Yadgir: ದಲಿತರನ್ನು ಕರೆದುಕೊಂಡು ವಿವಾದಿತ ಆಂಜನೇಯ ದೇವಸ್ಥಾನ ಪ್ರವೇಶಿಸಿದ ಶಾಸಕ ರಾಜೂಗೌಡ!

By Govindaraj S  |  First Published Jun 2, 2022, 1:05 AM IST

ಬಂದೂಕು ಭದ್ರತೆಯಲ್ಲಿ ದಲಿತ ಮಹಿಳೆಯರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗಿತ್ತು. 


ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜೂ.02): ಬಂದೂಕು ಭದ್ರತೆಯಲ್ಲಿ ದಲಿತ ಮಹಿಳೆಯರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಜೂಗೌಡ ಅಂಬಲಿಹಾಳ ಮತ್ತು ಹೂವಿನಳ್ಳಿ ಗ್ರಾಮಕ್ಕೆ ಭೇಡಿ ನೀಡಿ ಶಾಂತಿ, ಸೌಹಾರ್ಧತೆಯ ಮೂಲಕ ಕಂಗಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದರು.

Tap to resize

Latest Videos

undefined

ಶಾಸಕ ರಾಜೂಗೌಡ ರಿಂದ ದೇಗುಲ ಪ್ರವೇಶ ಪ್ರಕರಣ ಸುಖಾಂತ್ಯ: ಭಾರಿ ವಿವಾದಕ್ಕೆ ಕಾರಣವಾಗಿದ್ದ ದಲಿತರ ದೇಗುಲ ಪ್ರವೇಶ ಪ್ರಕರಣ ಶಾಸಕ ರಾಜೂಗೌಡರು ಬಹಳ ಸೂಕ್ಷ್ಮವಾಗಿ ಗಮನಿಸಿ ದಲಿತ ಸಮುದಾಯ ಮತ್ತು ಅನ್ಯಸಮುದಾಯದ ಜನರ ಜೊತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿದರು.  ಅಂಬಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ಜೊತೆ ಮೊದಲು ಸಭೆ ನಡೆಸಿದ ಶಾಸಕ ರಾಜೂಗೌಡ ಕಾನೂನು, ಸಂವಿಧಾನ, ಸಮಾನತೆಯ ಅರಿವು ಮೂಡಿಸುವ ಕೆಲಸ ಮಾಡಿದರು. ಜೊತೆಗೆ ಮೇ 28 ರಂದು ಹೂವಿನಳ್ಳಿ ಗ್ರಾಮದ ಕೇವಲ 5 ಜನ ದಲಿತ ಮಹಿಳೆಯರನ್ನು ಅಂಬಲಿಹಾಳದ ಆಂಜನೇಯ ದೇವಸ್ಥಾನಕ್ಕೆ ಪೋಲಿಸ್ ಸರ್ಪಗಾವಲಿನಲ್ಲಿ ಪ್ರವೇಶ ಮಾಡಲಾಗಿತ್ತು, ಈಗ ಶಾಸಕ ರಾಜೂಗೌಡ ಹೂವಿನಳ್ಳಿಯ ದಲಿತ ಸಮುದಾಯದವರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ದಲಿತ ಸಮುದಾಯದವರ ಮನವೋಲಿಸಿ ದೇಗುಲಕ್ಕೆ ಪ್ರವೇಶಿಸಬಹುದು ಅದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದರು.

Yadgir: ಶಾಸಕ ರಾಜೂಗೌಡ ಹೆಸರು ದುರ್ಬಳಕೆ: ಚಾಲಾಕಿ ಮಹಿಳೆ ಬಂಧನ

ಶಾಸಕ ರಾಜೂಗೌಡರ ಧೈರ್ಯದ ಮಾತಿಗೆ ದೇವಸ್ಥಾನ ಪ್ರವೇಶಿಸಿದ ನೂರಾರು ದಲಿತರು: ಶಾಸಕ ರಾಜೂಗೌಡ ಮೊದಲು ಅಂಬಲಿಹಾಳದ ದಲಿತ ಸಮುದಾಯದವರನ್ನು ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಜೊತೆಗೆ ಅಂಬಲಿಹಾಳ ಪಕ್ಕದ ಹೂವಿನಹಳ್ಳಿ ಗ್ರಾಮದ ದಲಿತರ ಜೊತೆ ಶಾಸಕ ರಾಜೂಗೌಡ ಸಭೆ ನಡೆಸಿ ನಿಮ್ಮ ಜೊತೆ ನಾನಿದೀನಿ, ನೀವು ದೇವಸ್ಥಾನ ಪ್ರವೇಶಿಸಿ ಅಂತ ದೈರ್ಯ ನೀಡಿದರು. ಇದರಿಂದಾಗಿ ಹೂವಿನಹಳ್ಳಿ ಗ್ರಾಮದ ನೂರಾರು ಜನ ಪೋಲಿಸರ ಭದ್ರತೆಯಿಲ್ಲದೇ ಆರಾಮವಾಗಿ ಅಂಬಲಿಹಾಳದ ಆಂಜನೇಯ ದೇವಸ್ಥಾನ ಪ್ರವೇಶಿಸಿ ಆಂಜನೇಯನ ದರ್ಶನ ಪಡೆದರು.

