ಎಸ್‌.ಎಂ.ಕೃಷ್ಣ ಭೇಟಿ ಆದ ನೂತನ ಶಾಸಕ ಮುನಿರತ್ನ

Kannadaprabha News   | Asianet News
Published : Nov 12, 2020, 07:39 AM IST
ಎಸ್‌.ಎಂ.ಕೃಷ್ಣ ಭೇಟಿ ಆದ ನೂತನ ಶಾಸಕ ಮುನಿರತ್ನ

ಸಾರಾಂಶ

ಸದಾಶಿವನಗರದಲ್ಲಿನ ಎಸ್‌.ಎಂ.ಕೃಷ್ಣ ನಿವಾಸಕ್ಕೆ ತೆರಳಿದ ಕೆಲಕಾಲ ಸಮಾಲೋಚನೆ ನಡೆಸಿದ ಮುನಿರತ್ನ| ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಎಸ್‌.ಎಂ.ಕೃಷ್ಣ| 

ಬೆಂಗಳೂರು(ನ.12): ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. 

ಸದಾಶಿವನಗರದಲ್ಲಿನ ಎಸ್‌.ಎಂ.ಕೃಷ್ಣ ನಿವಾಸಕ್ಕೆ ಬುಧವಾರ ತೆರಳಿದ ಮುನಿರತ್ನ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಎಸ್‌.ಎಂ.ಕೃಷ್ಣ, ದೇಶದಲ್ಲಿ ಬದಲಾವಣೆ ಆಗುತ್ತಿದೆ. ಕಾಂಗ್ರೆಸ್‌ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ. ಬಿಜೆಪಿ ತನ್ನ ಪ್ರಖರತೆಯ ವಿಸ್ತಾರ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಬ್ಬರು ರಾಜಋುಷಿ. ಅವರಿಗೆ ದೇಶವೇ ದೇವರು. ಅವರಿಗೆ ಯಾವ ಪ್ರಲೋಭಗಳೂ ಇಲ್ಲ. ಅವರು ಈ ದೇಶಕ್ಕೆ ಪ್ರಧಾನಿಯಾಗಿದ್ದು ನಮ್ಮೆಲ್ಲರ ಸೌಭಾಗ್ಯ. ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಆರ್‌ಆರ್‌ ನಗರ ಜನರ ಋಣ ತೀರಿಸುತ್ತೇನೆ: ಮುನಿರತ್ನ

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು