ಸಂಸದೆ ಸುಮಲತಾಗೆ ತಿಳುವಳಿಕೆ ಇಲ್ಲವೆಂದ ಮುಖಂಡ

By Kannadaprabha News  |  First Published Nov 19, 2020, 11:13 AM IST

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ಗೆ ತಿಳುವಳಿಕೆ ಇಲ್ಲವೆಂದು ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದಾರೆ.


ಭಾರತೀನಗರ (ನ.19):  ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆ ರಾಜ್ಯದ ವಿಷಯವಾಗಿದೆ. ಅದನ್ನು ಸುಮಲತಾ ಅಂಬರೀಶ್‌ ಅರ್ಥ ಮಾಡಿಕೊಳ್ಳಲಿ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ಇಲ್ಲಿಗೆ ಸಮೀಪದ ಅಂಬರಹಳ್ಳಿ ಗ್ರಾಮಗಳಲ್ಲಿ 15 ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಸಂಸದೆ ಸುಮಲತಾ ಅವರು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಶಾಸಕ ಡಿ.ಸಿ. ತಮ್ಮಣ್ಣ ಅವರನ್ನು ಟೀಕಿಸಿದ್ದರು.

Tap to resize

Latest Videos

ಸುಮಲತಾ-ಪ್ರತಾಪ್ ಸಿಂಹ ವಾರ್ : ನಿಖಿಲ್ ಏನಂದ್ರು..? .

ಈ ಪ್ರಶ್ನೆಗೆ ಉತ್ತರಿಸಿದ ಶಾಸಕ ಡಿ.ಸಿ. ತಮ್ಮಣ್ಣ ಅವರು, ಸಂಸದೆ ಸುಮಲತಾ ಅವರಿಗೆ ತಿಳಿವಳಿಕೆ ಕೊರತೆ ಇದೆ. ಯಾರೋ ಅವರಿಗೆ ತಪ್ಪು ತಿಳಿವಳಿಕೆ ನೀಡುತ್ತಿದ್ದಾರೆ. ನಾನು 20 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ಇನ್ನೊಬ್ಬರನ್ನು ನೋಯಿಸಬೇಕು. ಟೀಕಿಸಬೇಕು ಎಂಬುವುದು ನನ್ನ ಸ್ವಭಾವವಲ್ಲ ಎಂದರು.

ಗ್ರಾಮೀಣ ಸಡಕ್‌ ಯೋಜನೆ ರಾಜ್ಯದ ವಿಷಯವಾಗಿದೆ. ಕೇಂದ್ರದಿಂದ ರಾಜ್ಯಸರ್ಕಾರಕ್ಕೆ ಹಲವಾರು ಅನುದಾನಗಳನ್ನು ನೀಡಬಹುದು. ಗ್ರಾಮ ಸಡಕ್‌ ಯೋಜನೆಯ ಅನುದಾನವನ್ನು 20 ವರ್ಷಗಳಿಂದ ಯಾವ ಸಂಸದರು ನನ್ನದೆಂದು ಹೇಳಿಲ್ಲ. ಗ್ರಾಮ ಸಡಕ್‌ ಯೋಜನೆಯ ಅನುದಾನಕ್ಕೆ ಮುಖ್ಯ ಕಾರಣಕರ್ತರು ರಾಜ್ಯಸರ್ಕಾರ. ಹಾಗಾಗಿ ಯಾವ ಶಾಸಕರಿಗೆ ಎಷ್ಟುಅನುದಾನ ನೀಡಬೇಕೆಂಬುವುದನ್ನು ರಾಜ್ಯಸರ್ಕಾರ ನಿರ್ಧಾರ ಮಾಡುತ್ತದೆ ಎಂದರು.

ನಾಮಫಲಕ ಹಾಕಬೇಕಾದರೆ ಗ್ರಾಮಪಂಚಾಯಿ, ತಾಲೂಕು ಪಂಚಾಯಿತಿ, ಜಿಲ್ಲಾಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇವರನ್ನೂ ಶಿಷ್ಟಾಚಾರದ ಪ್ರಕಾರ ಕರೆಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಎಇಇ ಮಹದೇವಪ್ಪ, ಎಇ ಸುರೇಶ, ಹನುಮಂತು, ರಮೇಶ್‌, ಜೆಡಿಎಸ್‌ ತಾಲ್ಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗುರುದೇವರಹಳ್ಳಿ ಅರವಿಂದ್‌, ಅಂಬರಹಳ್ಳಿ ಮನು, ಗಾಯಿತ್ರಿ, ರಾಮ, ಸ್ವಾಮಿ, ಪುಟ್ಟಸ್ವಾಮಿ, ತಾಯಮ್ಮ, ಚೌಡ, ಚಂದ್ರ, ಸುರೇಶ, ಶೇಖರ್‌, ಶಿವಮಾದು ಇತರರಿದ್ದರು.

click me!