ಉಡುಪಿ ಜಿಲ್ಲೆಯಲ್ಲಿ ಕೊರೋನಾ ಅಕ್ಷರಶಃ ಸ್ಫೋಟಗೊಂಡಿದೆ, ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 150 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 410 ಆಗಿದ್ದು, ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ.
ಉಡುಪಿ(ಜೂ 03): ಉಡುಪಿ ಜಿಲ್ಲೆಯಲ್ಲಿ ಕೊರೋನಾ ಅಕ್ಷರಶಃ ಸ್ಫೋಟಗೊಂಡಿದೆ, ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 150 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 410 ಆಗಿದ್ದು, ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ.
ಮಂಗಳವಾರ ಪತ್ತೆಯಾದ ಸೋಂಕಿತರಲ್ಲಿ 120 ಮಂದಿ ಪುರುಷರು ಮತ್ತು 30 ಮಂದಿ ಮಹಿಳೆಯರು. ಅವರಲ್ಲಿ 10 ವರ್ಷದೊಳಗಿನ 9 ಮಂದಿ ಮಕ್ಕಳು ಮತ್ತು 3 ಮಂದಿ 60 ವರ್ಷ ಮೀರಿದವರಿದ್ದಾರೆ.
undefined
ಮದ್ಯ ಮಾರಾಟ ಸಮಯ ವಿಸ್ತರಣೆ ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್!
ಈ 150 ಸೋಂಕಿತರೆಲ್ಲರೂ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದು, ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ410 ಮಂದಿ ಸೋಂಕಿತರಲ್ಲಿ 376 ಮಂದಿ ಸೋಂಕಿತರು ಮಹಾರಾಷ್ಟ್ರದಿಂದಲೇ ಬಂದವರಿದ್ದಾರೆ.
ಪಾಸಿಟಿವ್ ಪ್ರಕರಣ ಹೆಚ್ಚಳ ಸಾಧ್ಯತೆ:
ಉಡುಪಿ ಜಿಲ್ಲೆಗೆ ಸುಮಾರು 9 ಸಾವಿರ ಮಂದಿ ಹೊರರಾಜ್ಯ ಮತ್ತು ಹೊರದೇಶಗಳಿಂದ ಹಿಂದಕ್ಕೆ ಬಂದಿದ್ದಾರೆ. ಇನ್ನೂ 600-700 ಮಂದಿಗೆ ಸೋಂಕು ತಗಲುವ ಆತಂಕ ಇದೆ. ಅವರೆಲ್ಲರ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.
ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಅವರಲ್ಲಿ ಸುಮಾರು 6 ಸಾವಿರದಷ್ಟುಮಾದರಿಗಳ ಪರೀಕ್ಷಾ ವರದಿ ಬರುವುದಕ್ಕೆ ಬಾಕಿಯಾಗಿತ್ತು, ಇದೀಗ ಸಾವಿರ ಸಂಖ್ಯೆಯಲ್ಲಿ ಪರೀಕ್ಷಾ ವರದಿಗಳು ಬರಲಾರಂಭಿಸಿವೆ. ಆದ್ದರಿಂದ ನೂರಾರು ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 63 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 346 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಡಳಿತದ ಭರದ ಸಿದ್ಧತೆ: ಜಿಲ್ಲೆಯಲ್ಲಿ ಕೊರೋನಾ ಸ್ಫೋಟ ಆರಂಭವಾಗಿರುವುದರಿಂದ ಅದನ್ನು ನಿರ್ವಹಿಸಲು ಜಿಲ್ಲಾಡಳಿತ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉಡುಪಿಯ ಡಾ. ಟಿ.ಎಂ. ಪೈ ಕೋವಿಡ್ ಆಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ, ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಸುಮಾರು 320 ಹಾಸಿಗೆಗಳ ವ್ಯವಸ್ಥೆ ಇದೆ. ಉದ್ಯಾವರ ಎಸ್‌ಡಿಎಂಆಯುರ್ವೇದ ಆಸ್ಪತ್ರೆಯನ್ನೂ ತುರ್ತು ಸಂದರ್ಭಕ್ಕೆ ಸಿದ್ಧವಾಗಿಡಲಾಗಿದೆ. ಇದರಿಂದ ಒಟ್ಟು ಏಕಕಾಲದಲ್ಲಿ 500 ಮಂದಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಇದೆ. ಈಗ ಮತ್ತೆ 400 ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲೀಗ 900 ಸೋಂಕಿತರಿಗೆ ಚಿಕಿತ್ಸೆ ನೀಡವುದಕ್ಕೆ ಅವಕಾಶ ಇದೆ.
ಅನಿಯಂತ್ರಿತವಾಗುತ್ತಿದೆಯೇ ಕೊರೋನಾ!
ಉಡುಪಿ ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ಬಂದವರಲ್ಲಿ ಇದುವರೆಗೆ ಸರಾಸರಿ ಶೇ. 5ರಷ್ಟುಕೊರೋನಾ ಸೋಂಕಿತರು ಪತ್ತೆಯಾಗುತಿದ್ದಾರೆ. ಆದರೆ, ಸಾವಿರಾರು ಮಂದಿ ಕೋವಿಡ್ ಪರೀಕ್ಷಾ ವರದಿ ಬರುವುದಕ್ಕೆ ಮೊದಲೇ, ಸರ್ಕಾರದ ನಿರ್ದೇಶನದಂತೆ 7 ದಿನಗಳ ಸರ್ಕಾರಿ ಕ್ವಾರಂಟೈನ್ ಮುಗಿಸಿ ಮನೆಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಹೋಮ್ ಕ್ವಾರಂಟೈನ್‌ಗೆ ಹೇಳಲಾಗಿದೆಯಾದರೂ, ಅವರಿಂದ ಸಮುದಾಯಕ್ಕೆ ಕೊರೋನಾ ಹರಡುವ ಭೀತಿ ಇದೆ.