಗೆ ಚನ್ನಬಸವ ಗೌಡ ಅವರನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಆಯ್ಕೆ ಮಾಡಿದ್ದರು. ಹೀಗಾಗಿ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಇಂದಿನ ಕಾರ್ಯಕ್ರಮಕ್ಕೆ ಗೈರು ಆಗಿರಬಹುದು ಎನ್ನಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಆಪ್ತ ದಮ್ಮೂರು ಶೇಖರ್ ಅವರನ್ನ ಬುಡಾ ಅಧ್ಯಕ್ಷರಾಗಿ ನೇಮಕವಾಗಿದ್ದರು. ದಮ್ಮೂರು ಶೇಖರ್ ಅವರ ನೇಮಕವನ್ನ ವಿರೋಧಿಸಿ ಜಿಲ್ಲಾಧ್ಯಕ್ಷ ಚೆನ್ನಬಸವನ ಗೌಡ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಇಡೀ ಬಳ್ಳಾರಿ ಬಿಜೆಪಿ ಘಟಕ ಸಾಮೂಹಿಕ ರಾಜೀನಾಮೆ ನೀಡಿತ್ತು. ಇದರಿಂದ ಆದೇಶ ಬುಡಾ ಸ್ಥಾನವನ್ನ ಯಡಿಯೂರಪ್ಪ ಅವರು ರದ್ದು ಮಾಡಿದ್ದರು. ಆಗ ಚೆನ್ನಬಸವನ ಗೌಡ ಅವರ ಬಿಜೆಪಿ ಬಣ ಮೇಲುಗೈ ಸಾಧಿಸಿತ್ತು. ಇದರಿಂದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ತೀವ್ರ ಮುಖಭಂಗ ಅನುಭವಿಸಿದ್ದರು.
ಹೀಗಾಗಿ ಎರಡನೇ ಅವಧಿಗೆ ಚೆನ್ನಬಸವನ ಗೌಡ ಅವರನ್ನ ಆಯ್ಕೆ ಮಾಡಿದ್ದಕ್ಕೆ ಸೋಮಶೇಖರ ರೆಡ್ಡಿ ಮತ್ತು ಸಚಿವ ಶ್ರೀರಾಮುಲು ವಿರೋಧಿಸಿದ್ದರು. ಇದೀಗ ಚೆನ್ನಬಸವನ ಗೌಡ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ಬಂದರೂ ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ಗೈರಾಗಿದ್ದಾರೆ.