ಕೊಪ್ಪಳ: ವಿಜಯನಗರ ಕಾಲುವೆ ಅಭಿವೃದ್ಧಿಗೆ 24 ಕೋಟಿ ರು., ಶಾಸಕ ಹಿಟ್ನಾಳ

By Kannadaprabha News  |  First Published Jun 3, 2020, 8:07 AM IST

ವಿಜ​ಯ​ನ​ಗರ ಆಧು​ನೀ​ಕ​ರಣ ಕಾಮ​ಗಾ​ರಿ​ಗೆ ಶಾಸಕ ಹಿಟ್ನಾಳ ಭೂಮಿ​ಪೂ​ಜೆ| ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಭಾಗದ ಎಲ್ಲ ಕಾಲುವೆ ಆಧುನೀಕರಣ ಮಾಡಲು ವಿವಿಧ ಹಂತದಲ್ಲಿ ಟೆಂಡರ್‌ ಕರೆಯಲಾಗಿತ್ತು| ಈಗ ವಿಜಯನಗರ ಕಾಲುವೆ ಆಧುನೀಕರಣಕ್ಕಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 24 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ|


ಕೊಪ್ಪಳ(ಜೂ.03):  ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿಯೇ ವಿಶೇಷ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ವಿಜಯನಗರ ಕಾಲುವೆ ಆಧುನೀಕರಣಕ್ಕೆ 24 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಮಂಗಳವಾರ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಹಿಂಭಾಗದಲ್ಲಿ 24 ಕೋಟಿ ವೆಚ್ಚದ ವಿಜಯನಗರ ಕಾಲುವೆ ಆಧುನೀಕರಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಈ ಭಾಗದ ಎಲ್ಲ ಕಾಲುವೆ ಆಧುನೀಕರಣ ಮಾಡಲು ವಿವಿಧ ಹಂತದಲ್ಲಿ ಟೆಂಡರ್‌ ಕರೆಯಲಾಗಿದ್ದು, ಈಗ ವಿಜಯನಗರ ಕಾಲುವೆ ಆಧುನೀಕರಣಕ್ಕಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ  24 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದೇವೆ. ತುಂಗಭದ್ರಾ ಎಡದಂಡೆ ಕಾಲುವೆಯ ಹಳೆ ಕಾಲುವೆಗಳನ್ನು ಆಧುನೀಕರಣ ಮಾಡಿ ರೈತರಿಗೆ ಹೆಚ್ಚು ನೀರಾವರಿಯ ಸೌಲಭ್ಯ ಒದಗಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ನೀರು ಸೋರಿಕೆ ತಪ್ಪಿಸಲು, ಸರಿಯಾಗಿ ನೀರು ರೈತರಿಗೆ ತಪ್ಪಿಸಲು 15ಕ್ಕೂ ಹೆಚ್ಚು ಕಾಲುವೆಗಳ ಆಧುನೀಕರಣ ಮಾಡಲು . 370 ಕೋಟಿಗೂ ಅಧಿಕ ಮೊತ್ತದ ಟೆಂಡರ್‌ಗಳನ್ನು ಕರೆದಿತ್ತು. ಕಳೆದ ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಗಂಗಾವತಿಯಲ್ಲಿ ಇದೇ ಕಾಮಗಾರಿ ನಡೆದಿದೆ. ನಮ್ಮ ಕ್ಷೇತ್ರದಲ್ಲಿ ಈ ಕಾಮಗಾರಿ ಆರಂಭವಾಗಿದೆ ಎಂದರು.

Tap to resize

Latest Videos

ಕೊಪ್ಪಳ: ಕುಟುಂಬ ಕಲ​ಹದಿಂದ ಹೆತ್ತ ತಂದೆ-ತಾಯಿಯನ್ನೇ ಕೊಲೆ​ಗೈದ ಪಾಪಿ ಪುತ್ರ..!

ಕಳೆದ ವರ್ಷ ಈ ಭಾಗದಲ್ಲಿ ಬೆಳೆಯಿತ್ತು. ಬೆಳೆ ತೆಗೆದ ಮೇಲೆ ಈಗ ಕಾಮಗಾರಿ ಆರಂಭ ಮಾಡಲಾಗುತ್ತಿದೆ. ರೈತರ ಸಭೆ ಕರೆದು ಮಾತನಾಡಿ, ಕಾಮಗಾರಿ ಆರಂಭ ಮಾಡಲಾಗುವುದು. ಈ ಕಾಮಗಾರಿ ನನ್ನ ಕ್ಷೇತ್ರದಲ್ಲಿ 6 ಕಿಮೀನಷ್ಟುಇದೆ. ಒಂದು 14 ಕೋಟಿ, ಮತ್ತೊಂದು 10 ಕೋಟಿ ಸೇರಿ ಒಟ್ಟು 24 ಕೋಟಿಯಷ್ಟುಕಾಲುವೆ ಆಧುನೀಕರಣ ನಡೆಯಲಿದೆ. ಇನ್ನು ಗುತ್ತಿಗೆದಾರರಿಗೆ ಗುಣಮಟ್ಟದ ಹಾಗೂ ಕಡಿಮೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಾವು ಸೂಚನೆ ನೀಡಿದ್ದೇವೆ ಎಂದರು.

ಟೆಂಡರ್‌ ಕರೆ​ಯ​ಲಾ​ಗಿ​ದೆ

ಇದು ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಿಯಾಗಿರುವ ಅನುದಾನವಾಗಿದ್ದು, ಈಗ ಟೆಂಡರ್‌ ಕರೆಯಲಾಗಿದೆ. ಹೀಗಾಗಿ, ರೈತರ ಕೋರಿಕೆಯ ಮೇರೆಗೆ ತುರ್ತಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ರೈತರೇ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅವರ ಒತ್ತಾಯದ ಮೇರೆಗೆ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದ್ದಾರೆ. ಈ ವೇಳೆ ತಾಪಂ ಅಧ್ಯಕ್ಷ ಬಾಲಚಂದ್ರನ್‌, ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ, ತಾಪಂ ಇಒ ವೆಂಕೋಬಪ್ಪ ಉಪಸ್ಥಿತರಿದ್ದರು.
 

click me!