ಮಾದರಿ ಕ್ಷೇತ್ರ ಮಾಡುವುದು ನನ್ನ ಜೀವನದ ಗುರಿ: ಸಾ.ರಾ.ಮಹೇಶ್‌

By Govindaraj SFirst Published Aug 31, 2022, 11:26 PM IST
Highlights

ಜನತೆಯ ಸೇವೆ ಮಾಡುವುದರ ಜತೆಗೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವುದು ನನ್ನ ಜೀವನದ ಗುರಿ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಹೊರ ವಲಯದಲ್ಲಿರುವ ಅರಕೆರೆ ಗ್ರಾಮದ ವಿರಕ್ತ ಮಠದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆ.ಆರ್‌. ನಗರ (ಆ.31): ಜನತೆಯ ಸೇವೆ ಮಾಡುವುದರ ಜತೆಗೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವುದು ನನ್ನ ಜೀವನದ ಗುರಿ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಹೊರ ವಲಯದಲ್ಲಿರುವ ಅರಕೆರೆ ಗ್ರಾಮದ ವಿರಕ್ತ ಮಠದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನ ಮುಖಿ ಕೆಲಸ ಮಾಡುವವರಿಗೆ ನಾಗರಿಕರು ಸದಾ ತಮ್ಮ ಬೆಂಬಲ ನೀಡಬೇಕು ಎಂದರು.

ನಾನೂ ಚುನಾಯಿತನಾಗಿ ಆಯ್ಕೆಯಾದ ನಂತರ ನಿರಂತರವಾಗಿ ಜನರ ಕೆಲಸ ಮಾಡುತ್ತಿದ್ದು, ಅವರು ನೀಡಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಯಾರ ಹೆಸರಿಗೂ ಕಳಂಕ ಬಾರದಂತೆ ನಡೆದುಕೊಂಡಿದ್ದು, ಇದು ನನಗೆ ತೃಪ್ತಿ ತಂದಿದೆ ಎಂದು ತಿಳಿಸಿದರು. ನನ್ನ ಅಧಿಕಾರದ ಅವಧಿಯಲ್ಲಿ ಸರ್ಕಾರದ ಅನುದಾನದ ಜತೆಗೆ ಸ್ವಂತ ಹಣವನ್ನು ವ್ಯಯಿಸಿ ಎಲ್ಲರ ಸಂಕಷ್ಟಗಳಿಗೆ ಸ್ಪಂದಿಸಿ ಪಕ್ಷಾತೀತ ಮತ್ತು ಜಾತ್ಯತೀತ ರಾಜಕಾರಣ ಮಾಡುತ್ತಿರುವುದರಿಂದ ಇದನ್ನು ಅರಿತಿರುವ ಮಹಾಜನತೆ ನನ್ನನ್ನು ಸತತವಾಗಿ ಮೂರು ಬಾರಿ ಆಯ್ಕೆ ಮಾಡಿದ್ದಾರೆ ಎಂದ ಅವರು ಹೇಳಿದರು.

ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ: ಸಾಹಿತಿ ಭಗವಾನ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಅರಕೆರೆ ವಿರಕ್ತ ಮಠದ ಶ್ರೀಗಳ ಉಪಯೋಗಕ್ಕೆ ವೈಯಕ್ತಿಕವಾಗಿ ನೂತನ ಕಾರನ್ನು ಕೊಡುಗೆಯಾಗಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಭಗವಂತ ಹೆಚ್ಚಿನ ಶಕ್ತಿ ನೀಡಿದರೆ ಹುಣಸೂರು ತಾಲೂಕಿನ ಮಾದಳ್ಳಿ ಉಕ್ಕಿನಕಂತೆ ಮಠದ ಮತ್ತು ಗಾವಡಗೆರೆ ಗುರುಲಿಂಗ ಜಂಗಮ ಮಠಗಳಿಗೂ ಸಹಾಯ ಮಾಡುವುದಾಗಿ ಘೋಷಿಸಿದರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀಗಳು ಮಾತನಾಡಿ, ಸದಾ ಅಭಿವೃದ್ಧಿ ಮಂತ್ರ ಜಪಿಸುವ ಸಾ.ರಾ. ಮಹೇಶ್‌ ಇತರ ಚುನಾಯಿತ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದು, ಇಂತಹ ಶಾಸಕರು ಇರುವುದು ಪ್ರಜಾಪ್ರಭುತ್ವಕ್ಕೆ ಮೆರಗು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಶ್ರೀಗಳು, ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಿದ್ದ ಶಾಸಕರ ಪತ್ನಿ ಅನಿತಾ ಸಾ.ರಾ. ಮಹೇಶ್‌, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ, ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಹೇಶ್‌, ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೇ, ಗ್ರಾಪಂ ಸದಸ್ಯರಾದ ಬಾಲಾಜಿ ಗಣೇಶ್‌, ಯೋಗೇಶ್‌, ಮಾಜಿ ಸದಸ್ಯ ಪುಟ್ಟರಾಜು, ಕರವೇ ತಾಲೂಕು ಘಟಕದ ಅಧ್ಯಕ್ಷ ರುದ್ರೇಶ್‌, ಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ವಿ. ನವೀನ್‌ಕುಮಾರ್‌, ಯುವ ಜೆಡಿಎಸ್‌ ಮುಖಂಡ ಕೆ. ಬಿ. ಮಂಜುನಾಥ್‌ ಇದ್ದರು.

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಲು ಗಮನಹರಿಸಿ: ಸತೀಶ್‌ ಜಾರಕಿಹೊಳಿ ಸಲಹೆ

ಆತ್ಮಸ್ಥೈರ್ಯ ಹೆಚ್ಚಿಸಿ: ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಜೊತೆಗೆ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನುರಿತ ವೈದ್ಯಾಧಿಕಾರಿಗಳಿಂದ ಕೂಡಿರುವ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಜನರಿಂದ ಯಾವುದೇ ದೂರು ಬರದದಂತೆ ಕೆಲಸ ಮಾಡಬೇಕು ಎಂದರು. ರಕ್ಷಾ ಸಮಿತಿಯಲ್ಲಿ ಇರುವ ಅನುದಾನದ ಬಗ್ಗೆ ವೈದ್ಯಾಧಿಕಾರಿ ಅಶೋಕ್‌ ಅವರಿಂದ ಮಾಹಿತಿ ಪಡೆದರು.

click me!