'ಬಿಜೆಪಿಯಲ್ಲಿ ದುಡಿದವರಿಗೆ ಒಳ್ಳೆಯ ಹುದ್ದೆ ಖಚಿ​ತ'

By Kannadaprabha News  |  First Published Sep 14, 2020, 10:22 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಲ್ಲಿ ಪ್ರತಿ ಒಬ್ಬರು ಪಕ್ಷದ ಸಂಘಟನೆ ಮಾಡಬೇಕು| ನಿಷ್ಠೆಯಿಂದ ದುಡಿದವರಿಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನ ಮಾನಗಳು ದೊರೆಯುತ್ತದೆ:ಪರಣ್ಣ ಮುನವಳ್ಳಿ| 


ಗಂಗಾವತಿ(ಸೆ.14): ಬಿಜೆಪಿಯಲ್ಲಿ ದುಡಿದವರಿಗೆ ಒಳ್ಳೆಯ ಹುದ್ದೆ ನೀಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.  ನಗರದ ಬಿಜೆಪಿ ಕಚೇರಿಯಲ್ಲಿ ಗ್ರಾಮೀಣ ಮಂಡಲದ ಕಾರ್ಯಕಾರಿಣಿ ಸಭೆ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ 70ನೇ ವರ್ಷದ ಜನ್ಮದಿನದ ಪ್ರಯುಕ್ತ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಮಟ್ಟದಲ್ಲಿ ಪ್ರತಿ ಒಬ್ಬರು ಪಕ್ಷದ ಸಂಘಟನೆ ಮಾಡಬೇಕು. ನಿಷ್ಠೆಯಿಂದ ದುಡಿದವರಿಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನ ಮಾನಗಳು ದೊರೆಯುತ್ತದೆ ಎಂದರು.

Tap to resize

Latest Videos

ಪ್ರತಿಯೊಂದು ಹಳ್ಳಿಯಲ್ಲಿ ನರೇಂದ್ರ ಮೋದಿ 70ನೇ ವರ್ಷದ ಜನ್ಮದಿನ ಪ್ರಯುಕ್ತ 70 ವೃದ್ಧರಿಗೆ ಕನ್ನಡಕ ಮತ್ತು ವಿಕಲಚೇತನರಿಗೆ ಸೈಕಲ್‌ ಹಾಗೂ 70 ವೃಕ್ಷಾರೋಹಣ ಅದರ ಜೊತೆಗೆ ಸ್ವಚ್ಚತಾ ಅಭಿಯಾನ ಹೀಗೆ ಇನ್ನೂ ಹತ್ತಾರು ಯೋಜನೆಯನ್ನು ರೂಪಿಸಬೇಕು ಎಂದು ತಿಳಿ​ಸಿ​ದ​ರು.

ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರಗೆ ಕೊರೋನಾ ಧೃಢ

ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆ ಹಾಗೂ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿಯವ​ರೇ ಅಧ್ಯಕ್ಷರಾಗಬೇಕು. ಆ ನಿಟ್ಟಿನಲ್ಲಿ ತಮ್ಮ ತಮ್ಮ ಗ್ರಾಮದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಚನ್ನಪ್ಪ ಮಳಗಿ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿ ಮತ್ತು ನಗರದಲ್ಲಿ ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ಬೆಳಸಬೇಕು. ನಿಮ್ಮ ನಿಮ್ಮ ಗ್ರಾಮದಲ್ಲಿ ಬಿಜೆಪಿ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿ​ಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ನಾಯಕ, ಗವಿಸಿದ್ದಪ್ಪ ಕುರಿ ಎಸ್‌ಟಿ ಮಂಡಲದ ಅಧ್ಯಕ್ಷ ಶ್ರೀಕಾಂತ ವನಬಳ್ಳಾರಿ, ರೈತ ಯುವ ಮೋರ್ಚಾ ಅಧ್ಯಕ್ಷರಾದ ಶಿವಪ್ಪ ಹತ್ತಿಮರದ, ಎಪಿಎಂಸಿ ಸದಸ್ಯರಾದ ಚಂದನಗೌಡ ವನಬಳ್ಳಾರಿ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇತರು ಇದ್ದರು.
 

click me!