ಇಂದು ಗೋವಾದಲ್ಲಿ ಶಾಸಕಿ ಹೆಬ್ಬಾಳ್ಕರ್‌ ಪುತ್ರನ ಮದುವೆ: ಅದ್ಧೂರಿ ವಿವಾಹಕ್ಕೆ ಲೀಲಾ ಪ್ಯಾಲೇಸ್ ಸಜ್ಜು

Kannadaprabha News   | Asianet News
Published : Nov 27, 2020, 09:14 AM IST
ಇಂದು ಗೋವಾದಲ್ಲಿ ಶಾಸಕಿ ಹೆಬ್ಬಾಳ್ಕರ್‌ ಪುತ್ರನ ಮದುವೆ: ಅದ್ಧೂರಿ ವಿವಾಹಕ್ಕೆ ಲೀಲಾ ಪ್ಯಾಲೇಸ್ ಸಜ್ಜು

ಸಾರಾಂಶ

ಅದ್ಧೂರಿ ವಿವಾಹಕ್ಕೆ ಲೀಲಾ ಪ್ಯಾಲೇಸ್‌ನಲ್ಲಿ ಸಿದ್ಧತೆ| ಎರಡೂ ಕುಟುಂಬಗಳು ಮೂರು ದಿನಗಳ ಮೊದಲೇ ಗೋವಾಕ್ಕೆ ಬಂದಿಳಿದಿದ್ದು, ವಿವಾಹ ಪೂರ್ವ ಬುಧವಾರ ಮೆಹಂದಿ ಕಾರ್ಯಕ್ರಮ ನಡೆದಿದೆ| ಗುರುವಾರ ರಾತ್ರಿ ಹಳದಿ ಕಾರ್ಯಕ್ರಮ ನಡೆದಿದೆ| ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯಾತಿಗಣ್ಯರು|  

ಬೆಳಗಾವಿ(ನ.27):  ಕಾಂಗ್ರೆಸ್‌ ನಾಯಕಿ, ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಮತ್ತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಅವರ ಸಹೋದರ ಬಿ.ಕೆ.ಶಿವಕುಮಾರ್‌ ಅವರ ಪುತ್ರಿ ಡಾ.ಹಿತಾ ಅವರ ಅದ್ಧೂರಿ ವಿವಾಹ ಶುಕ್ರವಾರ ನಡೆಯಲಿದ್ದು, ಅದಕ್ಕಾಗಿ ಗೋವಾದ ಲೀಲಾ ಪ್ಯಾಲೇಸ್‌ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಎರಡೂ ಕುಟುಂಬಗಳು ಮೂರು ದಿನಗಳ ಮೊದಲೇ ಗೋವಾಕ್ಕೆ ಬಂದಿಳಿದಿದ್ದು, ವಿವಾಹ ಪೂರ್ವ ಬುಧವಾರ ಮೆಹಂದಿ ಕಾರ್ಯಕ್ರಮ ನಡೆದಿದೆ. ಗುರುವಾರ ರಾತ್ರಿ ಹಳದಿ ಕಾರ್ಯಕ್ರಮ ನಡೆದಿದೆ. ವಿವಾಹ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ದೂರಿ ವಿವಾಹ; ಯಾರೆಲ್ಲ ಬಂದಿದ್ರು? ಪೋಟೋಸ್

ಇವೆಲ್ಲದರ ನಡುವೆ ವಾಯುಮಾಲಿನ್ಯದ ಕಾರಣದಿಂದ ದೆಹಲಿ ತೊರೆಯುವಂತೆ ವೈದ್ಯರು ನೀಡಿದ ಸೂಚನೆ ಮೇರೆಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್‌ ಗಾಂಧಿ ಗೋವಾಕ್ಕೆ ಆಗಮಿಸಿದ್ದಾರೆ.

ಇಂದು(ಶುಕ್ರವಾರ) ನಡೆಯಲಿರುವ ವಿವಾಹ ಸಮಾರಂಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೇ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಈಶ್ವರ ಖಂಡ್ರೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕೋವಿಡ್‌-19 ಹಿನ್ನೆಲೆಯಲ್ಲಿ ಈ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಒಂದು ಸಾವಿರ ಗಣ್ಯರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
 

PREV
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!