ಜೆಡಿಎಸ್‌ಗೆ ದೊರೆತ ಅಧಿಕಾರ : ಸುಲಭವಾಗಿ ಸಿಕ್ಕ ಗೆಲುವು

By Kannadaprabha NewsFirst Published Nov 19, 2020, 10:35 AM IST
Highlights

ಜೆಡಿಎಸ್‌ಗೆ ಸುಲಭವಾಗಿ ಗೆಲುವು ಒಲಿದಿದೆ. ಅಧಿಕಾರವೂ ದೊರೆತಿದೆ. ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. 

ಪಿರಿಯಾಪಟ್ಟಣ (ನ.19): ಪಿರಿಯಾಪಟ್ಟಣ ಟಿಎಪಿಸಿಎಂಎಸ್‌ ನ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ನಿರ್ದೇಶಕ ಎಸ್‌.ವಿ. ತಿಮ್ಮೇಗೌಡ ಮತ್ತು ಉಪಾಧ್ಯಕ್ಷರಾಗಿ ಸರ್ವಮಂಗಳ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಟಿಎಪಿಸಿಎಂಎಸ್‌ ಕಚೇರಿಯಲ್ಲಿ ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಘೋಷಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌. ರಾಮು, ಕೆ. ಕುಮಾರ, ಪಿ.ವಿ. ಜಲೇಂದ್ರ, ಎಚ್‌.ಡಿ. ವಿಜಯ, ಮುಕೇಶ್‌ ಕುಮಾರ್‌, ಜವರಪ್ಪ, ಡಿ.ಎ. ನಾಗೇಂದ್ರ, ಸುನಿತಾ, ತಿಮ್ಮನಾಯಕ, ಪಿ.ಎಂ. ಮಹದೇವ ಮತ್ತು ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌. ರವಿ, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು. ಸಹಾಯಕ ಚುನಾವಣಾಧಿಕಾರಿ ಪ್ರಸಾದ್‌ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲಾವತಿ ಇದ್ದರು.

ಚುನಾವಣೆಯಲ್ಲಿ ಬರೀ ಬಿಜೆಪಿಗೆ ಗೆಲುವು: ಇದೆಲ್ಲ ಇವಿಎಂನ ಕರಾಮತ್ತು ಎಂದ ಮಾಜಿ ಸಚಿವ ...

ನ .7 ರಂದು ನಡೆದಿದ್ದ ಚುನಾವಣೆಯಲ್ಲಿ ಒಟ್ಟು ಹನ್ನೆರಡು ಸ್ಥಾನಗಳಲ್ಲಿ ಹನ್ನೊಂದು ಸ್ಥಾನಗಳು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗುವ ಮೂಲಕ ವಿಜಯ ಪತಾಕೆ ಹಾರಿಸಿದ್ದರು. ಕಾಂಗ್ರೆಸ್‌ ಬೆಂಬಲಿತ ಕೇವಲ ಒಬ್ಬ ಸದಸ್ಯ ಆಯ್ಕೆಯಾಗುವ ಮೂಲಕ ಭಾರಿ ಮುಖಭಂಗ ಅನುಭವಿಸಿತ್ತು. ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್‌ ನ ಹಿಡಿತದಲ್ಲಿದ್ದ ಟಿಎಪಿಸಿಎಂಎಸ್‌ ನ ಆಡಳಿತ ಇದೀಗ ಜೆಡಿಎಸ್‌ ಪಾಲಾಗುವ ಮೂಲಕ ಕಾಂಗ್ರೆಸ್‌ ಈ ಬಾರಿ ನಿರಾಸೆ ಅನುಭವಿಸಿದೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಕೆ.ಮಹದೇವ್‌ ಮಾತನಾಡಿ, ಕಳೆದ 15 ವರ್ಷಗಳಿಂದ ವ್ಯವಹಾರಿಕವಾಗಿ ಕುಂಠಿತಗೊಂಡಿದ್ದ ಟಿಎಪಿಸಿಎಂಎಸ್‌ ನ ವಹಿವಾಟು ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ಮುನ್ನಡೆಯಲಿ ಎಂದು ಶುಭ ಕೋರಿದರು. ಹಿಂದಿನ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಒಪ್ಪದ ಷೇರುದಾರರು ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದು ಜನರ ನಿರೀಕ್ಷೆಗಳಿಗೆ ಚ್ಯುತಿ ಬಾರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ನೂತನ ನಿರ್ದೇಶಕರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮೈಮುಲ್‌ ನಿರ್ದೇಶಕ ಪಿ.ಎಂ. ಪ್ರಸನ್ನ, ಪುರಸಭೆ ಅಧ್ಯಕ್ಷ ಮಂಜುನಾಥ್‌ ಸಿಂಗ್‌, ಸದಸ್ಯರಾದ ವಿನೋದ್‌, ನಿರಂಜನ್‌, ಮಹೇಶ್‌, ಪಿ.ಸಿ. ಕೃಷ್ಣ, ಮುಖಂಡ ರಘುನಾಥ, ಅಣ್ಣಯ್ಯಶೆಟ್ಟಿ, ಲಕ್ಷ್ಮಣ, ವಿದ್ಯಾಶಂಕರ್‌, ಕೃಷ್ಣೇಗೌಡ, ಶಿವಣ್ಣ, ಅಪೂರ್ವಮೋಹನ…, ರವಿ ಇದ್ದರು.

click me!