ರಾಜ್ಯದಲ್ಲಿ ಇಲಾಖೆ ಸಿಬ್ಬಂದಿ ಒಂದಲ್ಲ ಒಂದು ಯಡವಟ್ಟು ಮಾಡುವ ಮೂಲಕ ವಿವಾದಕ್ಕೆ ಸಿಲುಕುತ್ತಲೇ ಇದೆ. ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾದರೂ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಕೊಪ್ಪಳ, (ಜುಲೈ.12): ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇದ್ದಾರೆ. ಗಂಗಾವತಿಯ ಆರೋಗ್ಯ ಇಲಾಖೆ ನಿರ್ಲಕ್ಷದಿಂದ ಅಂದು ಕೊರೋನಾ ಸೋಂಕಿತ ಮಹಿಳೆ ನಡೆದುಕೊಂಡೇ ಆಸ್ಪತ್ರೆ ಹೋಗಿದ್ದರು, ಇದೀಗ ನೆಗೆಟಿವ್ ಬಂದ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹೌದು....ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಅಮರೇಶ್ ಎನ್ನುವ ಯುವಕನ ಕೊರೋನಾ ನೆಗೆಟಿವ್ ಅಂತ ವರದಿ ಬಂದಿದ್ದರೂ ಸಹ ಕೋವಿಡ್ ನಿಯೋಜಿತ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಗಾವತಿ: ಆರೋಗ್ಯ ಇಲಾಖೆ ನಿರ್ಲಕ್ಷ, ನಡೆದುಕೊಂಡೇ ಆಸ್ಪತ್ರೆ ಸೇರಿದ ಕೊರೋನಾ ಸೋಂಕಿತ ಮಹಿಳೆ..!
ಇದರಿಂದ ಕಂಗಾಲಾದ ಯುವಕ ಸೋಂಕಿತರಿರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಕ್ಕೆ ತನಗೂ ಕೊರೋನಾ ವಕ್ಕರಿಸುತ್ತದೆಯೋ ಎನ್ನುವ ಆತಂಕದಲ್ಲಿದ್ದಾನೆ. ಈ ದುಗುಡವನ್ನು ಸ್ವತಃ ಆತನೇ ವಿಡಿಯೋ ಮೂಲಕ ಹೊರ ಹಾಕಿದ್ದಾನೆ.
ನನಗೆ ನೆಗೆಟಿವ್ ಇದೆ,ಇದೀಗ ನನ್ನ ಕರೆದುಕೊಂಡು ಬಂದಿದ್ದಾರೆ. ನನಗೆ ಯಾರೂ ರೆಸ್ಪಾನ್ಸ್ ಮಾಡ್ತಿಲ್ಲ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾನೆ. ಇಲ್ಲಿ ಪಾಸಿಟಿವ್ ಬಂದವರು ಇದ್ದಾರೆ. ನನಗೂ ಪಾಸಿಟಿವ್ ಅದ್ರೇ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.