ಅದು ಎಲ್ಲಿಂದ ಪ್ರತ್ಯೇಕ ರಾಜ್ಯದ ಕೂಗು ಆರಂಭವಾಯಿತೋ ಗೊತ್ತಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ದೋಸ್ತಿ ಸರಕಾರದ ನಡುವಿನ ವಾಕ್ಸಮರದ ವೇದಿಕೆಯಾಗಿದೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಯನ್ನೇ ಮತ್ತೆ ಮತ್ತೆ ಉಲ್ಲೇಖ ಮಾಡಲಾಗುತ್ತಿದೆ.
ಚಿಕ್ಕಮಗಳೂರು (ಜು.31 ) ಪ್ರತ್ಯೇಕ ರಾಜ್ಯದ ಕೂಗು ಜೋರಾಗಲು ಸಿಎಂ ಕುಮಾರಸ್ವಾಮಿ ಮಾತು ಹಾಗೂ ನಡವಳಿಕೆಯೇ ಕಾರಣ. ಬಜೆಟ್ ನಲ್ಲಿ ಕೆಲವು ಜಿಲ್ಲೆಗಳಿಗೆ ಮಾತ್ರ ಆದ್ಯತೆ ನೀಡಿದ್ದರು. ಈ ಅಸಮತೋಲನ, ಆಕ್ರೋಶಕ್ಕೆ ಕಾರಣವಾಯಿತು ಎಂದು ಬಿಜೆಪಿ ನಾಯಕ, ಶಾಸಕ ಸಿಟಿ ರವಿ ಹೇಳಿದ್ದಾರೆ.
ಕುಮಾರಸ್ವಾಮಿ ಹೇಳುವ ಮಾತನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾರೆ ಅವರು 37 ಜನ ಶಾಸಕರಿಗೆ ಮಾತ್ರ ಸಿಎಂ ಅಷ್ಟೆ. 224 ಜನರನ್ನೂ ಪ್ರತಿನಿಧಿಸಲು ಆಗಲ್ಲ. ಅವರಿಗೆ ಸಮಚಿತ್ತ, ಸಮದೃಷ್ಟಿ ಇಲ್ಲದೆ ಇರೋದು ಇದಕ್ಕೆ ಕಾರಣ. ಅವರ ತಪ್ಪನ್ನ ಮುಚ್ಚಿಕೊಳ್ಳಲು ಮಾಧ್ಯಮದವರ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಮನೋಭಾವವೇ ಪ್ರತ್ಯೇಕ ರಾಜ್ಯದ ಕೂಗು ಜೋರಾಗಲು ಕಾರಣ ಎಂದು ಹೇಳಿದ್ದಾರೆ.
ಬಿಜೆಪಿ ಪ್ರತ್ಯೇಕ ರಾಜ್ಯದ ಪರ ಇಲ್ಲ. ನಮ್ಮದ್ದು ಅಖಂಡ, ಸುವರ್ಣ ಕರ್ನಾಟಕದ ಬದ್ಧತೆ. ರಾಜ್ಯ ಒಡೆಯಲು ನಾವು ಅವಕಾಶ ನೀಡಲ್ಲ. ಸಿಎಂ ಸಮಚಿತ್ತ, ಪೂರ್ವಾ ಗ್ರಹ ಪೀಡಿತರಾಗಿದ್ದಾಗ ಮಾತ್ರ ಈ ರೀತಿ ಹೇಳಿಕೆಗಳು ಹೊರಬರುತ್ತದೆ. ಅವರ ಹೇಳಿಕೆ ಉದ್ದೇಶಪೂರ್ವಕವಾಗಿಯೇ ಇದೆ,ಇದ್ರಲ್ಲಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ. ಇದೇ ಕುಮಾರಸ್ವಾಮಿ ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಪ್ರಚಾರ ಪಡೆದುಕೊಳ್ಳುವ ಯತ್ನ ಮಾಡಿ ವಿಫಲರಾದರು ಎಂದು ಸಿಟಿ ರವಿ ಹೇಳಿದ್ದಾರೆ.