ಅಕ್ರಮ ಮರಳು ದಂಧೆ: 'ಶಾಸಕರೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಿದೆ'

By Suvarna News  |  First Published Jan 25, 2021, 3:31 PM IST

ಅಧಿಕಾರಿಗಳನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಡಿಸಿಎಂ ಲಕ್ಷ್ಮಣ ಸವದಿ| ರಾಯಚೂರಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಘಟನೆ| ? ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ಆರ್‌ಟಿಓ ಅಧಿಕಾರಿ ಅಮಾನತ್ತು ಮಾಡುವ ಎಚ್ಚರಿಕೆ ನೀಡಿದ ಸವದಿ| 


ರಾಯಚೂರು(ಜ.25): ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಅರೋಪ ಪ್ರತ್ಯಾರೋಪ ಮಾಡಿರುವ ಘಟನೆ ಇಂದು(ಸೋಮವಾರ) ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದಿದೆ. 

ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ದದ್ದಲ್ ಬಸನಗೌಡ ಹಾಗೂ ಶಾಸಕ ಕೆ. ಶಿವನಗೌಡ ಆರೋಪ, ಪ್ರತ್ಯಾರೋಪಗಳನ್ನ ಮಾಡಿದ್ದಾರೆ. ಶಾಸಕರು ಲಂಚಕೊಟ್ಟು ಅಧಿಕಾರಿಗಳ ಹತ್ತಿರ ಕೆಲಸವನ್ನ ಮಾಡಿಸಿಕೊಳ್ಳಬೇಕಿದೆ ಎಂದು ಶಾಸಕ ಶಿವನಗೌಡ ಆರೋಪಿದ್ದಾರೆ.

Latest Videos

undefined

ಮಸ್ಕಿ: ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌, ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರ ದುರ್ಮರಣ

ಇನ್ನು ಜಿಲ್ಲೆಯಲಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ ಶಾಸಕ ಬಸನಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನ ತಡೆಯಬೇಕಿರುವ ಜಿಲ್ಲಾಡಳಿತ ಕೂಡ ಸ್ಪಂದಿಸುತ್ತಿಲ್ಲ ಜಿಲ್ಲೆಯಲ್ಲಿ ಕೆಲಸಗಳು ಆಗುತ್ತಿಲ್ಲ, ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ, ದೊಡ್ಡ ಗಾಡಿಗಳಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಗೆ ಬರುವ ಅನುದಾನವೇ ಕಡಿಮೆಯಿದೆ. ಹತ್ತಿ ಹೊತ್ತು ಬರುವ ರೈತರ ಗಾಡಿಗಳಿಗೆ ದಂಡ ಹಾಕುತ್ತಾರೆ. ಮರಳು ಲಾರಿಗಳನ್ನ ಹಾಗೆಯೇ ಬಿಡುತ್ತಾರೆ ಶಾಸಕ ಬಸನಗೌಡ ದದ್ದಲ ಆರೋಪಿಸಿದ್ದಾರೆ. 

ಇದನ್ನೆಲ್ಲ ಗಮನಿಸಿದ ಡಿಸಿಎಂ ಲಕ್ಷ್ಮಣ ಸವದಿ ಆರ್‌ಟಿಓ ಅಧಿಕಾರಿಗಳನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ರಮದಲ್ಲಿ ನೀವು ಶಾಮಿಲಾಗಿದ್ದಾರಾ? ಯಾಕೆ ತಡೆಯುತ್ತಿಲ್ಲ? ಅಕ್ರಮಕ್ಕೆ ಬ್ರೇಕ್ ಬೀಳದಿದ್ದರೆ ಆರ್‌ಟಿಓ ಅಧಿಕಾರಿಯನ್ನ ಅಮಾನತ್ತು ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.
 

click me!