ಔರಾದ್‌: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ, ಸಂತ್ರಸ್ತರ ಆರೋಗ್ಯ ವಿಚಾರಿಸಿದ ಶಾಸಕ ಪ್ರಭು ಚವ್ಹಾಣ್‌

Published : Jun 22, 2023, 11:00 PM IST
ಔರಾದ್‌: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ, ಸಂತ್ರಸ್ತರ ಆರೋಗ್ಯ ವಿಚಾರಿಸಿದ ಶಾಸಕ ಪ್ರಭು ಚವ್ಹಾಣ್‌

ಸಾರಾಂಶ

ಸರಿಯಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರಲ್ಲದೇ ಶೀಘ್ರ ಗುಣಮುಖರಾಗುತ್ತೀರಿ ಯಾವುದೇ ಕಾರಣಕ್ಕೂ ಹೆದರದಿರಿ ಎಂದು ಧೈರ್ಯ ತುಂಬಿದ ಶಾಸಕ ಪ್ರಭು ಚವ್ಹಾಣ್‌

ಔರಾದ್‌(ಜೂ.22): ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಔರಾದ್‌ (ಬಿ) ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರಕ್ಯಾಳ ಗ್ರಾಮಸ್ಥರಿ​ಗೆ ಶಾಸಕ ಪ್ರಭು ಚವ್ಹಾಣ್‌ ಅವರು ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಶಾಸಕರು, ಸರಿಯಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರಲ್ಲದೇ ಶೀಘ್ರ ಗುಣಮುಖರಾಗುತ್ತೀರಿ ಯಾವುದೇ ಕಾರಣಕ್ಕೂ ಹೆದರದಿರಿ ಎಂದು ಧೈರ್ಯ ತುಂಬಿದರು. ಇಂತಹ ತುರ್ತು ಸಂದರ್ಭದಲ್ಲಿ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ರೋಗಿಗಳ ಆರೋಗ್ಯ ಗಮನಿಸಬೇಕು. ಯಾರೊಬ್ಬರೂ ರಜೆ ಪಡೆಯದೇ ಕೆಲಸ ಮಾಡಬೇಕು. ಈ ದಿಶೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಬೀದ​ರ್‌: ಕಲು​ಷಿತ ನೀರು ಸೇವ​ನೆ, 20ಕ್ಕೂ ಹೆಚ್ಚು ಜನ ಅಸ್ವಸ್ಥ

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಮುಖಂಡರಾದ ಕೇರಬಾ ಪವಾರ, ಶಿವರಾಜ ಅಲ್ಮಾಜೆ, ರಾಮಶೆಟ್ಟಿಪನ್ನಾಳೆ, ಬನ್ಸಿ ನಾಯಕ್‌ ಹಾಗೂ ಇತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