ನಿನ್ನೆ ಮೂಡಿಗೆರೆ ತಾಲೂಕಿನ ಬಡವನದಿಡ್ಡೆ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆಗೆ ಹೋಗಿದ್ದ ಶಾಸಕ ಕುಮಾರಸ್ವಾಮಿ ಉದ್ಘಾಟನೆ ಬಳಿಕ ತಾನೂ ಓರ್ವ ಸ್ಫರ್ಧಾಳು ಎಂದು ಕೆಸರುಗದ್ದೆ ಓಟಕ್ಕೆ ನಿಂತಿದ್ದಾರೆ. ಮಕ್ಕಳು ಹಾಗೂ ದೊಡ್ಡವರು ಇಬ್ಬರ ಜೊತೆಗೂ ಸ್ಪರ್ಧೆಗೆ ನಿಂತ ಕುಮಾರಸ್ವಾಮಿ ನಾನು ಜನರ ಶಾಸಕ ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಕೆಸರುಗದ್ದೆಯಲ್ಲಿ ಎದ್ದು, ಬಿದ್ದು, ಓಡಿ ಸಂಭ್ರಮಿಸಿದ್ದಾರೆ.
ಮೂಡಿಗೆರೆ[ಆ.06]: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇವರು ಮಾಜಿ ಶಾಸಕರಾಗಿದ್ದಾಗಲು ಸುದ್ದಿಯಲ್ಲಿರುತ್ತಿದ್ದರು. ಈಗ ಹಾಲಿ ಶಾಸಕರಾಗಿಯೂ ಸುದ್ದಿಯಾಗ್ತಿದ್ದಾರೆ. ಆದ್ರೆ, ಕಾರಣಗಳು ಬೇರೆ-ಬೇರೆಯಷ್ಟೆ.
ನಿನ್ನೆ ಮೂಡಿಗೆರೆ ತಾಲೂಕಿನ ಬಡವನದಿಡ್ಡೆ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆಗೆ ಹೋಗಿದ್ದ ಶಾಸಕ ಕುಮಾರಸ್ವಾಮಿ ಉದ್ಘಾಟನೆ ಬಳಿಕ ತಾನೂ ಓರ್ವ ಸ್ಫರ್ಧಾಳು ಎಂದು ಕೆಸರುಗದ್ದೆ ಓಟಕ್ಕೆ ನಿಂತಿದ್ದಾರೆ. ಮಕ್ಕಳು ಹಾಗೂ ದೊಡ್ಡವರು ಇಬ್ಬರ ಜೊತೆಗೂ ಸ್ಪರ್ಧೆಗೆ ನಿಂತ ಕುಮಾರಸ್ವಾಮಿ ನಾನು ಜನರ ಶಾಸಕ ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಕೆಸರುಗದ್ದೆಯಲ್ಲಿ ಎದ್ದು, ಬಿದ್ದು, ಓಡಿ ಸಂಭ್ರಮಿಸಿದ್ದಾರೆ.
ಕೆಸರುಗದ್ದೆಯಲ್ಲಿ ಶಾಸಕರ ಓಟ ಕಂಡ ಸ್ಥಳಿಯರು ಕೂಡ ಅವರ ಜೊತೆ ಓಡಿದ್ದಾರೆ. ಶಾಸಕನೋರ್ವ ಶಾಸಕತ್ವದ ಹಮ್ಮು-ಬಿಮ್ಮನ್ನ ಮರೆತು ಗ್ರಾಮಸ್ಥರ ಜೊತೆ ಸಂಭ್ರಮಿಸಿರೋದನ್ನು ಕಂಡ ಸ್ಥಳಿಯರು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.