Hampi ಸೊಬಗು ಈಗ ಗಂಗಾವತಿಗೆ: ಶಾಸಕ ಜನಾರ್ದನ ರೆಡ್ಡಿ ಘೋಷಿಸಿದ ಹೊಸ ಯೋಜನೆ ಏನು?

Published : Jun 30, 2026, 06:29 PM IST
Janardhan Reddy

ಸಾರಾಂಶ

Gangavathi: ಕನಕಗಿರಿ ರಸ್ತೆಯ ಮಾರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಐತಿಹಾಸಿಕ ಹಂಪೆಯ ಸ್ಮಾರಕಗಳ ಮಾದರಿಯಲ್ಲಿ ಬಸ್ ನಿಲ್ದಾಣ ಚಿತ್ರಣಗೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ (ಜೂ.30): ನಗರದ ಕನಕಗಿರಿ ರಸ್ತೆಯ ಮಾರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಐತಿಹಾಸಿಕ ಹಂಪೆಯ ಸ್ಮಾರಕಗಳ ಮಾದರಿಯಲ್ಲಿ ಬಸ್ ನಿಲ್ದಾಣ ಚಿತ್ರಣಗೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕಳೆದ ಎರಡು ತಿಂಗಳ ಹಿಂದೆ ಬಸ್ ನಿಲ್ದಾಣದ ಶಂಕು ಸ್ಥಾಪನೆ ನೆರವೇರಿತ್ತು. ಈಗ ಭರದಿಂದ ಕಾಮಗಾರಿ ಪ್ರಾರಂಭಗೊಂಡಿದೆ. ಇನ್ನು 8-9 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದರು. ಬಸ್ ನಿಲ್ದಾಣ ಕಾಮಗಾರಿಗೆ 18 ಕೋಟಿ ರು ಅನುದಾನ ಮಂಜೂರಾಗಿದ್ದು, ಅವಶ್ಯಕತೆ ಇದ್ದರೆ ಇನ್ನು ಸರಕಾರದಿಂದ ಹಣ ಬಿಡುಗಡೆ ಮಾಡಿಸುವುದಾಗಿ ಹೇಳಿದರು.

ಕಿಷ್ಕಿಂದೆ ಹೆಸರು

ಗಂಗಾವತಿ ನಗರ ಐತಿಹಾಸಿಕ ಪ್ರಸಿದ್ಧ ಹೊಂದಿದೆ. ತಾಲೂಕಿನ ಅಂಜನಾದ್ರಿ, ಕಿಷ್ಕಿಂಧೆ ಹೆಸರು ಪಡೆದಿದ್ದರಿಂದ ಕಿಷ್ಕಿಂದೆ ಹೆಸರು ಬಸ್ ನಿಲ್ದಾಣಕ್ಕೆ ಕರೆಯಲಾಗುತ್ತದೆ ಎಂದರು. ಈಗಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಐತಿಹಾಸಿಕ ಸ್ಥಳ ಮತ್ತು ಸ್ಮಾರಕಗಳ ಮಾದರಿಯಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ತಿರುಪತಿ ರೈಲ್ವೆ ನಿಲ್ದಾಣವು ಸಹ ಐತಿಹಾಸಿಕ ಮಾದರಿಯಲ್ಲಿದ್ದು, ಅದೇ ರೀತಿಯಲ್ಲಿ ಗಂಗಾವತಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.

ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಪಗೌಡ, ಅಭಿಯಂತರ ಹೆಗಡೆ ಹೊನ್ನಾವರ, ಯಮನೂರು ಚೌಡ್ಕಿ, ವಿರೇಶ ಬಲಕುಂದಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

PREV
Read more Articles on
click me!

Recommended Stories

ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್‌ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ
Bengaluru: 3 ಸಾವಿರ ಎಕರೆಯ ಕಾರಂತ ಬಡಾವಣೆ; 3200 ರೈತರಿಗೆ ಹಂಚಿಕೆಯಾದ BDA ನಿವೇಶನ