'ಪ್ರಿಯಾಂಕ್ ಖರ್ಗೆ ಮಾತಿನ ಚಪಲ ತೀರಿಸಿಕೊಳ್ಳಲು ಹೀಗೆ ಮಾತನಾಡ್ತಿದ್ದಾರೆ'

By Suvarna NewsFirst Published Dec 19, 2020, 2:24 PM IST
Highlights

ಕೊರೋನಾದಿಂದ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿದೆ| ಯಾವುದೇ ಅನುದಾನ ಕಟ್ ಮಾಡದೆ ಯೋಜನೆಗಳನ್ನು ಮುಂದುವರಿಸಲು ಸಿಎಂ ಮುಂದಾಗಿದ್ದಾರೆ| ವಿರೋಧ ಪಕ್ಷದಲ್ಲಿರುವ ಪ್ರಿಯಾಂಕ್ ಖರ್ಗೆಗೆ ವಿರೋಧಿಸುವುದಷ್ಟೇ ಗೊತ್ತು| ಖರ್ಗೆ ವಿರುದ್ಧ ಹರಿಹಾಯ್ದ ರಾಜಕುಮಾರ್ ಪಾಟೀಲ್ ತೇಲ್ಕೂರ| 

ಕಲಬುರಗಿ(ಡಿ.19): ಕಲ್ಯಾಣ ಕರ್ನಾಟಕ ಭಾಗದ ಹಿತದೃಷ್ಟಿಯಿಂದ ಈ ಭಾಗಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಅವಶ್ಯಕತೆ ಇದೆ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮತ್ತೊಮ್ಮೆ ಪುನರುಚ್ಛಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆ ನಂತರ ಸಂಸದರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕೊಂಡುಯ್ಯುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕೋರಿ ನಿಯೋಗ ತೆರಳಲಿದೆ. ರಾಜ್ಯದ ಮುಖಂಡರು, ರಾಷ್ಟ್ರೀಯ ಮುಖಂಡರಿಗೆ ಹಾಗೂ ಸಿಎಂ ಅವರನ್ನ ಭೇಟಿ ಮನವರಿಕೆ ಮಾಡಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ. 

ತಿಮ್ಮಪ್ಪನ ಭಕ್ತರಿಗೊಂದು ಸಂತಸದ ಸುದ್ದಿ: ಕಲಬುರಗಿಯಿಂದ ತಿರುಪತಿಗೆ ನೇರ ವಿಮಾನ

ರಾಜ್ಯ ಸರ್ಕಾರ ಕೋಮಾದಲ್ಲಿದೆ ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಪ್ರಿಯಾಂಕ್ ಖರ್ಗೆ ಮಾತಿನ ಚಪಲ ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಕೊರೋನಾದಿಂದ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಆದಾಗ್ಯೂ ಯಾವುದೇ ಅನುದಾನ ಕಟ್ ಮಾಡದೆ ಯೋಜನೆಗಳನ್ನು ಮುಂದುವರಿಸಲು ಸಿಎಂ ಮುಂದಾಗಿದ್ದಾರೆ. ವಿರೋಧ ಪಕ್ಷದಲ್ಲಿರುವ ಪ್ರಿಯಾಂಕ್ ಖರ್ಗೆ ಅವರಿಗೆ ವಿರೋಧಿಸುವುದಷ್ಟೇ ಗೊತ್ತು. ಕೇವಲ ಮಾಧ್ಯಮಗಳ ಮುಂದೆ ಮಾತಿನ ಚಪಲ ತೀರಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ. 

click me!