ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ನಿಧನರಾದ ಹಿನ್ನೆಲೆ, ಅವರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ| ಕಲಬುರಗಿ ಆಳಂದ ತಾಲೂಕಿನ ನೀರಗುಡಿ ಗ್ರಾಮದಲ್ಲಿ ಆಧುನಿಕ ಶ್ರವಣಕುಮಾರ ಎನಿಸಿಕೊಂಡ ದಶರಥ ಪಾತ್ರೆ| ಮಹಾರಾಷ್ಟ್ರದ ಪಂಡರಾಪೂರದ ಶಿಲ್ಪಿಗಳಿಂದ ಮೂರ್ತಿ ಕೆತ್ತನೆ|
ಕಲಬುರಗಿ(ಜ.25): ತಂದೆ-ತಾಯಿ ನೆನಪಿಗಾಗಿ ಪುತ್ರನೋರ್ವ ಗುಡಿ ಕಟ್ಟಿಸಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಆಳಂದ ತಾಲೂಕಿನ ನೀರಗುಡಿ ಗ್ರಾಮದಲ್ಲಿ ಆಧುನಿಕ ಶ್ರವಣಕುಮಾರ ಎನಿಸಿಕೊಂಡಿದ್ದಾರೆ.
ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ನಿಧನರಾದ ಹಿನ್ನೆಲೆ, ಅವರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಂದಾಜು 2 ಲಕ್ಷ ರು. ಖರ್ಚಿನಲ್ಲಿ ಹೆತ್ತವರ ಮೂರ್ತಿ ಪ್ರತಿಷ್ಠಾಪಿಸಿದ್ದು, ಗ್ರಾಮಸ್ಥರೆಲ್ಲರೂ ಪಾಲ್ಗೊಂಡು ಜನ್ಮದಾತರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿದ ದಶರಥ ಪಾತ್ರೆ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಹಕ್ಕಿ ಅಲ್ಲಾಡುವ ಮರಕ್ಕೆ ಹೆದರಲ್ಲ: ಸಿಎಂ ನಡೆಗೆ ವಿಜಯೇಂದ್ರ ಸಮರ್ಥನೆ
ಮೃತ ದಂಪತಿಗೆ ಮೂವರು ಗಂಡು ಮಕ್ಕಳು ಇದ್ದಾರೆ. ಪಾಲಕರ ಪುತ್ಥಳಿಗಳ ಸ್ಥಾಪನೆಗಾಗಿ ದಶರಥ 2 ಲಕ್ಷ ರು ವೆಚ್ಚ ಮಾಡಿದ್ದಾನೆ. ಜಗನ್ನಾಥ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ದಶರಥ ಪಾತ್ರೆ ಗ್ರಾಪಂ ಪಿಡಿಒ ಆಗಿದ್ದು, ಧನರಾಜ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಂಪತಿ ತಮ್ಮ ಮಕ್ಕಳಿಗೆ ಉನ್ನತ ಸ್ಥಾನಮಾನ ದೊರೆಯುವಂತೆ ನೋಡಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ಅವರ ಸದಾಕಾಲ ನೆನಪಿಗಾಗಿ ತಂದೆ-ತಾಯಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ಸುಮಾರು ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರ ಪುಣ್ಯ ಸ್ಮರಣಾರ್ಥವಾಗಿ ಇಂದು ಗ್ರಾಮದಲ್ಲಿ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಹಾರಾಷ್ಟ್ರದ ಪಂಡರಾಪೂರದ ಶಿಲ್ಪಿಗಳಿಂದ ಮೂರ್ತಿ ಕೆತ್ತಿಸಿದ್ದ ಪುತ್ರ ದಶರಥ ಪಾತ್ರೆ, ತಂದೆ-ತಾಯಿಯ ನೆನಪಿಗಾಗಿ ಗುಡಿ ಕಟ್ಟಿಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ತನ್ನ ಈ ವಿಶಿಷ್ಟಕೆಲಸದಿಂದಾಗಿ ಜನಮನ ಸೆಳೆದಿದ್ದಾನೆ.