ಸಚಿವ ಆರ್.ಅಶೋಕ್ 10 ಸಾವಿರ ಕೋಟಿ ನಷ್ಟ ಅಂತ ಹೇಳಿದ್ದಾರೆ|ಯಡಿಯೂರಪ್ಪ ಇನ್ನೂ ಸಮೀಕ್ಷೆ ಮಾಡಬೇಕು ಅಂತ ಹೇಳುತ್ತಿದ್ದಾರೆ| ಕಾರಜೋಳ ಬೊಕ್ಕಸದಲ್ಲಿ ಹಣ ಇಲ್ಲ ಅಂತ ಹೇಳಿಕೆ ನೀಡಿದ್ದಾರೆ| ಇವರಲ್ಲಿಯೇ ಸಮನ್ವಯದ ಕೊರತೆ ಇದೆ ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಪ್ರಿಯಾಂಕ ಖರ್ಗೆ|
ಕಲಬುರಗಿ(ಆ.26): ರಾಜ್ಯದಿಂದ ಅಯ್ಕೆಯಾದ 25 ಬಿಜೆಪಿ ಸಂಸದರು ದೆಹಲಿ ಚಾಂದಿನಿಚೌಕ್‌ನಲ್ಲಿ ಚಾಟ್ ತಿನ್ನೋಕೆ ಇದ್ದಾರೆ ಅಷ್ಟೇ, ರಾಜ್ಯದಲ್ಲಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಿದ್ದಾಗಲೂ ಬಿಜೆಪಿ ಸಂಸದರು ಪರಿಹಾರ ಕೇಳೋಕೆ ಹೋಗ್ತಿಲ್ಲ, ಇಂತಹ ಸಂಸದರು ರಾಜ್ಯಕ್ಕೆ ಬೇಕಾ? ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಶಾಸಕ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊದಿಗೆ ಮಾತನಾಡಿದ ಅವರು, ಕಂದಾಯ ಸಚಿವ ಆರ್.ಅಶೋಕ್ 10 ಸಾವಿರ ಕೋಟಿ ನಷ್ಟ ಅಂತ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇನ್ನೂ ಸಮೀಕ್ಷೆ ಮಾಡಬೇಕು ಅಂತ ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೂಡ ಬೊಕ್ಕಸದಲ್ಲಿ ಹಣ ಇಲ್ಲ ಅಂತ ಹೇಳಿಕೆ ನೀಡಿದ್ದಾರೆ. ಅಂದರೆ ಇವರಲ್ಲಿಯೇ ಸಮನ್ವಯದ ಕೊರತೆ ಇದೆ ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ: ಸಂಸದ ಡಾ.ಜಾಧವ್ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು
ಆಪರೇಷನ್ ಕಮಲದ ಮಾಡುವುದಕ್ಕೆ ಇವರಲ್ಲಿ ಕೋರ್ಡಿನೇಶನ್ ಇತ್ತು. ಯಾರಿಗೆ ಎಷ್ಟು ಕೊಡಬೇಕು, ಎಲ್ಲಿಗೆ ಕಳಿಸಬೇಕು ಅಂತ ಪಕ್ಕಾ ಪ್ಲಾನ್ ಮಾಡಿದ್ದರು. ಈಗ ಪ್ರವಾಹದ ವಿಚಾರದಲ್ಲಿ ಸಮನ್ವಯತೆ ಏಕಿಲ್ಲ ಎಂದು ಶಾಸಕ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ನೆರೆ ಪರಿಹಾರ: ಸಂತ್ರಸ್ತರಿಂದ ಸಿಎಂ ವಿರುದ್ಧ ಪ್ರತಿಭಟನೆ