ಅಂದು ಐದು ಜನ, ಇಂದು ನೂರಾರು ದಲಿತರು ದೇವಸ್ಥಾನ ಪ್ರವೇಶ: ದಲಿತರು ಅಂಬಲಿಹಾಳದ ದೇವಾಲಯ ಪ್ರವೇಶಿಸಿದ ಪ್ರಕರಣ ಯಾದಗಿರಿ ಜಿಲ್ಲಾಡಳಿತಕ್ಕೆ ಭಾರಿ ಕಂಗಂಟಾಗಿತ್ತು, ಈ ವಿವಾದದಿಂದಾಗಿ ಎರಡು ದಿನಗಳ ಕಾಲ ಅಂಬಲಿಹಾಳ ಮತ್ತು ಹೂವಿನಳ್ಳಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಮೇ 28 ರಂದು ಪೋಲಿಸರ ಭದ್ರತೆಯಲ್ಲಿ ಕೇವಲ ಐದು ಜನ ದಲಿತ ಮಹಿಳೆಯರು ಅಂಬಲಿಹಾಳದ ಆಂಜನೇಯ ದೇವಸ್ಥಾನಕ್ಕೆ ಪ್ರವೇಶಿದ್ದರು. ಆದ್ರೆ ಇವತ್ತು ಶಾಸಕ ರಾಜುಗೌಡ ಎರಡು ಸಮುದಾಯದವರ ಜೊತೆಗಿನ ಮಾತುಕತೆ ಭಾರಿ ಪ್ರಲಪ್ರದವಾಯಿತು. ನಂತರ ರಾಜೂಗೌಡರ ಸಭೆಯ ನಂತರದ ನೂರಾರು ಸಂಖ್ಯೆಯಲ್ಲಿ ಹೂವಿನಳ್ಲಿಯ ದಲಿತರು ಆಂಜನೇಯ ದೇವಸ್ಥಾನ ಪ್ರವೇಶಿಸಿ ದರ್ಶನ ಪಡೆದರು.

Yadgir: ತಾಯಿಗಾಗಿ ದೇವಸ್ಥಾನ ಕಟ್ಟಿದ ಶಾಸಕ ರಾಜೂಗೌಡ: ಅಮೃತ ಶಿಲೆಯಿಂದ ನಿರ್ಮಾಣ

ಕಿಡಿಗೇಡಿಗಳಿಗೆ ಕೃಷ್ಣ ಜನ್ಮಸ್ಥಳಕ್ಕೆ ಕಳುಹಿಸಲಾಗುವುದು: ಅಂಬಲಿಹಾಳ ಗ್ರಾಮದಲ್ಲಿ ಆಂಜನೇಯ ದೇವಸ್ಥಾನಕ್ಕೆ ದಲಿತರ ಪ್ರವೇಶಿಸಿದ ಪ್ರಕರಕ್ಕೆ ಸಂಬಂಧಿಸಿದಂತೆ ಸುರಪುರ ಶಾಸಕ ರಾಜೂಗೌಡ ಪ್ರತಿಕ್ರಿಯೆ ನೀಡಿ, ಮೇ 28 ರಂದು ಪೋಲಿಸ್ ಭದ್ರತೆಯಲ್ಲಿ ದಲಿತರ ದೇವಸ್ಥಾನ ಪ್ರವೇಶ ನಡೆದ ಘಟನೆಯಿಂದಾಗಿ ಹೂವಿನಳ್ಳಿ ಮತ್ತು ಅಂಬಲಿಹಾಳ ಗ್ರಾಮಸ್ಥರು ಆಘಾತ ಮತ್ತು ಭಯಭೀತರಾಗಿದ್ದಾರೆ. ಎರಡು ಸಮುದಾಯದವರ ಜೊತೆ ಸಭೆ ನಡೆಸಿ ಧೈರ್ಯ ತುಂಬಿದ್ದೇವೆ, ಮುಂದೆ ಯಾರಾದ್ರು ಬಾಲ ಬಿಚ್ಚಿದ್ರೆ ಅವರು ಅನುಭವಿಸ್ತಾರೆ. ಅಂತವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಕೃಷ್ಣನ ಜನ್ಮಸ್ಥಳಕ್ಕೆ ಕಳುಹಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿ, ಎರಡು ಊರಿನವ್ರು ಒಂದಾಗಿ, ಜಾತಿ-ಬೇಧವಿಲ್ಲದೇ ಬಾಳಬೇಕು ಎಂದು ಸಹಭಾಳ್ವೆಯ ಮಾತುಗಳನ್ನಾಡಿದರು.

click me!